ಬೆಳಗಾವಿ | ‘ರೀಲ್ಸ್ ರಾಜನ’ ಹುಚ್ಚಾಟ: ತಲ್ವಾರ್ ಹಿಡಿದು ರಿಲ್ಸ್ ಮಾಡಿದ ಯುವಕನ ವಿರುದ್ಧ ಪ್ರಕರಣ

Date:

ಸೋಶಿಯಲ್ ಮೀಡಿಯಾದಲ್ಲಿ ಫೇಮ್‌ಗಾಗಿ ವಿಭಿನ್ನವಾಗಿ ಕಾಣಿಸಿಕೊಳ್ಳಲು ಯುವಕರು ಅಪಾಯಕಾರಿಯಾದ ಹಾದಿ ಹಿಡಿದಿದ್ದಾರೆ. ಕೈಯಲ್ಲಿ ತಲ್ವಾರ್, ಲಾಂಗು, ಮಚ್ಚು ಹಿಡಿದು ಸಿನಿಮಾ ಶೈಲಿಯ ರೀಲ್ಸ್ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಈ ನಡುವೆ ಕಾನೂನು ಉಲ್ಲಂಘನೆ ಮಾಡಿದವರಿಗೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಅಥಣಿಯಲ್ಲಿ ನಡೆದ ಒಂದು ಪ್ರಕರಣ ಇದೀಗ ಸುದ್ದಿಯಾಗುತ್ತಿದೆ.

- Advertisement -

ಅಥಣಿ ಪಟ್ಟಣದ ಮಹಾಂತೇಶ ಸದಾಶಿವ ಮಾಳಿ ಎಂಬ ಯುವಕ ತನ್ನ ಇನ್ನಾ ಪೇಜ್‌ನಲ್ಲಿ ಕೈಯಲ್ಲಿ ತಲ್ವಾರ್ ಹಿಡಿದು, ನಟ ಶಿವರಾಜಕುಮಾರ್ ಅಭಿನಯದ “ಶಿವ” ಚಿತ್ರದ ‘ಅಂಡರ್ವಡ್ ಅಂದ್ರೆ ಇಷ್ಟ ಕಣೀ, ಹಳೆ ಲಾಂಗು ಅಂದ್ರೆ ಬೆಸ್ಟು ಕಣೀ’ ಎಂಬ ಹಾಡಿಗೆ ರೀಲ್ಸ್ ಮಾಡಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ, ಅಥಣಿ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

​ಮೋದಿ-ಶಾ ಅಸಲಿ ಮುಖ ಅನಾವರಣ: ಅಂಕಿತಾ ಭಂಡಾರಿ ಕೊಲೆ...

ವೇದಿಕೆಗಳಲ್ಲಿ ‘ಬೇಟಿ ಬಚಾವೋ’ ಎಂದು ಭಾಷಣ ಬಿಗಿಯುವ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು, ಹಾಡಹಗಲೇ ಕೊಲೆಯಾದ ಬಡ ಯುವತಿಯ ಸಾವಿನ ಸುತ್ತ ಕಳಂಕದ ಹುತ್ತ ಹೊತ್ತಿರುವ...

ನಿದ್ರೆಯಲ್ಲೂ ಮಿದುಳಿಗೆ ಮಸಾಜ್‌! ಮಾತ್ರೆಯಿಲ್ಲದೆ ಗಾಢ ನಿದ್ರೆ ತರಬಲ್ಲದೇ...

ಒತ್ತಡದ ಬದುಕಿನಲ್ಲಿ ನೆಮ್ಮದಿಯ ನಿದ್ರೆ ಎನ್ನುವುದೇ ಹಲವರ ಕನಸು. ನಿದ್ರೆಗಾಗಿ ಮಾತ್ರೆಗಳ ಮೊರೆ ಹೋಗುವವರ ಸಂಖ್ಯೆಯೂ ಕಡಿಮೆಯಿಲ್ಲ. ಇಂತಹವರ ಸಮಸ್ಯೆಗೆ ಪರ್ಯಾಯವೊಂದು ಸಿಕ್ಕರೆ ಹೇಗಿರಬಹುದು? ಮೆದುಳಿಗೆ ಅಲ್ಟ್ರಾಸೌಂಡ್‌ ತರಂಗಗಳ ಮೂಲಕ ಪ್ರಚೋದನೆ ನೀಡಿ...

