ಬೆಳಗಾವಿ ಜಿಲ್ಲೆಯ ಸಂತಿ ಬಸ್ತವಾಡ ಗ್ರಾಮದಲ್ಲಿ ಹಿಂದೂ ಯುವತಿಯನ್ನು ಮುಸ್ಲಿಂ ಯುವಕ ಕಿಡ್ನಾಪ್ ಮಾಡಿದ್ದಾನೆ ಎಂಬ ಕುಟುಂಬದ ಆರೋಪಕ್ಕೆ ಇದೀಗ ತಿರುವು ಲಭಿಸಿದೆ. 22 ದಿನಗಳ ಹಿಂದೆ ನಾಪತ್ತೆಯಾಗಿದ್ದ ರಾಧಿಕಾ ಮುಚ್ಚಂಡಿ ಮತ್ತು ಸದ್ರುದಿನ್ ಬೇಪಾರಿ, ಮುಂಬೈನಲ್ಲಿ ಪತ್ತೆಯಾಗಿದ್ದು, ಯುವತಿಯ ಹೇಳಿಕೆಯಿಂದ ಹೊಸ ಸತ್ಯ ಹೊರಬಿದ್ದಿದೆ.
ಸಂತಿ ಬಸ್ತವಾಡ ಗ್ರಾಮದ ರಾಧಿಕಾ ನಾಪತ್ತಿಯಾದ ಬಳಿಕ, ಅವರ ತಾಯಿ ದೀಪಾ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ದೂರು ದಾಖಲಿಸಿದ್ದರು. ಪ್ರಕರಣ ಗಂಭೀರ ಸ್ವರೂಪ ಪಡೆದಿದ್ದರೂ, ಮುಂಬೈನಲ್ಲಿ ಪತ್ತೆಯಾದ ಜೋಡಿಯನ್ನು ವಿಚಾರಣೆ ನಡೆಸಿದಾಗ, “ನಾನು ಸದ್ರುದಿನ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದೇನೆ. ನನ್ನ ಇಚ್ಛೆಗೆ ವಿರುದ್ಧವಾಗಿ ಯಾರೂ ಕಿಡ್ನಾಪ್ ಮಾಡಿಲ್ಲ” ಎಂದು ರಾಧಿಕಾ ಸ್ಪಷ್ಟಪಡಿಸಿದ್ದಾರೆ.
ಈ ಹೇಳಿಕೆಯಿಂದ ಕುಟುಂಬದ ಆರೋಪ ತಿರಸ್ಕೃತವಾಗಿದ್ದು, ಇದು ಸ್ವಯಂಪ್ರೇರಿತ ಪ್ರೇಮವಿವಾಹ ಎಂದು ತಿಳಿದುಬಂದಿದೆ. ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದ್ದು