ಬಂಟ್ವಾಳ | ಕಾರಾಜೆಯಲ್ಲಿ ಯಶಸ್ವಿಯಾಗಿ ನಡೆದ ಸಾರ್ವಜನಿಕರ ಆರೋಗ್ಯ ಮತ್ತು ಕಣ್ಣಿನ ತಪಾಸಣಾ ಶಿಬಿರ

Date:

Advertisements

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಕಾರಾಜೆಯಲ್ಲಿ ಸ್ಚಚ್ಛತಾ ಅಭಿಯಾನ ಕಾರಾಜೆ, ರೋಟರಿ ಕ್ಲಬ್ ಮೊಡಂಕಾಪು ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಾರ್ವಜನಿಕರ ಆರೋಗ್ಯ ಮತ್ತು ಕಣ್ಣಿನ ತಪಾಸಣಾ ಶಿಬಿರವು ಯಶಸ್ವಿಯಾಗಿ ನೆರವೇರಿತು.

ಯೆನೆಪೋಯ ಮಹಾವಿದ್ಯಾಲಯ ಆಸ್ಪತ್ರೆ, ನರಿಂಗಾಣದಲ್ಲಿರುವ ಹೋಮಿಯೋಪತಿ ವಿದ್ಯಾಲಯ, ಯೆನೆಪೋಯ ಆಯುರ್ವೇದಿಕ್ ವಿದ್ಯಾಲಯ ಹಾಗೂ ಪಡೀಲ್‌ನ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸಿಬ್ಬಂದಿಗಳು ಕೂಡ ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿದ್ದರು.

ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ಹಮ್ಮಿಕೊಂಡ ಈ ಆರೋಗ್ಯ ಶಿಬಿರದ ಪ್ರಯೋಜನವನ್ನು 300ಕ್ಕೂ ಅಧಿಕ ಮಂದಿ ಸಾರ್ವಜನಿಕರು ಆರೋಗ್ಯ ತಪಾಸಣೆಯ ಪ್ರಯೋಜನವನ್ನು ಪಡೆದುಕೊಂಡರು.

Advertisements
1002892701

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಜನಪ್ರಿಯ ಆಸ್ಪತ್ರೆಯ ವೈದ್ಯ ಹಾಗೂ ಸಿಇಓ ಡಾ. ಕಿರಾಶ್ ಪರ್ತಿಪ್ಪಾಡಿ, “ಹಳ್ಳಿಯಲ್ಲಿ ಜನರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ರೀತಿಯ ತಪಾಸಣಾ ಶಿಬಿರ ಹಮ್ಮಿಕೊಂಡಿರುವುದು ಒಳ್ಳೆಯ ಬೆಳವಣಿಗೆ. ಆರೋಗ್ಯ ಇಲ್ಲದಿದ್ದರೆ ಯಾವುದೂ ಇಲ್ಲ. ‌ಗ್ರಾಮದ ಜನರಲ್ಲಿ ಆರೋಗ್ಯದ ಬಗ್ಗೆ ನಿಗಾ ವಹಿಸುವ ಸಲುವಾಗಿ ಗ್ರಾಮದ ಯುವಕರು ಸೇರಿಕೊಂಡು ಹಿರಿಯರ ಮಾರ್ಗದರ್ಶನ ಪಡೆದು ಈ ರೀತಿಯಲ್ಲಿ ಶಿಬಿರ ಹಮ್ಮಿಕೊಂಡಿರುವುದು ಮಾದರಿ.‌ ಇದು ಅನುಕರಣೀಯ” ಎಂದು ತಿಳಿಸಿದರು.

1002892625

ಉದ್ಘಾಟನಾ ಸಮಾರಂಭದಲ್ಲಿ ರೋಟರಿ ಕ್ಲಬ್ ಮೊಡಂಕಾಪು ಘಟಕದ ಅಧ್ಯಕ್ಷರಾದ ಅಲೆಕ್ಸಾಂಡರ್ ಲೋಬೋ, ಸಜೀಪಮೂಡ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಫೌಝಿಯಾ ಮಾತನಾಡಿದರು.

ತಪಾಸಣೆ ನಡೆಸಿದವರ ಪೈಕಿ 15ಕ್ಕೂ ಹೆಚ್ಚು ಮಂದಿಗೆ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲು ಸೂಚಿಸಲಾಯಿತು.‌ ಇದರ ಜವಾಬ್ದಾರಿಯನ್ನು ಸ್ಥಳೀಯ ಆಶಾ ಕಾರ್ಯಕರ್ತೆಗೆ ನೀಡಲಾಯಿತು. ಶಿಬಿರದಲ್ಲಿ ಕಣ್ಣಿನ ತಪಾಸಣೆ ನಡೆಸಿದ ಬಳಿಕ 190 ಮಂದಿಗೆ ಉಚಿತವಾಗಿ ಕನ್ನಡಕ ವಿತರಣೆ ಮಾಡಲಾಯಿತು.

