2026ನೇ ಸಾಲಿನ ಬೆಳಗಾವಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಜಿಲ್ಲೆಯ ವಿವಿಧ ತಾಲ್ಲೂಕುಗಳ 50 ಶಿಕ್ಷಕರು ಆಯ್ಕೆಯಾಗಿದ್ದಾರೆ. ಶಿಕ್ಷಕರ ದಿನಾಚರಣೆ ಅಂಗವಾಗಿ ಆಯ್ಕೆಯಾದ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರಾಮದುರ್ಗ ತಾಲೂಕಿನ ಸಾಲಾಪಾರ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ (ಕೆಪಿಎಸ್) ಶಾಲೆಯ ಶಿಕ್ಷಕ ದಯಾನಂದ ಹುದ್ದಾರ ಅವರು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ ಶಾಲಾ ಅಭಿವೃದ್ಧಿಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ 50 ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪುರಸ್ಕೃತರು: ರಾಜು ಉಡಕೇರಿ, ಶಾಹೀನ್ ಜಮಾದಾರ,
ಅಜ್ಜತುಲ್ಲಾ ಉಸ್ತಾದ್, ಪ್ರಕಾಶ ತಂಗೋಜಿ, ನಜೀರ್‌ಅಹಮದ್ ಪಟಾಯಿತ, ರಮೇಶ ಹೊಸಕೋಟಿ, ಮಾಲೂತಾಯಿ ಬಸಲಿಂಗಗೋಳ, ದಯಾನಂದ ಹುದ್ದಾರ, ಸಿ.ಎಸ್. ಸಿದ್ದಸಮುದ್ರ, ಸುರೇಶ ಗಡಾದ, ನಬಿಸಾಬ್ ಖುದ್ದುನವರ, ಅಜ್ಜಪ್ಪ ಅಂಗಡಿ, ಬಸವರಾಜ ಪಾಟೀಲ,




