ಧಾರವಾಡ | ನಕಲಿ ವೈದ್ಯನನ್ನು ತರಾಟೆಗೆ ತೆಗೆದುಕೊಂಡ ಸಚಿವ ಸಂತೋಷ ಲಾಡ್

Date:

ಸೀಜ಼್ ಆಗಿರುವ ಕ್ಲಿನಿಕ್ ತೆರೆಯಲು ಅನುಮತಿ ನೀಡುವಂತೆ ಮನವಿ ಕೋರಲು ಕಾಂಗ್ರೆಸ್ ಮುಖಂಡ ಮುತ್ತುರಾಜ್ ಮಾಖಡವಾಲೆ ಎಂಬುವರು ನಕಲಿ ವೈದ್ಯ ತರುಣಕುಮಾರ್‌ ಎಂಬಾತನನ್ನು ಸಚಿವರ ಬಳಿ ಕರೆದುಕೊಂಡು ಬಂದಿದ್ದು, ಮುತ್ತುರಾಜ್ ಮಾಖಡವಾಲೆ ಮೇಲೂ ಸಂತೋಷ್ ಲಾಡ್ ಸಿಟ್ಟಾಗಿದ್ದಾರೆ.

ಧಾರವಾಡದ ಪ್ರವಾಸಿ ಮಂದಿರದಲ್ಲಿ ಅಹವಾಲು ಸ್ವೀಕರಿಸುವ ವೇಳೆ ನಕಲಿ ವೈದ್ಯ ತರುಣ್‌ಕುಮಾರ್ ರಾಯ್ ವಿರುದ್ಧ ಸಚಿವ ಸಂತೋಷ್ ಲಾಡ್ ಕಿಡಿಕಾರಿದರು.

ಕಳೆದ ಕೆಲ ದಿನಗಳ ಹಿಂದೆ ತಾಲೂಕು ವೈದ್ಯಾಧಿಕಾರಿಯಿಂದ ನಕಲಿ ಕ್ಲಿನಿಕ್ ಮೇಲೆ ದಾಳಿಗೈದು ಅಧಿಕಾರಿಗಳು ತರುಣ್‌ಕುಮಾರ್ ರಾಯ್ ಕ್ಲಿನಿಕ್ ಸೀಜ಼್ ಮಾಡಿದ್ದರು. ಸುಮಾರು 30 ವರ್ಷಗಳಿಂದ ತರುಣ್‌ಕುಮಾರ್ ರಾಯ್ ಕ್ಲಿನಿಕ್ ನಡೆಸುತ್ತಿದ್ದ ಎಂದು ತಿಳಿದುಬಂದಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಧಾರವಾಡ | ಮಂತ್ರಿಸ್ಥಾನಕ್ಕಾಗಿ ಸಭಾಧ್ಯಕ್ಷ ಸ್ಥಾನ ನೀರಾಕರಿಸಬೇಡಿ: ಯು ಟಿ ಖಾದರ್

ಪಿಯುಸಿ ಓದಿರುವ ವೈದ್ಯನಿಂದ ಫೈಲ್ಸ್, ಫಿಶರ್ ಪಿಸ್ತೂಲ್ ಖಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆಂಧ್ರ ಮೂಲದ ತರುಣ್‌ಕುಮಾರ ರಾಯ್ ನಗರದ ಬೂಸಪ್ಪ ಚೌಕ್‌ನಲ್ಲಿ ಅನಧಿಕೃತ ಕ್ಲಿನಿಕ್ ತರೆದು ಚಿಕಿತ್ಸೆ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಕ್ಲಿನಿಕ್‌ ಸೀಜ಼್ ಆಗಿತ್ತು. ಇದೀಗ ಮತ್ತೆ ತರರೆಯಲು ಅನುಮತಿ ನೀಡುವಂತೆ ಮುತ್ತುರಾಜ್ ಮಾಖಡವಾಲೆಯಿಂದ ಸಚಿವರಿಗೆ ಒತ್ತಡ ಬಂದಿದ್ದು, ಇಬ್ಬರನ್ನೂ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದು, “ರಿಜಿಸ್ಟ್ರೇಷನ್ ಇಲ್ಲದೆ ವೈದ್ಯಕೀಯ ವೃತ್ತಿ ನಡೆಸಲು ಸಾಧ್ಯವಿಲ್ಲ” ಎಂದು ಸಚಿವರು ತಾಕೀತು ಮಾಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಪತ್ನಿ ಕೊಲೆಗೈದ ಆರೋಪಿ ಪತಿಗೆ ಜೀವಾವಧಿ ಶಿಕ್ಷೆ

ಹೆಂಡತಿಗೆ ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನಲೆ ಆಕೆಯ ಪತಿಗೆ ಬೀದರ...

ಬೆಂಗಳೂರು | ಧರ್ಮದ ಆಧಾರದ ಮೇಲೆ ಮತಯಾಚನೆ ಮಾಡಿದ ತೇಜಸ್ವಿ ಸೂರ್ಯ: ಪ್ರಕರಣ ದಾಖಲು

ಧರ್ಮದ ಆಧಾರದ ಮೇಲೆ ಮತಯಾಚನೆ ಮಾಡಿದ ಆರೋಪದ ಮೇಲೆ ಬೆಂಗಳೂರು ದಕ್ಷಿಣ...

ಚಾಮರಾಜನಗರ | ಮತದಾನ ಬಹಿಷ್ಕಾರ; ಮನವೊಲಿಸಲು ಹೋದ ಅಧಿಕಾರಿಗಳ ಮೇಲೆ ಹಲ್ಲೆ

ರಾಜ್ಯ 14 ಕ್ಷೇತ್ರಗಳಲ್ಲಿ ಶಾಂತಿಯುತವಾಗಿ ಮತದಾನ ನಡೆಯುತ್ತಿದ್ದು, ಕೆಲವೆಡೆ ಮತದಾನ ಬಹಿಷ್ಕಾರ...

ಉಡುಪಿ | ನಾನು ಮತ ಹಾಕಿರುವ ಅಭ್ಯರ್ಥಿ ನೂರಕ್ಕೆ ನೂರರಷ್ಟು ಗೆಲ್ಲುತ್ತಾರೆ: ನಟ ರಕ್ಷಿತ್ ಶೆಟ್ಟಿ

ಲೋಕಸಭಾ ಚುನಾವಣೆ ಹಿನ್ನೆಲೆ, ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ರಾಜಕಾರಣಿಗಳು,...