ಬೆಳಗಾವಿಯ ಜನನಿಬಿಡ ಪ್ರದೇಶಗಳಲ್ಲಿ ಕಾಡುಪ್ರಾಣಿಗಳು ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ನಗರದ ಜಾಂಬೋಟಿಯಲ್ಲಿ ಹುಲಿ ಪ್ರತ್ಯಕ್ಷವಾಗಿದ್ದು, ಸ್ಥಳೀಯರು ಮೊಬೈಲ್‌ನಲ್ಲಿ ಈ ದೃಶ್ಯ ಸೆರೆಹಿಡಿದಿದ್ದಾರೆ.
ಈ ವರದಿ ಓದಿದ್ದೀರಾ? ಹುಬ್ಬಳ್ಳಿ ಧಾರವಾಡ ಬಂದ್ ಯಶಸ್ವಿ | ಅಮಿತ್ ಶಾ ಇನ್ನಾದರೂ ಬುದ್ಧಿ ಕಲಿಯಲಿ
ಜಾಂಬೋಟಿಯ ಕಣಕುಂಬಿ ಹುಳಂದ-ಕಣಕುಂಬಿ ರಸ್ತೆಯಲ್ಲಿ ಹುಲಿ ಪ್ರತ್ಯಕ್ಷವಾಗಿರುವುದನ್ನು ಕಂಡು ಜನರು ಗಾಬರಿಯಾಗಿದ್ದು, ಇದು ತಾಲೂಕಿನ ಅತ್ಯಂತ ದಟ್ಟ ಅರಣ್ಯ ಪ್ರದೇಶ ಎಂದು ಹೇಳಲಾಗುತ್ತದೆ. ಕಾಡುಪ್ರಾಣಿಗಳನ್ನು ಕಂಡು ಆತಂಕದಲ್ಲಿರುವ ಸ್ಥಳೀಯ ಜನತೆ, ಆದಷ್ಟು ಬೇಗ ಅರಣ್ಯ ಇಲಾಖೆ ಈ ಬಗ್ಗೆ ಗಮನಹರಿಸಿ, ನಾಗರಿಕರನ್ನು ರಕ್ಷಣೆ ಮಾಡಲು ಮುಂದಾಗಬೇಕು ಎಂದು ವಿನಂತಿಸಿದ್ದಾರೆ.