ಬೆಳಗಾವಿ | ಪ್ರಾಥಮಿಕ ಶಾಲೆಯ ಮಕ್ಕಳಿಗಾಗಿ ಕಥಾ ಕಮ್ಮಟ ಕಾರ್ಯಗಾರ

Date:

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಾಪೂರ ಸರ್ಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ನಾಟ್ಯ ಯೋಗ ಟ್ರಸ್ಟ್ ಸಾಲಾಪೂರ ಕನ್ನಡ ಸಾಹಿತ್ಯ ಪರಿಷತ್ ರಾಮದುರ್ಗ ಹಾಗೂ ಈ ದಿನ.ಕಾಮ್ ಸಹಯೋಗದಲ್ಲಿ ಎರಡು ದಿನಗಳ ಕಥಾ ಕಮ್ಮಟ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.

- Advertisement -

ಮಕ್ಕಳು ಸ್ವತಃ ಕಥೆ, ಕಾವ್ಯ ರಚಿಸುವದನ್ನು ಕಲಿಯಬೇಕು ಎನ್ನುವ ಉದ್ದೇಶದದಿಂದ ಈ ಕಥಾ ಕಮ್ಮಟ ಕಾರ್ಯಗಾರ ನಡೆಸಲಾಯಿತು. ಎರಡು ದಿನಗಳ ಕಾರ್ಯಾಗಾರವನ್ನು ರಂಗಕರ್ಮಿ ಕಲ್ಲಪ್ಪ ಪೂಜೇರ ಇವರು ವಿಧ್ಯಾರ್ಥಿಗಳಿಗೆ ಅನೇಕ ಕಾರ್ಯ ಚಟುವಟಿಕೆಗಳ ಮೂಲಕ ಸ್ವತಂತ್ರವಾಗಿ ಕಥೆ ಬರೆಯುವ ಕೌಶಲ್ಯವನ್ನು ಹೇಳಿಕೊಟ್ಟರು. ಮಕ್ಕಳು ಸಹ ಅತ್ಯಂತ ಆಸಕ್ತಿಯಿಂದ ಕಥೆ ಬರೆಯುವುದನ್ನು ಕಲಿತುಕೊಂಡಿದ್ದು ವಿಶೇಷವಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರಾಮಲೀಲೆಗಳಲ್ಲಿ ರಾಮ, ಹನುಮ, ಲಕ್ಷ್ಮಣ ಪಾತ್ರಗಳಲ್ಲಿ ದಾನಿಶ್ –...

ರಾಮನಾಗಿ ದಾನಿಶ್. ಹನುಮಂತನಾಗಿ ಯೂನುಸ್. ಲಕ್ಷ್ಮಣನಾಗಿ ಶೇರ್ ಖಾನ್. ರಾವಣನಾಗಿ ಇಕ್ಬಾಲ್ ಅಹ್ಮದ್. ಇವರೆಲ್ಲರೂ ಮುಸ್ಲಿಂ ಕಲಾವಿದರು. ಆದರೆ, ಇವರು ಅಭಿನಯಿಸಿರುವುದು ಹಿಂದುಗಳ ಮಹಾಕಾವ್ಯ ರಾಮಾಯಣದ ಪಾತ್ರಗಳಲ್ಲಿ. ಉತ್ತರ ಭಾರತದ ಹಲವು ರಾಮಲೀಲೆಗಳಲ್ಲಿ...

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ...

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್ ವಿರುದ್ಧದ ಯುದ್ಧದ ಆರ್ಥಿಕ ಪರಿಣಾಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ದೊಡ್ಡ ರಾಜಕೀಯ ಸವಾಲಾಗಿವೆ. ನವೆಂಬರ್ 3ರಂದು ನಡೆಯಲಿರುವ ಮಧ್ಯಂತರ...

ಖಾಲಿದ್‌ರಂತೆ ಸಿಜೆಪಿ ನಾಯಕರನ್ನೂ ದೀರ್ಘ ಜೈಲುವಾಸದ ಸುಳಿಯಲ್ಲಿ ಸಿಲುಕಿಸುವ...

