- ಅತಿ ಹೆಚ್ಚು ಪಾಸ್‌ಪೋರ್ಟ್‌ಗಳ ವಿತರಣೆಯಲ್ಲಿ ಬೆಂಗಳೂರು ಮೊದಲ ಸ್ಥಾನ
- 2021ರಲ್ಲಿ ಪಾಸ್‌ಪೋರ್ಟ್ ಪಡೆಯುವುದು ಕಷ್ಟದ ಕೆಲಸವಾಗಿತ್ತು
ಬೆಂಗಳೂರಿನಲ್ಲಿ ಪಾಸ್‌ಪೋರ್ಟ್‌ಗಳನ್ನು ಮಾಡಿಸುವವರ ಸಂಖ್ಯೆ ಹೆಚ್ಚಾಗಿದೆ. ನಗರದ ರಿಜನಲ್ ಪಾಸ್‌ಪೋರ್ಟ್ ಆಫೀಸ್ ಮಾರ್ಚ್ ತಿಂಗಳಲ್ಲಿ ಬರೋಬ್ಬರಿ 79,027 ಪಾಸ್‌ಪೋರ್ಟ್‌ಗಳನ್ನು ವಿತರಿಸಿದೆ.
ರಾಜ್ಯದಲ್ಲಿ ಮಾರ್ಚ್ ತಿಂಗಳಿನಲ್ಲಿ ಅತಿ ಹೆಚ್ಚು ಪಾಸ್‌ಪೋರ್ಟ್‌ಗಳನ್ನು ಬೆಂಗಳೂರಿನ ಪಾಸ್‌ಪೋರ್ಟ್ ಸೇವಾ ಕೇಂದ್ರಗಳು (ಪಿಎಸ್‌ಕೆ) ನೀಡಿದ್ದು, ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಮಂಗಳೂರು, ಹುಬ್ಬಳ್ಳಿ, ಕಲಬುರಗಿ ಹಾಗೂ ಮೈಸೂರು ಇದೆ.
ಮಂಗಳೂರಿನಲ್ಲಿ ಪಾಸ್‌ಪೋರ್ಟ್ ಮಾಡಿಸುವವರ ಸಂಖ್ಯೆ ಗಣನೀಯ ಏರಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ ವಿತರಿಸಿದ 79,027 ಹೊಸ ಪಾಸ್‌ಪೋರ್ಟ್‌ಗಳನ್ನು ಮುದ್ರಿಸಲಾಗಿದೆ ಮತ್ತು ನವೀಕರಣ ಮಾಡಲಾಗಿದೆ.
ಈ ಸುದ್ದಿ ಓದಿದ್ದೀರಾ? 2023ರ ವಿಧಾನಸಭಾ ಚುನಾವಣೆ | ಮತದಾರರ ಓಲೈಕೆಗೆ ‘ಉಚಿತ’ಗಳ ಸುರಿಮಳೆ; ಇವು ಕೇವಲ ಭರವಸೆಗಳೇ?
ದೇಶದಲ್ಲಿ ಕೋವಿಡ್ ಇದ್ದ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಪ್ರಯಾಣ ನಿಷೇಧದಿಂದಾಗಿ ಪಾಸ್‌ಪೋರ್ಟ್ ಅರ್ಜಿದಾರರ ಸಂಖ್ಯೆ ಕುಸಿದಿತ್ತು. ಈಗ ಹೊಸ ಅರ್ಜಿಗಳು ಮತ್ತು ಪಾಸ್‌ಪೋರ್ಟ್‌ಗಳ ನವೀಕರಣಕ್ಕಾಗಿ ಪಿಎಸ್‌ಕೆಗಳಲ್ಲಿ ಅರ್ಜಿಗಳು ಹೆಚ್ಚಾಗಿವೆ.
2021ರಲ್ಲಿ ಪಾಸ್‌ಪೋರ್ಟ್ ಪಡೆಯುವುದು ಕಷ್ಟದ ಕೆಲಸವಾಗಿತ್ತು. ಈಗ ಹೊಸ ಪಾಸ್‌ಪೋರ್ಟ್‌ಗಳು ಮತ್ತು ಪೊಲೀಸ್-ಕ್ಲಿಯರೆನ್ಸ್ ಪ್ರಮಾಣ ಪತ್ರಗಳ ಅಪಾಯಿಂಟ್‌ಮೆಂಟ್‌ಗಳು ಒಂದು ವಾರ ಅಥವಾ ಎರಡು ವಾರಗಳಲ್ಲಿ ಸಿಗುತ್ತಿದೆ.