ಬೀದರ್‌ |ಸಮಾಜೋಧಾರ್ಮಿಕ ಕ್ರಾಂತಿಗೈದ ಬಸವಣ್ಣ ಕರ್ನಾಟಕದ ಮಾರ್ಟಿನ್‌ ಲೂಥರ್

Date:

Advertisements
  • ಅನುಭವ ಮಂಟಪದ ಮೂಲಕ ನಡೆಸಿದ ವಚನ ಚಳುವಳಿ ಎಂದೆಂದಿಗೂ ಪ್ರಸ್ತುತ
  • ಕಾಯಕದ ಮಹತ್ವವನ್ನು ಜಗತ್ತಿಗೆ ಶಿವಶರಣರು ಮಾನವ ಜಾತಿ ಒಂದೇ ಎಂದು ಸಾರಿದರು.

ಹನ್ನೆರಡನೆಯ ಶತಮಾನದಲ್ಲಿ ಕಾಯಕವೇ ಕೈಲಾಸವೆಂಬ ತತ್ವದ ಮಹತ್ವ ತಿಳಿಸಿ ಸಾಮಾಜಿಕ, ಆರ್ಥಿಕ, ಧಾರ್ಮಿಕ ಕ್ರಾಂತಿಗೈದು ಸಮಾನತೆಯ ಸಂದೇಶ ಸಾರಿ ವಿಶ್ವಕುಟುಂಬ ಮಾಡಿರುವ ಕರ್ನಾಟಕದ ಮಾರ್ಟಿನ್ ಲೂಥರ್ ಎಂದೇ
ಕರೆಯಲ್ಪಡುವ ಬಸವಣ್ಣನವರು ಹನ್ನೆರಡನೆಯ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ನಡೆಸಿದ ವಚನ ಚಳುವಳಿ ಎಂದೆಂದಿಗೂ ಪ್ರಸ್ತುತವಾಗಿದೆ ಎಂದು ಬಸವತತ್ವ ಚಿಂತಕ ಶತಾಯುಷಿ ಪೂಜ್ಯ ವಿ. ಸಿದ್ಧರಾಮಣ್ಣ ನುಡಿದರು.

ಬೀದರ್‌ ನಗರದ ಶಿವನಗರ ಉತ್ತರ ಭಾಗದಲ್ಲಿರುವ ಅಕ್ಕಮಹಾದೇವಿ ಕಲ್ಯಾಣಮಂಟಪದಲ್ಲಿ ಬಸವ ಗೆಳೆಯರ ಬಳಗ
ಏರ್ಪಡಿಸಿದ ಶ್ರಾವಣ ಮಾಸದ ಪ್ರವಚನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ” ಬಸವಣ್ಣನವರ ಅನುಭವ ಮಂಟಪದಲ್ಲಿ 770 ಅಮರಗಣಗಳು ಮತ್ತು ಒಂದು ಲಕ್ಷ ತೊಬಂತ್ತಾರು ಸಾವಿರ ಶಿವಶರಣರಿದ್ದರು. ಬಸವಣ್ಣ ಒಬ್ಬ ತತ್ವಜ್ಞಾನಿಯೂ ಆಗಿದ್ದರು. ವಚನ ಸಾಹಿತ್ಯದ ಮೂಲಕ ಅವರು ನೀಡಿದ ಕೊಡುಗೆ ಅಗಾಧವಾಗಿದೆ” ಎಂದರು.

ಕೃತಿ ಬಿಡುಗಡೆಗೊಳಿಸಿದ ಶರಣ ಡಾ. ಅಮರನಾಥ ಸೋಲಪುರೆ ಅವರು ಮಾತನಾಡಿ, “ಅನುಭವ ಮಂಟಪದ ಮೂಲಕ ಶರಣರಿಗೆ ವಚನಗಳ ರಚನೆಗೆ ಕಾರಣಿಕೃತರಾಗಿರುವ ಬಸವಣ್ಣನವರು ವಚನಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದವರು. ಆಯ್ದಕ್ಕಿ ಲಕ್ಕಮನ್ಮ, ಮಾರಯ್ಯ ಸೇರಿದಂತೆ ಅನೇಕ ವಚನಕಾರರ ವಚನಗಳ ಅರ್ಥಗಳನ್ನು ಸರಳವಾಗಿ ತಿಳಿಯುವಂತೆ ಹೇಳಿದರು.

