ತಾಯಿಯ ತ್ಯಾಗ ಮತ್ತು ಪ್ರೀತಿಯನ್ನಷ್ಟೇ ಅಲ್ಲದೆ ನ್ಯಾಯ, ಅಧಿಕಾರ ಮತ್ತು ನಿಜವಾದ ಒಡೆತನದ ಅರ್ಥವನ್ನು ತಿಳಿಸುವ ಹಾಗೂ ತಾಯಿ ಪ್ರೀತಿಗೆ ಅಗ್ನಿಪರೀಕ್ಷೆ ತಂದೊಡ್ಡುವ ʼಸುಣ್ಣದ ಸುತ್ತುʼ ಬೆಂಗಳೂರಿನ ಕಲಾಗ್ರಾಮ ಮಲ್ಲತಹಳ್ಳಿಯಲ್ಲಿ ಇದೇ ಮಾರ್ಚ್ 6ರ ಸಂಜೆ 7ಕ್ಕೆ ಪ್ರದರ್ಶನಗೊಳ್ಳಲಿದೆ.
ಈ ನಾಟಕದ ಮೂಲ ಕಥೆಯು ಜರ್ಮನ್‌ನ ಚಿತ್ರಕಥೆಗಾರ ಬರ್ಟೋಲ್ಟ್ ಬ್ರೆಕ್ಟ್ ಅವರದ್ದಾಗಿದ್ದು, ಹೆಚ್ ಎಸ್ ವೆಂಕಟೇಶ್ ಮೂರ್ತಿಯವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ರಂಗ ನಿರ್ದೇಶಕ ಹೇಮಂತ್ ಕುಮಾರ್ ನಿರ್ದೇಶನ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಪ್ರಿಯತಮೆಗೆ ಚೂರಿಯಿಂದ ಇರಿದು ತಾನು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿ
ಹೆಜ್ಜೆ ಥಿಯೇಟರ್ ತಂಡವು ಎಲ್ಲರನ್ನೂ ಆಹ್ವಾನಿಸುತ್ತಿದ್ದು, ಕಲಾಪ್ರೇಮಿಗಳು, ಆಸಕ್ತರು ಮಾರ್ಚ್ 06ರಂದು ಕಲಾಗ್ರಾಮಕ್ಕೆ ಬಂದು ಕಲಾವಿದರನ್ನು ಪ್ರೋತ್ಸಾಹಿಸುವುದರ ಜತೆಗೆ ಮನರಂಜನೆಯನ್ನು ಸವಿಯಲು, ನೀವೂ ಬನ್ನಿ ನಮ್ಮವರೆಲ್ಲರನ್ನೂ ಕರೆತನ್ನಿ ಎಂದು ತಿಳಿಸಿದೆ. ಸುತ್ತದೆ.
ವಿಶೇಷ ಸೂಚನೆ
ಬುಕ್ ಮೈ ಶೋ(BOOK MY SHOW)ನಲ್ಲಿ ಟಿಕೆಟ್ ಲಭ್ಯವಿದ್ದು, ಆಸಕ್ತರು ಮುಂಗಡವಾಗಿ ತಮ್ಮ ಟಿಕೆಟ್ ಭರ್ತಿಮಾಡಿಕೊಳ್ಳಬಹುದು, ಅಲ್ಲದೆ ಪ್ರದರ್ಶನ ನಡೆಯುವ ದಿನವೇ ಕಲಾಗ್ರಾಮದಲ್ಲಿ ಟಿಕೆಟ್ ಖರೀದಿಮಾಡಿಕೊಳ್ಳಬಹುದು ಎಂದು ತಿಳಿಸಿದೆ.
