ಬೆಳಗಾವಿ ನಗರದ ರಾಮತೀರ್ಥ ನಗರದಲ್ಲಿ ಪತಿಯನ್ನು ಪತ್ನಿ ಕೊಲೆ ಮಾಡಿದ ಘಟನೆ ನಡೆದಿದೆ.
ಚಿಕ್ಕೋಡಿ ತಾಲ್ಲೂಕಿನ ಕಲ್ಲೂರಿನ ಅಮಿತ ನಿಚ್ಚಪ್ಪ ರಾಯಬಾಗ (34) ಕೊಲೆಯಾದವರು. ಅವರ ಪತ್ನಿ ಆಶಾ(29) ಕೊಲೆ ಆರೋಪಿ. ಈ ದಂಪತಿಗೆ 9 ಮತ್ತು 7 ವರ್ಷದ ಇಬ್ಬರು ಮಕ್ಕಳಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಅಮಿತ ಮತ್ತು ಆಶಾ ದಂಪತಿ ಬಾಡಿಗೆ ಮನೆಯಲ್ಲಿ ವಾಸವಿದ್ದು ಎಲೆಕ್ಟ್ರಾನಿಕ್ಸ್ ವಸ್ತುಗಳ ದುರಸ್ತಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಮಿತ ವಿಪರೀತ ಮದ್ಯ ಸೇವಿಸಿ ಬಂದು, ಗಲಾಟೆ ಮಾಡುತ್ತಿದ್ದ. ಇದರಿಂದ ಬೇಸತ್ತ ಪತ್ನಿ ತನ್ನ ವೇಲ್ ಅನ್ನು ಕೊರಳಿಗೆ ಸುತ್ತಿ ಕೊಲೆ ಮಾಡಲಾಗಿದೆ ಕೊಲೆ ಆರೋಪಿಯನ್ನು ಬಂಧಿಸಲಾಗಿದ್ದು ಬೆಳಗಾವಿಯ ಮಾಳಮಾರುತಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.