1002892634

ಸಮಾರಂಭದಲ್ಲಿ ಸಜೀಪಮೂಡ ಗ್ರಾಮ ಪಂಚಾಯತಿ ಅಧ್ಯಕ್ಷೆ ಶೋಭಾ ಶೆಟ್ಟಿ, ಕಾರಾಜೆ ನೂರುಲ್ ಹುದಾ ಜುಮಾ ಮಸೀದಿಯ ಅಧ್ಯಕ್ಷರಾದ ಹಾಜಿ ಕೆ ಶೇಖಬ್ಬ, ದಾರುಲ್ ಹುದಾ ಜುಮಾ ಮಸೀದಿಯ ಅಧ್ಯಕ್ಷರಾದ ಅಬ್ದುಲ್ ಲತೀಫ್, ಸ್ವಚ್ಛತಾ ಅಭಿಯಾನ‌ ಕಾರಾಜೆಯ ಸ್ವಾಗತ ಸಮಿತಿಯ ಅಧ್ಯಕ್ಷರಾದ ಹಾಜಿ ಉಮರಬ್ಬ, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾದ ರಾಮಣ್ಣ, ವೀರಾಂಜನೇಯ ವ್ಯಾಯಾಮ ಶಾಲೆಯ ಅಧ್ಯಕ್ಷರಾದ ರಾಜೇಶ್, ಶಾಲಾ‌ ಮುಖ್ಯೋಪಾಧ್ಯಾಯಿನಿ ಸುಜಾತ, ಗ್ರಾಮ‌ ಪಂಚಾಯತ್ ಸದಸ್ಯ ಸೀತಾರಾಮ, ಆಶಾ ಕಾರ್ಯಕರ್ತೆ ವಿಜಯಲಕ್ಷ್ಮಿ, ಎಸ್‌ಎಂಎ, ಎಸ್‌ಜೆಎಂ ರಾಜ್ಯಾಧ್ಯಕ್ಷರಾದ ಅಬ್ದುರ್ರಹ್ಮಾನ್ ಮದನಿ ಜೆಪ್ಪು, ಕಣ್ಣಿನ ವೈದ್ಯರಾದ ಡಾ.ಅನಿಲ್ ರಾಮಾನುಜನ್, ಉದ್ಯಮಿ ಅಬ್ದುಲ್ ಖಾದರ್ ಎ.ಕೆ, ಸ್ವಚ್ಛತಾ ಅಭಿಯಾನದ ಕನ್ವೀನರ್ ತಮೀಝ್ ಅಲಿ ಕಾರಾಜೆ, ಉದ್ಯಮಿ ಶೈಲೇಶ್ ಪೂಜಾರಿ, ಶಿಕ್ಷಕಿಯರಾದ ದೀಪಿಕಾ, ಗ್ರೇಸಿ ಪಿಂಟೋ, ಮೀನಾದೇವಿ, ರೋಟರಿ ಕ್ಲಬ್ ಸದಸ್ಯರಾದ ಇಬ್ರಾಹೀಂ ನಂದಾವರ, ರಫೀಕ್ ನಂದಾವರ, ಹೋಟೆಲ್ ಉದ್ಯಮಿ ಅನ್ಸಾರ್, ಸ್ವಚ್ಛತಾ ಅಭಿಯಾನದ ಸದಸ್ಯರಾದ ಜೆ ಇಬ್ರಾಹೀಂ ಕಾರಾಜೆ, ಅಬ್ಬಾಸ್ ಕಾರಾಜೆ, ರಫೀಕ್ ಕಾರಾಜೆ, ಅಶ್ರಫ್, ಪಿ ಕೆ ಹಾರಿಸ್, ಹಮೀದ್, ಮುಬಾರಕ್, ಲತೀಫ್ ಹಾಜಿ, ಮಹಮ್ಮದ್ ವಳಚ್ಚಿಲ್, ಫಝುಲ್, ಶಾಕೀರ್ ಕಾರಾಜೆ, ಶುಹೈಬ್, ಅನ್ಸಾರ್, ಶಾರೂಖ್ ಕಾರಾಜೆ, ಫಾರೂಕ್ ಕಾರಾಜೆ, ರಿಝ್ವಾನ್, ಉವೈಸ್, ಹಾರಿಸ್ ಚಡವು, ಅಶ್ಫಾಕ್, ಸಮೀರ್ ಕಾರಾಜೆ, ಸಲಾಂ ಕಾರಾಜೆ, ಝುಬೈರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

1002892770

ಶಿಬಿರಕ್ಕೆ ಆಗಮಿಸಿದ್ದ ಅತಿಥಿಗಳನ್ನು ಮೊಹಮ್ಮದ್ ಶರೀಫ್ ಕಾರಾಜೆ ಸ್ವಾಗತಿಸಿದರು. ವಿದ್ಯಾರ್ಥಿನಿ ತಸ್ನೀಮ್ ರಫೀಕ್ ನಿರೂಪಣೆಗೈದರು.

1002892700
1002892621
1002892624
ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X