ಬಳ್ಳಾರಿ ವಕೀಲರ ಸಂಘದ ಪದಾಧಿಕಾರಿಗಳ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆಯಲ್ಲಿ ವಕೀಲರಾದ ಎಲ್.ಟಿ. ಶೇಖರ್ ನೇತೃತ್ವದ ಎ ತಂಡ ವಿರುದ್ಧ ಬಿ ತಂಡದ ವಕೀಲರಾದ ರಾಮ ಬ್ರಹಂ ಅವರ ತಂಡ ಗೆಲುವು ಸಾಧಿಸಿದೆ.
ನಗರದ ತಾಳೂರು ರಸ್ತೆಯಲ್ಲಿನ ನೂತನ ನ್ಯಾಯಾಲಯ ಸಂಕೀರ್ಣ ಆವರಣದಲ್ಲಿರುವ ವಕೀಲರ ಸಂಘದ ಕಟ್ಟಡದಲ್ಲಿ ಶುಕ್ರವಾರ ಬಳ್ಳಾರಿ ವಕೀಲರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಸಹ ಕಾರ್ಯದರ್ಶಿ, ಖಜಾಂಚಿ, ಕಾರ್ಯಕಾರಿ ಸಮಿತಿ ಸೇರಿ ಒಟ್ಟು 27 ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶವನ್ನು ಚುನಾವಣೆ ಅಧಿಕಾರಿಗಳಾದ ವೆಂಕಟೇಶ್ವರ ರೆಡ್ಡಿ ಅವರು ಪ್ರಕಟಿಸಿದರು.
ಎಲ್.ಟಿ. ಶೇಖರ್ ನೇತೃತ್ವದ ಎ ತಂಡದಲ್ಲಿ
ಪಾಧ್ಯಕ್ಷರಾಗಿ ಯಶೋಧರ ಮೂರ್ತಿ, ಕಾರ್ಯದರ್ಶಿಯಾಗಿ ಅನ್ಸರ್ ಭಾಷಾ, ಖಜಾಂಚಿಯಾಗಿ ಕರೂರು ಬಸವರಾಜ್ , ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶೇಖಣ್ಣ, ಇರ್ಫಾನ್ , ನಾಗನಗೌಡ. ಟಿ, ರಾಘವೇಂದ್ರ ಮೋಹನ್ , ಬಸರೆಡ್ಡಿ , ಹೆಚ್.ಹುಲುಗಪ್ಪ, ಎಂ.ಕೆ. ಮೂರ್ತಿ, ಗೋವಿಂದಪ್ಪ ಅವರು ಗೆಲುವು ಸಾಧಿಸಿದ್ದಾರೆ.

ರಾಮ ಬ್ರಹಂ ನೇತೃತ್ವದ ಬಿ ತಂಡದಲ್ಲಿ ಅಧ್ಯಕ್ಷರಾಗಿ ರಾಮ ಬ್ರಹ್ಮಂ, ಜಂಟಿ ಕಾರ್ಯದರ್ಶಿ ಎರ್ರೆಮ್ಮ , ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶೇಖಪ್ಪ, ಮಲ್ಲಿಕಾರ್ಜುನ.ಡಿ ಅವರು ಗೆಲುವು ಸಾಧಿಸಿದ್ದಾರೆ.
ಕಾರ್ಯಕಾರಿ ಸಮಿತಿಯ 12 ಸ್ಥಾನಗಳಲ್ಲಿ ಎರಡು ಸ್ಥಾನ ಮಹಿಳೆಯರಿಗೆ ಮೀಸಲಾಗಿದ್ದು ವಕೀಲರಾದ ಸ್ವಪ್ನ .ಸಿ., ಮಂಜುಳಾ ಎಸ್.ಆರ್. ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ..
ವರದಿ : ರಾಧಾಕೃಷ್ಣ
