ಬೆಳಗಾವಿ ಜಿಲ್ಲೆಯ ಕರಡಿಗುದ್ದಿ ಗ್ರಾಮದ ಶ್ರೀ ಯಲ್ಲಪ್ಪ ದ್ಯಾ ಬೋರಣ್ಣವರ ಎಂಬ ವ್ಯಕ್ತಿ ಕಳೆದ ತಿಂಗಳು ತನ್ನ ಹೆಂಡತಿಯ ಮನೆಗೆ ತೆರಳುವ ಸಮಯದಲ್ಲಿ ನೇಸರಗಿಯ, ಕೊಳದೂರು ಗ್ರಾಮದ ಬಳಿ ಹಳ್ಳದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದರು.
ಈ ಹಿನ್ನೆಲೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮೃತರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ವ್ಯಕ್ತಪಡಿಸಿ, 5 ಲಕ್ಷ ರೂ,ಗಳ ಪರಿಹಾರದ ಚೆಕ್ ಅನ್ನು ಮೃತನ ಹೆಂಡತಿ ಶ್ರೀಮತಿ ಭಾರತಿ ಯಲ್ಲಪ್ಪ ಬೋರಣ್ಣವರ ಅವರಿಗೆ ನೀಡಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಕರಡಿಗುದ್ದಿ ಗ್ರಾಮದ ಶ್ರೀ ಯಲ್ಲಪ್ಪ ದ್ಯಾ ಬೋರಣ್ಣವರ ಎಂಬ ವ್ಯಕ್ತಿ ಕಳೆದ ತಿಂಗಳು ತನ್ನ ಹೆಂಡತಿಯ ಮನೆಗೆ ತೆರಳುವ ಸಮಯದಲ್ಲಿ ನೇಸರಗಿಯ, ಕೊಳದೂರು ಗ್ರಾಮದ ಬಳಿ ಹಳ್ಳದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟ ಹಿನ್ನೆಲೆಯಲ್ಲಿ ಇಂದು ಮೃತರ ಮನೆಗೆ ತೆರಳಿ, ಕುಟುಂಬಸ್ಥರಿಗೆ ಸಾಂತ್ವನ ವ್ಯಕ್ತಪಡಿಸಿ, 5 ಲಕ್ಷ… pic.twitter.com/xXIaTR0PO7
— Laxmi Hebbalkar (@laxmi_hebbalkar) November 13, 2024
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಮಾಜಿ ತಾಲೂಕ್ ಪಂಚಾಯತ್ ಅಧ್ಯಕ್ಷರಾದ ಶಂಕರಗೌಡ ಪಾಟೀಲ, ಬೈಲಹೊಂಗಲ ತಹಶಿಲ್ದಾರ ಶಿರಹಟ್ಟಿ, ಕಂದಾಯ ನಿರೀಕ್ಷಕರಾದ ಶಶಿಧರ್ ಗುರವ ಉಪಸ್ಥಿತರಿದ್ದರು.
