ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದ ಹೊರವಲಯದ ಸ್ತವನಿಧಿ ಘಟ್ಟದಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಟ್ರಕ್ ಮತ್ತು ಕ್ರೂಸರ್ ಕಾಲು ದ್ವಿಚಕ್ರ ವಾಹನಗಳ ಮಧ್ಯೆ ಸಂಭವಿಸಿದ ಸರಣಿ ಅಪಘಾತದಲ್ಲಿ ಓರ್ವ ಸಾವನ್ನಪ್ಪಿ, 15 ಜನರು ಗಾಯಗೊಂಡ ಘಟನೆ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಖಾನಾಪುರ ತಾಲ್ಲೂಕಿನ ಜಾಂಬೋಟಿಯ ನಾರಾಯಣ ನಾಗು ಪಾರವಾಳಕರ(65) ಎಂದು ಗುರುತಿಸಲಾಗಿದೆ.
ಜಾಂಬೋಟಿಯ ರೇಷ್ಮಾ ಕುಡತುರಕರ(45), ಶಂಕರ ಪಾರವಾಳಕರ(28) ಗಂಭೀರವಾಗಿ ಗಾಯಗೊಂಡಿದ್ದು, ವೈದ್ಯಕೀಯ ಚಿಕಿತ್ಸೆಗಾಗಿ ಬೆಳಗಾವಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. 15 ಜನರಿಗೆ ಸಣ್ಣ–ಪುಟ್ಟ ಗಾಯವಾಗಿವೆ.

ಈ ಅವಘಡದಲ್ಲಿ ಮೋಹನ್ ಪರ್ವಾಡ್ಕರ್ (57), ವಿದ್ಯಾ ಮೋಹನ್ ಪರ್ವಾಡ್ಕರ್ (47), ಪ್ರತೀಕ್ಷಾ ( 22), ಪ್ರಿಯಾಂಕಾ (25), ಪೂನಂ ಮಹೇಶ್ ಡಿಯೋಲೆ (26), ಆಯೇಷಾ ಮಹೇಶ್ ಡಿಯೋಲೆ (5), ಆಯುಷ್ ಮಹೇಶ್ ದೀಪಾವಳಿ (3), ಸುಹಾಸ್ ಬಬ್ಲಿ ಪರ್ವಾಡ್ಕರ್ (40), ಸ್ವಾತಿ ಸುಹಾಸ್ ಪರ್ವಾಡ್ಕರ್ (12), ವೈಷ್ಣವಿ ಮೋಹನ್ ಘಾಡೆ (25), ಪ್ರಮೋದ್ ಮಾರುತಿ ಪರ್ವಡ್ಕರ್ (26) ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ತಮಿಳುನಾಡಿನಿಂದ ನಿಪ್ಪಾಣಿ ಮಾರ್ಗವಾಗಿ ಮುಂಬೈಗೆ ಹೊರಟಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ, ಜೀಪ್‌ಗೆ ಗುದ್ದಿತು. ಆ ವಾಹನ ರಸ್ತೆಯ ಮತ್ತೊಂದು ಬದಿಯಲ್ಲಿದ್ದ ಎರಡು ಕಾರು ಮತ್ತು ಒಂದು ದ್ವಿಚಕ್ರ ವಾಹನಕ್ಕೆ ಅಪ್ಪಳಿಸಿತು. ಜೀಪ್‌ನಲ್ಲಿದ್ದು ಈ ಸಂದರ್ಭದಲ್ಲಿ ಕಾರಿನಲ್ಲಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ.
ಇದನ್ನು ಓದಿದ್ದೀರಾ? ತನಗೆ ಏಡ್ಸ್ ರಕ್ತ ಇಂಜೆಕ್ಟ್ ಮಾಡಲು ಸಂಚು ಹೂಡಿದ್ದ ಮುನಿರತ್ನ; ದೇಶವನ್ನೇ ತೊರೆಯಲು ನಿರ್ಧರಿಸಿದ್ದ ಆರ್ ಅಶೋಕ್
ಜಾಂಬೋಟಿ ಗ್ರಾಮಸ್ಥರು ಕೊಲ್ಹಾಪುರದ ಮಹಾಲಕ್ಷ್ಮಿ ದೇವಿ ಮತ್ತು ಜ್ಯೋತಿಬಾ ದೇವಸ್ಥಾನಕ್ಕೆ ಹೊರಟಿದ್ದರು ಎಂದು ಪೋಲಿಸರು ತಿಳಿಸಿದ್ದಾರೆ. ಸ್ಥಳೀಯ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