Advertisements

ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮತ್ತು ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಅವರು ಮಾತನಾಡಿ, 12ನೇ ಶತಮಾನದಲ್ಲಿ ಆಗಿಹೋದ ಶಿವಶರಣ ದೇವರ ದಾಸಿಮಯ್ಯ ಮತ್ತು ಇತರೆ ಶರಣರು ವಚನ ಸಾಹಿತ್ಯ ಮೂಲಕ ಜಾತಿ, ಧರ್ಮ, ವರ್ಣಾಶ್ರಮದ ವಿರುದ್ಧ ಬಂಡೆದ್ದು, ಮಾನವ ಜಾತಿ ಒಂದೇ ಧರ್ಮ ಎಂದು ಸಾರಿದರು. ಅವುಗಳನ್ನು ತಮ್ಮ ನಿಜ ಜೀವನದಲ್ಲಿ ಆಚರಣೆಗೆ ತಂದವರು. ಆತ್ಮಶುದ್ಧಿ ಮತ್ತು ಕಾಯಕದ ಮಹತ್ವವನ್ನು ಜಗತ್ತಿಗೆ ತಿಳಿಸಿದ ಬಸವಾದಿ ಶಿವಶರಣರು ಸಮಾಜದಲ್ಲಿರುವ ಜನಸಾಮಾನ್ಯರ ಜೀವನಲ್ಲಿ ಹಾಸುಹೊಕ್ಕಾಗಿರುವ ಸೂಕ್ಷ್ಮ ಸಮಸ್ಯೆಗಳನ್ನು ಎಳೆ-ಎಳೆಗಳನ್ನು ಬಿಚ್ಚಿಟ್ಟಿದ್ದರು” ಎಂದು ತಿಳಿಸಿದರು.

ರಾಷ್ಟ್ರೀಯ ಬಸವ ದಳದ ಜಿಲ್ಲಾಧ್ಯಕ್ಷ ಸೋಮಶೇಖರ ಅಣ್ಣೆಪ್ಪಾ ಪಾಟೀಲ ಗಾದಗಿ, ಅಧ್ಯಕ್ಷತೆ ವಹಿಸಿದ ಶರಣ ಶಾಂತಲಿಂಗ ಸಾವಳಗಿ ಮಾತನಾಡಿದರು.

ಈ ಸುದ್ದಿ ಓದಿದ್ದೀರಾ ? ಬೀದರ್‌ |ಬ್ರಿಮ್ಸ್ ಹೊರಗುತ್ತಿಗೆಯಲ್ಲಿ ಲೂಟಿ; ಸಚಿವ ಖೂಬಾರನ್ನು ಸಂಪುಟದಿಂದ ವಜಾಕ್ಕೆ ಒತ್ತಾಯ

ಕಾರ್ಯಕ್ರಮದಲ್ಲಿ ಕುಶಾಲ ಪಾಟೀಲ ಖಾಜಾಪುರ, ಡಾ. ವಿಜಯಶ್ರೀ ಬಶೆಟ್ಟಿ, ಪ್ರೊ. ಮಂಗಲಾ ಪಾಟೀಲ, ಸಿದ್ದಯ್ಯ ಕಾವಡಿಮಠ, ಬಸವರಾಜ ಕಲ್ಯಾಣ, ಲಿಂಗಾಯತ ಅಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಜಿ. ಶೆಟಕಾರ ಉಪಸ್ಥಿತರಿದ್ದರು. ಬಸವಸೇವಾ ಪ್ರತಿಷ್ಠಾನದ ಪರಮ ಪೂಜ್ಯ ಡಾ. ಗಂಗಾಂಬಿಕೆ ಅಕ್ಕ ಬಸವತತ್ವ ಜ್ಞಾನ ಅಧ್ಯಾತ್ಮಿಕ ಪ್ರವಚನ ನಡೆಸಿಕೊಟ್ಟರು. ಅಪ್ಪಾರಾವ ನವಡೆ ದಂಪತಿಗಳು ಗುರುಪೂಜೆ ಮಾಡಿದರು. ಶಿವಕುಮಾರ ಪಾಂಚಾಳ ವಚನ ಸಂಗೀತ ನಡೆಸಿದರು. ರಾಜಕುಮಾರ ಮಿಟಕಾರಿ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | KSRTC ನಗರ ಸಾರಿಗೆ ಬಸ್ ಮಲವಗೊಪ್ಪದ, ಚೆನ್ನಬಸವೇಶ್ವರ ದೇವಸ್ಥಾನ ಬಳಿ ಕಡ್ಡಾಯ ನಿಲುಗಡೆಗೆ ಆದೇಶ

ಶಿವಮೊಗ್ಗ, ಸಾರ್ವಜಕನಿಕ ಪ್ರಯಾಣಿಕರು/ಶಾಲಾ-ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಿವಮೊಗ್ಗ-ಭದ್ರಾವತಿ ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ನಗರ...

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

ಮೈಸೂರು | ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ

ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಕಷ್ಟು ಸವಾಲುಗಳನ್ನು ಸಹ ಎದುರಿಸುತ್ತಿದೆ....

ಗದಗ | ಹಾಸ್ಟೆಲ್‌ ವಿದ್ಯಾರ್ಥಿನಿ ಕೊಲೆ ಪ್ರಕರಣ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಎಸ್‌ಎಫ್‌ಐ ಆಗ್ರಹ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೋವೆರ ಹಟ್ಟಿಯ ವರ್ಷಿತಾ ಎಂಬ ಪದವಿ...

Download Eedina App Android / iOS

X