ಚುನಾವಣಾ ಆಯೋಗದ ಅಕ್ರಮ ಪ್ರಶ್ನಿಸಿದ ಸಿಜೆಪಿ ನಾಯಕರ ವಿರುದ್ಧ ಸರಣಿ ದೂರು ದಾಖಲಿಸಲಾಗುತ್ತಿದೆ. ಮೋದಿ ಸರ್ಕಾರದ ಅವಧಿಯಲ್ಲಿ ‘ವಿಚಾರಣೆಯೇ ಒಂದು ಶಿಕ್ಷೆ’ ಎನ್ನುವ ತಂತ್ರ ಪುನರಾವರ್ತನೆಯಾಗುತ್ತಿದೆಯೇ? ಉಮರ್‌ ಖಾಲಿದ್‌ ರೀತಿಯಲ್ಲೇ ಸೌರವ್ ದಾಸ್,...

ಎರಡನೇ ದಿನ ಕಾರ್ಯಾಗಾರದ ಸಮಾರೋಪ ಕಾರ್ಯಕ್ರಮವನ್ನು ಉದ್ಧೇಶಿಸಿ ರಾಮದುರ್ಗ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪಾಂಡುರಂಗ ಜಟ್ಟಗನ್ನವರ ಮಾತನಾಡಿ, ಸಾಲಾಪೂರ ಗ್ರಾಮದ ಶಾಲಾ ಮಕ್ಕಳು ಕ್ರಿಯಾಶೀಲರಾಗಿದ್ದು ಗುರುಗಳು ಸಹ ಒಳ್ಳೆಯ ಶಿಕ್ಷಣವನ್ನು ನೀಡಿದ್ದಾರೆ. ಕಾರ್ಯಾಗಾರ ನಡೆಸಿಕೊಟ್ಟ ಕಲ್ಲಪ್ಪ ಪೂಜೇರ ಇವರು ರಂಗ ಕಲೆಯಿಂದ ಬಂದವರು ಮಕ್ಕಳಿಗಾಗಿ ಅನೇಕ ಕಾರ್ಯಕ್ರಮಗಳನ್ನು ಮಾಡಿದ್ದಾರೆ ಮತ್ತು ಮಕ್ಕಳಿಗಾಗಿ ರಂಗ ತರಬೇತಿಯನ್ನು ಮಾಡಿದ್ದರು. ಮಕ್ಕಳು ದೊಡ್ಡವರು ಬರೆದ ಸಾಹಿತ್ಯವನ್ನು ಓದುತ್ತಾರೆ ಮಕ್ಕಳೆ ಸಾಹಿತ್ಯವನ್ನು ಬರೆಯುವದು ಹೆಚ್ಚು ಅಮೂಲ್ಯವಾಗಿರುತ್ತದೆ ಎಂದರು.

ವಿದ್ಯಾರ್ಥಿಗಳು ಧೀರ್ಘವಾಗಿ ಬರೆಯುವುದನ್ನು ರೂಢಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಧೀರ್ಘ ಉತ್ತರದ ಪ್ರಶ್ನೆ ಗಳಿರುತ್ತವೆ. ಈಗಿನಿಂದಲೇ ತಯಾರಿ ಮಾಡಿಕೊಳ್ಳಲು ಇಂಥ ಕಮ್ಮಟಗಳು ಸಹಕಾರಿಯಾಗುತ್ತವೆ ಎಂದು ಸಮುದಾಯ ಸಾಂಸ್ಕೃತಿಕ ಸಂಘಟನೆಯ ಮುಖ್ಯಸ್ಥ ರಾಜಶೇಖರ ಶಲವಡಿ ತಿಳಿಸಿದರು.

