ಪಕ್ಕದ ಮನೆಯ ಕಾಮುಕನ ಮಾನಸಿಕ, ದೈಹಿಕ ಕಿರುಕುಳಕ್ಕೆ ನೊಂದು 16 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತಾಳೂರ ಗ್ರಾಮದಲ್ಲಿ ನಡೆದಿದೆ.
‘ಪಕ್ಕದ ಮನೆಯ ಸುರೇಶ ನನಗೆ ಮಾನಭಂಗ ಮಾಡಿ, ಮಾನಸಿಕ ಕಿರುಕುಳ ನೀಡಿದ್ದಾನೆ’ ಎಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಆತನ ಹೆಸರು ಬರೆದಿಟ್ಟು, ಬಾಲಕಿ ನೇಣಿಗೆ ಶರಣಾಗಿದ್ದಾಳೆ. ಅವನನ್ನು ಬಿಡಬೇಡಿ ಎಂದು ಅಪ್ರಾಪ್ತೆ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾಳೆ.
ಬಾಲಕಿಯ ಪೋಷಕರು ಸಂಬಂಧಿಕರ ಮದುವೆಗೆ ಹೋಗಿದ್ದ ಸಂದರ್ಭವನ್ನು ನೋಡಿ ಹಾಗೂ ಯಾರೂ ಇಲ್ಲದಿದ್ದನ್ನು ನೋಡಿ ಸುರೇಶ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪ ಕೇಳಿ ಬಂದಿದೆ.
ಈ ಕುರಿತು ತೋರಣಗಲ್ ಪಿಎಸ್ಐ ಅವರನ್ನು ಈದಿನ.ಕಾಮ್ ಸಂಪರ್ಕಿಸಿದಾಗ “ಅದು ಅತ್ಯಾಚಾರ ಹಾಗೂ ಕೊಲೆ ಎಂದು ತಿಳಿದು ಬಂದಿಲ್ಲ. ನೇಣು ಬಿಗಿದ ಸ್ಥಿತಿಯಲ್ಲಿ ಇತ್ತು. ಪೋಸ್ಟ್‌ಮಾರ್ಟಮ್‌ಗೆ ಹೋಗಿದೆ. ಅದರ ವರದಿ ಬಂದ ನಂತರ ಮುಂದಿನ ತನಿಖೆ ಮಾಡಲಾಗುವುದು” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಮಂಗಳೂರು ಗುಂಪು ಹತ್ಯೆ | ಪಾಕ್ ಪರ ಘೋಷಣೆ ಕೂಗಿದ್ದಕ್ಕೆ ಯಾವುದೇ ಸಾಕ್ಷಿ ಸಿಕ್ಕಿಲ್ಲ: ಪೊಲೀಸ್ ಕಮಿಷನರ್
ಸದ್ಯ ಆರೋಪಿ ಸುರೇಶನನ್ನು ತೋರಣಗಲ್ ಪೊಲೀಸರು ವಶಕ್ಕೆ ಪಡೆದಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.