ಸೋಶಿಯಲ್ ಮೀಡಿಯಾದಲ್ಲಿ ಫೇಮ್ಗಾಗಿ ವಿಭಿನ್ನವಾಗಿ ಕಾಣಿಸಿಕೊಳ್ಳಲು ಯುವಕರು ಅಪಾಯಕಾರಿಯಾದ ಹಾದಿ ಹಿಡಿದಿದ್ದಾರೆ. ಕೈಯಲ್ಲಿ ತಲ್ವಾರ್, ಲಾಂಗು, ಮಚ್ಚು ಹಿಡಿದು ಸಿನಿಮಾ ಶೈಲಿಯ ರೀಲ್ಸ್ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಈ ನಡುವೆ ಕಾನೂನು ಉಲ್ಲಂಘನೆ ಮಾಡಿದವರಿಗೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಅಥಣಿಯಲ್ಲಿ ನಡೆದ ಒಂದು ಪ್ರಕರಣ ಇದೀಗ ಸುದ್ದಿಯಾಗುತ್ತಿದೆ.
ಅಥಣಿ ಪಟ್ಟಣದ ಮಹಾಂತೇಶ ಸದಾಶಿವ ಮಾಳಿ ಎಂಬ ಯುವಕ ತನ್ನ ಇನ್ನಾ ಪೇಜ್ನಲ್ಲಿ ಕೈಯಲ್ಲಿ ತಲ್ವಾರ್ ಹಿಡಿದು, ನಟ ಶಿವರಾಜಕುಮಾರ್ ಅಭಿನಯದ “ಶಿವ” ಚಿತ್ರದ ‘ಅಂಡರ್ವಡ್ ಅಂದ್ರೆ ಇಷ್ಟ ಕಣೀ, ಹಳೆ ಲಾಂಗು ಅಂದ್ರೆ ಬೆಸ್ಟು ಕಣೀ’ ಎಂಬ ಹಾಡಿಗೆ ರೀಲ್ಸ್ ಮಾಡಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ, ಅಥಣಿ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಈ ಹಿಂದೆ ಬೆಳಗಾವಿ ಜಿಲ್ಲಾ ಎಸ್ಪಿ ಯುವಕರು ಈ ರೀತಿಯ ಕಾನೂನು ಉಲ್ಲಂಘನೆಯಿಂದ ದೂರವಿರಬೇಕು ಎಂದು ಎಚ್ಚರಿಕೆ ನೀಡಿದ್ದರು. ಇದೀಗ ಪೊಲೀಸ್ ಇಲಾಖೆ, ಆಯುಧ ಪ್ರದರ್ಶನ ಮಾಡುತ್ತಾ ವಿಡಿಯೋ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.
ಅಥಣಿ ಠಾಣೆಯ ಪಿಎಸ್ಐ ಗಿರಿಮಲ್ಲಪ್ಪ ಉಪ್ಪಾರ ಅವರು, “ಸಮಾಜಿಕ ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದು ಎಲ್ಲರ ಕರ್ತವ್ಯ. ಈ ರೀತಿಯ ನಾಟಕೀಯ ಹರಕತೆಗೆ ಕಾನೂನು ಬಲವಾಗಿ ಉತ್ತರ ನೀಡುತ್ತದೆ,” ಎಂದು ತಿಳಿಸಿದ್ದಾರೆ.