ಅಕ್ರಮ ಲೈಂಗಿಕ ಚಟುವಟಿಕೆ, ಮಹಿಳೆಯರ ಸಾಗಾಟ ಮಾಡುತ್ತಿದ್ದ ಅರೋಪದ ಮೇಲೆ ಮಹಿಳೆಯೊಬ್ಬರನ್ನು ಬಳ್ಳಾರಿ ನಗರದ ಕೌಲ್‌ಬಜಾರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಡಿಹಟ್ಟಿ ಗ್ರಾಮದ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದ ಬಂಧಿತ ಮಹಿಳೆ, ಅಲ್ಲಿಗೆ ಬೇರೆ ಬೇರೆ ಕಡೆಗಳಿಂದ ಮಹಿಳೆಯರನ್ನು ಸಾಗಣೆ ಮಾಡುತ್ತಿರುವುದಾಗಿಯೂ, ಮಹಿಳೆಯರನ್ನು ಅಕ್ರಮ ಲೈಂಗಿಕ ಚಟುವಟಿಕೆ ಬಳಸಿಕೊಂಡು ಹಣ ಸಂಪಾದನೆ ಮಾಡುತ್ತಿರುವುದಾಗಿಯೂ ಪೊಲೀಸರಿಗೆ ಮಾಹಿತಿ ದೊರೆತಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದರು ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಹೆಣ್ಣನ್ನು ನೋಡುವ ದೃಷ್ಟಿಕೋನ ಬದಲಾಯಿಸಿಕೊಳ್ಳಿ: ನ್ಯಾ. ರಾಜೇಶ್ವರಿ
“ಅಕ್ರಮ ಲೈಂಗಿಕ ಚಟುವಟಿಕೆ ನೆಡೆಸುತ್ತಿರುವ ಆರೋಪದ ಮೇಲೆ ಮಹಿಳೆಯ ವಿರುದ್ಧ ಐಟಿಪಿ(ಅನೈತಿ ಸಾಗಣೆ ತಡೆ) ಕಾಯ್ದೆ ಅಡಿ ಮತ್ತು ಐಪಿಸಿ 370 ಅಡಿಯಲ್ಲಿ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