ಅಧ್ಯಕ್ಷಿಯ ಭಾಷಣ ಮಾಡಿದ ಶಾಲೆಯ ಪ್ರಧಾನ ಗುರುಗಳಾದ ಎ.ಎಸ್ ಗಾಣಗಿಯವರು ಮಾತನಾಡಿ, ಶಾಲೆಯಲ್ಲಿ ಗ್ರಂಥಾಲಯ ಸೌಲಭ್ಯವಿದ್ದು ಮಕ್ಕಳು ಸುಲಭವಾಗಿ ಓದಿ ಅರ್ಥೈಸಿಕೊಳ್ಳಬಹುದಾದ ಹಲವು ಪುಸ್ತಕಗಳಿವೆ. ವಿದ್ಯಾರ್ಥಿಗಳು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕಥಾ ಕಮ್ಮಟ ಕಾರ್ಯಾಗಾರದ ಕುರಿತು  ವಿಧ್ಯಾರ್ಥಿನಿ ಅಲ್ಫಿಯಾ ನಧಾಪ, ಕಾರ್ಯಾಗಾರದ ಗುರುಗಳಾದ ಕಲ್ಲಪ್ಪ ಪೂಜೇರ ಇವರು ನಮ್ಮಗೆ ಅನೇಕ ಕಾರ್ಯಚಟುವಟಿಕೆಗಳ ಮೂಲಕ ಕಥೆ ಬರೆಯುವದನ್ನು ತಿಳಿಸಿಕೊಟ್ಟರು ಮತ್ತು  ಕಥಾ ಕಮ್ಮಟ ಕಾರ್ಯಾಗಾರ ನಮ್ಮಗೆ ಬಹಳಷ್ಟು ಸಂತೋವನ್ನು ನೀಡಿದೆ ಎಂದು ಸಂತಸ ಹಂಚಿಕೊಂಡಳು.

ಕಥಾ ಕಮ್ಮಟ ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಸುರೇಶ ಮಾದರ, ಭೀಮರಾವ ದ್ಯಾವನ್ನವರ, ಲಕ್ಷ್ಮಣ ದಂಡಗಿ, ಪ್ರದೀಪ ಹಂಪಣ್ಣವರ, ರಮೇಶ ಬಡಿಗೇರ, ಸಂತಪ್ಪ ದ್ಯಾವಣ್ಣವರ, ಮೈಬೂಬ ಭಾಗವಾನ, ಈರಣ್ಣ ಯಾದವಾಡ ಹಿರಿಯ ಶಿಕ್ಷಕ ಡಿ.ಬಿ. ಹುದ್ದಾರ, ರವೀಂದ್ರ ಇಳಿಗೇರ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ಅರ್ಪಿತಾ ದ್ಯಾವನ್ನವರ ಮತ್ತು ತನುಜಾ ಹಂಪಿಹೋಳಿ, ಸಹನಾ ನಾವಿ,  ಮೇಘಾ ಕಲ್ಲೇದ, ವಿಜಯಲಕ್ಷ್ಮೀ ಕೆಲವಡಿ, ಕಾವೇರಿ ಮೇಟ್ಟಿನ, ಶಾಲಾ ವಿಧ್ಯಾರ್ಥಿನಿಯರೆ ಕಥಾ ಕಮ್ಮಟ ಕಾರ್ಯಾಕ್ರಮವನ್ನು ನಿರೂಪಿಸಿ ನಡೆಸಿಕೊಟ್ಟಿದ್ದು ವಿಶೇಷವಾಗಿತ್ತು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಂಡೀಪುರ ಅರಣ್ಯದಲ್ಲಿ ಹೆಣ್ಣಾನೆ ಕಳೇಬರ ಪತ್ತೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದ ಮಾರಿಕಟ್ಟೆ ಕೆರೆ ಸಮೀಪದ...

ಬಂಡೀಪುರದಲ್ಲಿ ಉರುಳು ಹಾಕಿ ಹುಲಿ ಕೊಂದ ಆರೋಪ: ವ್ಯಕ್ತಿ ಬಂಧನ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಉರುಳು ಹಾಕಿ ಹುಲಿಯನ್ನು ಕೊಂದ ಪ್ರಕರಣಕ್ಕೆ...

ವಿಚಾರವಾದಿಗಳು ಕಂಡ ಗಾಂಧೀ-ಟಿಪ್ಪು ಮತ್ತು ಕೋಮುವಾದಿಗಳ ತಿರುಚುವಿಕೆ!

ಇತಿಹಾಸದ ಕುರಿತು ಪ್ರಶ್ನೆಗಳನ್ನು ಎತ್ತುವುದು ಪ್ರಜಾಪ್ರಭುತ್ವದ ಲಕ್ಷಣ. ಆದರೆ ಪ್ರಶ್ನೆಗಳನ್ನು ಎತ್ತುವ...

ಬೆಳಗಾವಿ | ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆಯ ಖಡ್ಗ ಸಮೇತ ಬಿದ್ದ ಬಲಗೈ

ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದ ರಾಣಿ ಚನ್ನಮ್ಮ ವೃತ್ತದಲ್ಲಿರುವ ವೀರರಾಣಿ ಕಿತ್ತೂರು...