ತೆಲುಗು ಸಮುದಾಯ ಇರುವವರೆಗೂ ತೆಲುಗು ಜನರ ಹೃದಯದಲ್ಲಿ ಶಾಶ್ವತವಾಗಿ ಉಳಿಯುವ ಏಕೈಕ ನಾಯಕ ನಂದಮುರಿ ತಾರಕರಾಮ ರಾವ್ (ಎನ್‌ಟಿಆರ್) ಎಂದು ಆಂಧ್ರದ ಮಾಜಿ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಅವರು ಹೇಳಿದರು.
ಬಳ್ಳಾರಿಯಲ್ಲಿ ಎನ್‌ಟಿಆರ್ ಅವರ ಪುತ್ಥಳಿಯನ್ನು ಅನಾವರಣಗೊಳಿಸಿ ಅವರು ಮಾತನಾಡಿದರು. “ಕೆಲ ಜನರು ಹುಟ್ಟುತ್ತಾರೆ ಮತ್ತು ಸಾಯುತ್ತಾರೆ. ಆದರೆ, ಎನ್‌ಟಿಆರ್ ತೆಲುಗು ಜಾತಿ ಇರೋವರೆಗೆ ತೆಲುಗು ಜನರ ಹೃದಯದಲ್ಲಿ ಶಾಶ್ವತವಾಗಿ ಉಳಿಯುವ ಏಕೈಕ ನಾಯಕಯಾಗಿದ್ದಾರೆ” ಎಂದರು.
“ಎನ್‌ಟಿಆರ್ ಅವರ ಜಯಂತೋತ್ಸವದ ಅಂಗವಾಗಿ ಬಳ್ಳಾರಿಯಲ್ಲಿ ಪ್ರತಿಮೆ ಪ್ರತಿಷ್ಠಾಪನೆ ಮಾಡಿರುವುದು ಹೆಮ್ಮೆ ಪಡುವಂತೆ ವಿಷಯವಾಗಿದೆ. ಎನ್‌ಟಿಆರ್ ಅವರು ತೆಲುಗು ಜನರ ಕೀರ್ತಿ, ಭಾರತದ ಸಂಪತ್ತು ಇದ್ದಂತೆ. ಅವರು ಫುಡ್ ಸೆಕ್ಯೂರಿಟಿ ಬಿಲ್‌ಅನ್ನು 1982ರಲ್ಲಿ ಜಾರಿ ಮಾಡಿದ್ದರು” ಎಂದರು.
ಕಾರ್ಯಕ್ರಮದಲ್ಲಿ ಸಚಿವ ನಾಗೇಂದ್ರ, ಶಾಸಕ ನಾರಾ ಭರತ್ ರೆಡ್ಡಿ, ಮೇಯರ್ ತ್ರಿವೇಣಿ,ಉಪ ಮೇಯರ್ ಜಾನಕಿ, ಕಮ್ಮ ಸಂಘದ ಅಧ್ಯಕ್ಷರಾದ ಮುಂಡ್ಲೂರು ಅನೂಪ್ ಕುಮಾರ್, ಕೋನಂಕಿ ರಾಮಪ್ಪ, ರಾಮಾಂಜಿನಿ, ವಿವೇಕ್, ನಂದೀಶ್ ಸೇರಿದಂತೆ ಮತ್ತಿತರ ಇದ್ದರು.