ಧರ್ಮಸ್ಥಳ ಗ್ರಾಮದ ವ್ಯಾಪ್ತಿಯಲ್ಲಿ ನೂರಾರು ಹೆಣಗಳನ್ನು ನನ್ನಿಂದ ಬಲವಂತವಾಗಿ ಹೂತು ಹಾಕಿಸಲಾಗಿದೆ ಎಂದು ಮಾಜಿ ಸ್ವಚ್ಚತಾ ಕಾರ್ಮಿಕ ನೀಡಿದ ದೂರಿನ ಹಿನ್ನಲೆ ರಚಿಸಲಾದ ಎಸ್‌ಐಟಿ ತನಿಖೆಯ ಕುರಿತು ನಾಡಿನ ಜನತೆಗೆ ನಂಬಿಕೆ ಇದೆ. ಈ ದೂರುದಾರ ನೀಡಿರುವ ದೂರಿನಿಂದ ಎಷ್ಟೇರ ಮಟ್ಟಿ ಅನ್ಯಾಯವಾಗಿದೆ ಎಂದು ಸಾರ್ವಜನಿಕರಿಗೆ ಗೊತ್ತಾಗಿದೆ. ಆದರೆ ಬಿಜೆಪಿ ಹಾಗೂ ಪಟ್ಟಭದ್ರ ಶಕ್ತಿಗಳು ಎಸ್‌ಐಟಿ ತನಿಖೆಯನ್ನು ಸ್ಥಗಿತಗೊಳಿಸಲು ಕೆಲವರು ಷಡ್ಯಂತ್ರ ಮಾಡುತ್ತಿದ್ದಾರೆ. ಬಿಜೆಪಿಯವರ ಮೇಲೆ ಬಲಾಢ್ಯರ ಋಣ ಇರುವುದರಿಂದ ಅವರನ್ನು ರಕ್ಷಿಸಲು ಎಸ್‌ಐಟಿ ತನಿಖೆ ನಡೆಯದಂತೆ ಒತ್ತಡ ಹಾಕುತ್ತಿದ್ದಾರೆ. ಸರ್ಕಾರ ಇಂತಹ ಪಿತೂರಿ, ಒತ್ತಡಕ್ಕೆ ಒಳಗಾಗದೆ ಎಸ್‌ಐಟಿಯ ತನಿಖೆಯನ್ನು ಪೂರ್ಣ ಪ್ರಮಾಣದಲ್ಲಿ ನಡೆಸಲು ಅನುವು ಮಾಡಿಕೊಡಬೇಕು ಎಂದು ಸಮಾನ ಮನಸ್ಕ ಸಂಘಟನೆಗಳು ನಗರದ ಬೋಳಾರದಲ್ಲಿರುವ ಎಕೆಜಿ ಭವನದಲ್ಲಿ ಬುಧವಾರ ನಡೆದ ದುಂಡು ಮೇಜಿನ ಸಭೆಯಲ್ಲಿ ನಿರ್ಣಯ ಅಂಗೀಕರಿಸಿದೆ.
ಇದನ್ನೂ ಓದಿ: ಮಂಗಳೂರು | ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರು
ಧರ್ಮಸ್ಥಳ ಗ್ರಾಮದ ವ್ಯಾಪ್ತಿಯಲ್ಲಿ ಅನ್ಯಾಯವಾಗುತ್ತಿರುವುದು ಎಲ್ಲರಿಗೂ ಗೊತ್ತಿದೆ. ಆದರೆ ಪ್ರಾಣಭಯದಿಂದ ಯಾರು ಕೂಡ ಸತ್ಯವನ್ನು ಹೇಳಲು ಮುಂದೆ ಬರುತ್ತಿಲ್ಲ. ಈಗ ಒಬ್ಬ ದೂರುದಾರ ಮುಂದೆ ಬಂದಿರುವುದನ್ನು ನೋಡಿ ಹಲವು ಎಸ್‌ಐಟಿ ಮುಂದೆ ದೂರು ನೀಡಲು ಬರುತ್ತಿದ್ದಾರೆ. ದೂರುದಾರರು ನೀಡುತ್ತಿರುವ ದೂರಿನಿಂದ ಪ್ರಬಲ ವ್ಯಕ್ತಿಗಳು ಮಾಡುತ್ತಿರುವ ಅನ್ಯಾಯ, ಅಕ್ರಮಗಳು ರಾಜ್ಯದ ಜನತೆಯ ಈಗ ಮುನ್ನೆಲೆಗೆ ಬಂದಿದೆ. ಸರ್ಕಾರವು ಎಲ್ಲ ರೀತಿಯಲ್ಲಿ ಸಂಪೂರ್ಣವಾಗಿ ತನಿಖೆ ಮಾಡಿ ತಪ್ಪಿಸ್ಥತರಿಗೆ ಶಿಕ್ಷೆ ನೀಡಬೇಕು. ಕಾನೂನು ಮುಂದೆ ಯಾರು ಕೂಡ ದೊಡ್ಡವರು ಅಲ್ಲ.
ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಪದ್ಮಲತಾ, ವೇದದಲ್ಲಿ, ಮಾವುತ ನಾರಾಯಣ, ಯಮುನ, ಸೌಜನ್ಯ ಸೇರಿದಂತೆ ಪತ್ತೆಯಾಗದ ಕೊಲೆ ಪ್ರಕರಣಗಳು, ಭೂಕಬಳಿಕೆ, ಮೈಕ್ರೊ ಫೈನಾನ್ಸ್ ದೌರ್ಜನ್ಯಗಳು, ಆರ್ಥಿಕ ಅಪರಾಧದ ಆರೋಪದ ಪ್ರಕರಣಗಳನ್ನು ಪರಿಪೂರ್ಣ ವಾದ ತನಿಖೆಗೆ ಒಳಪಡಿಸಬೇಕು. ಈ ಎಲ್ಲಾ ಪ್ರಕರಣವನ್ನು ತನಿಖೆ ಮಾಡಲು ಸಮಸ್ಯೆಗಳಿದ್ದರೇ ಪ್ರತ್ಯೇಕವಾದ ವಿಶೇಷ ತನಿಖಾ ತಂಡವನ್ನು ರಚಿಸಬೇಕು ಎಂದು ಸಮಾನ ಮನಸ್ಕ ಸಂಘಟನೆಗಳು ಆಗ್ರಹಿಸಿದೆ.

ಸಭೆಯ ಅಧ್ಯಕ್ಷತೆ ವಾಸುದೇವ ಉಚ್ಚಿಲ ವಹಿಸಿದ್ದರು. ಸಭೆಯಲ್ಲಿ ಪ್ರೊ ನರೇಂದ್ರ ನಾಯಕ್, ನ್ಯಾಯವಾದಿ ಯಶವಂತ ಮರೋಳಿ, ದಲಿತ ನಾಯಕ ಎಂ ದೇವದಾಸ್, ಕೃಷ್ಣಾನಂದ ಡಿ, ಕೃಷ್ಣಪ್ಪ ಕೊಣಾಜೆ, ಸಾಮಾಜಿಕ ಹೋರಾಟಗಾರ ಬಿ ವಿಷ್ಣುಮೂರ್ತಿ, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಯಾದವ ಶೆಟ್ಟಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ ಶೇಖರ್, ಆಮ್ ಆದ್ಮಿ ಪಕ್ಷದ ಎಸ್ ಎಲ್ ಪಿಂಟೊ, ಸೀಮಾ ಮಡಿವಾಳ, ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಕರುಣಾಕರ ಮಾರಿಪಳ್ಳ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಉಪಾಧ್ಯಕ್ಷ ಸುಕುಮಾರ್ ತೊಕ್ಕೊಟ್ಟು, ರೈತಸಂಘ ಪ್ರಮುಖರಾದ ಕೃಷ್ಣಪ್ಪ ಸಾಲ್ಯಾನ್, ಓಸ್ವಾಲ್ಡ್ ಫೆರ್ನಾಂಡಿಸ್, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಕರಿಯ ಕೆ, ಕೃಷ್ಣ ಇನ್ನಾ, ಜನವಾದಿ ಮಹಿಳಾ ಸಂಘಟನೆಯ ಪ್ರಮೀಳಾ, ಮಾನಸ, ಮಹಿಳಾ ಒಕ್ಕೂಟದ ಮಂಜುಳಾ, ಸುನಂದಾ ಕೊಂಚಾಡಿ, ಅಸುಂತಾ ಡಿ ಸೋಜ, ಕಾರ್ಮಿಕ ಮುಖಂಡರಾದ ಬಿ ಎಮ್ ಭಟ್, ಈಶ್ವರ ಪದ್ಮುಂಜ, ಯೋಗೀಶ್ ಜಪ್ಪಿನಮೊಗರು, ರಂಗ ಕರ್ಮಿ ಪ್ರಭಾಕರ ಕಾಪಿಕಾಡ್ ಮತ್ತಿತರರು ಉಪಸ್ಥಿತರಿದ್ದರು.