ಸಾರ್ವಜನಿಕ ಸಭ್ಯತೆ ಮತ್ತು ಹೆಣ್ಣುಮಕ್ಕಳು ಮಾಡಿಕೊಳ್ಳುವ ಲೆಕ್ಕಾಚಾರಗಳು

ಫೀಲ್ಡ್‌ಗೆ ಇಳಿದು ಕೆಲಸ ಮಾಡುವಾಗ ಮಹಿಳಾ ಪತ್ರಕರ್ತೆಯರು ಎದುರಿಸುವ ರಿಸ್ಕ್ ಮತ್ತು ವರದಿ ಮಾಡುವ ಜವಾಬ್ದಾರಿ- ಇವೆರಡನ್ನೂ ನಿಭಾಯಿಸಬೇಕಾದಾಗ ಮಾಡಿಕೊಳ್ಳುವ ಲೆಕ್ಕಾಚಾರಗಳ ಬಗೆಗಿನ ಒಂದು ಸ್ವಾನುಭವ. ಕಳೆದ ಕೆಲವು ವಾರಗಳಿಂದ ಭಾರತದಲ್ಲಿ ಹೆಣ್ಣುಮಕ್ಕಳ ಮೇಲೆ...

ಈ ಹಿಂದೆ ಬೆಳಗಾವಿ ಜಿಲ್ಲಾ ಎಸ್‌ಪಿ ಯುವಕರು ಈ ರೀತಿಯ ಕಾನೂನು ಉಲ್ಲಂಘನೆಯಿಂದ ದೂರವಿರಬೇಕು ಎಂದು ಎಚ್ಚರಿಕೆ ನೀಡಿದ್ದರು. ಇದೀಗ ಪೊಲೀಸ್ ಇಲಾಖೆ, ಆಯುಧ ಪ್ರದರ್ಶನ ಮಾಡುತ್ತಾ ವಿಡಿಯೋ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.

ಅಥಣಿ ಠಾಣೆಯ ಪಿಎಸ್‌ಐ ಗಿರಿಮಲ್ಲಪ್ಪ ಉಪ್ಪಾರ ಅವರು, “ಸಮಾಜಿಕ ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದು ಎಲ್ಲರ ಕರ್ತವ್ಯ. ಈ ರೀತಿಯ ನಾಟಕೀಯ ಹರಕತೆಗೆ ಕಾನೂನು ಬಲವಾಗಿ ಉತ್ತರ ನೀಡುತ್ತದೆ,” ಎಂದು ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗ್ರಾಮೀಣ ರಾಜಕಾರಣದಲ್ಲಿ ಮಹಿಳಾ ಮೀಸಲಾತಿ ಹೆಸರಿಗಷ್ಟೇ; ಇಂದಿಗೂ ಅಧಿಕಾರ ಪುರುಷರ ವಶ!

ಗ್ರಾಮೀಣ ರಾಜಕಾರಣದಲ್ಲಿ ಮಹಿಳಾ ಮೀಸಲಾತಿಯ ಮೂಲಕ ಅನೇಕ ಮಹಿಳೆಯರು ಜನಪ್ರತಿನಿಧಿಗಳಾಗಿದ್ದಾರೆ. ಆದರೂ...

ಬೆಳಗಾವಿ | ರಾಜ್ಯೋತ್ಸವದಂದು ಕೌಜಲಗಿ ನೂತನ ತಾಲ್ಲೂಕು ಕೇಂದ್ರ ಘೋಷಿಸಿ

ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ವ್ಯಾಪ್ತಿಯಲ್ಲಿರುವ ಕೌಜಲಗಿ ಪಟ್ಟಣವನ್ನು ನವೆಂಬ‌ರ್ 1ರ...

ಬೆಳಗಾವಿ | ದುರ್ಗಾ ದೇವಿ ಮೆರವಣಿಗೆಯಲ್ಲಿ ಭೀಕರ ಅಪಘಾತ: ಮೂವರು ಸಾವು, 10ಕ್ಕೂ ಹೆಚ್ಚು ಜನರಿಗೆ ಗಾಯ

ದುರ್ಗಾ ಮಾತಾ ದೌಡ ದೇವಿ ಮೆರವಣಿಗೆಯಲ್ಲಿ ಸಾಗುತ್ತಿದ್ದ ವಾಹನಕ್ಕೆ ಹಿಂಬದಿಯಿಂದ ಬಂದ...