ಬೆಳಗಾವಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಸರಗಳ್ಳತನ ಮಾಡುತ್ತಿದ್ದ ಸರಕಳ್ಳಿಯರ ಗ್ಯಾಂಗ್ ಸದಸ್ಯರನ್ನು ಮಾರ್ಕೆಟ್ ಪೊಲೀಸ್ ಠಾಣೆಯವರು ಬಂಧಿಸಿದ್ದು, ಬಸ್ ಹತ್ತುವಾಗ ಮತ್ತು ಇಳಿಯುವಾಗ ಮಹಿಳೆಯರ ಬೆಲೆಬಾಳುವ ಚಿನ್ನದ ಒಡವೆಗಳನ್ನು ಕದ್ದು ಪರಾರಿಯಾಗುತ್ತಿದ್ದರು.
ಹುಬ್ಬಳ್ಳಿ ಮೂಲದ ಕಾಂಚನಾ ಗೌಡರ ಎಂಬವರ ಚಿನ್ನದ ಸರ ಕಳ್ಳತನವಾಗಿತ್ತು. ಈ ಬಗ್ಗೆ ಅವರು ಮಾರ್ಕೆಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಮಾರ್ಕೆಟ್ ಪೊಲೀಸರು ಮೂವರು ಕಳ್ಳಿಯರನ್ನು ಬಂಧಿಸವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ 12,72,700 ರೂ. ಮೌಲ್ಯದ 143 ಗ್ರಾಂ ಚಿನ್ನದ ಒಡವೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಾರ್ಕೆಟ್ ಎಸಿಪಿ ಸಂತೋಷ ಸತ್ಯನಾಯಕ ನೇತೃತ್ವದಲ್ಲಿ ನಡೆಸಿದ ಈ ಕಾರ್ಯಾಚರಣೆಯಲ್ಲಿ ಬೆಳಗಾವಿ ನಗರದ ವಡ್ಡರವಾಡಿ ನಿವಾಸಿ ಅನೀತಾ ಚೌಗಲೆ (58), ನಿಶಾ ಲೊಂಡೆ (25) ಮತ್ತು ಗಿಡ್ಡಿ ಲೊಂಡೆ (35) ಎಂಬವರು ಬಂಧಿತರೆಂದು ಪೊಲೀಸ್ ಮಹತ್ವಪೂರ್ಣ ವರದಿ ನೀಡಿದಿದ್ದಾರೆ.