ಮೂರು ದಿನಗಳಿಂದ ನಾಪತ್ತೆಯಾಗಿದ್ದ ಬೆಂಗಳೂರಿನ 6ನೇ ತರಗತಿ ವಿದ್ಯಾರ್ಥಿ ಹೈದರಾಬಾದ್‌ನಲ್ಲಿ ಪತ್ತೆ

Date:

Advertisements

ಕಳೆದ ಮೂರು ದಿನಗಳ ಹಿಂದೆ ಬೆಂಗಳೂರಿನಿಂದ ನಾಪತ್ತೆಯಾಗಿದ್ದ 12 ವರ್ಷದ ವಿದ್ಯಾರ್ಥಿ ಮೂರು ದಿನಗಳ ಬಳಿಕ ಹೈದರಾಬಾದ್‌ನಲ್ಲಿ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಬೆಂಗಳೂರಿನ ವೈಟ್‌ಫೀಲ್ಡ್ ಪೊಲೀಸರು, “ಜ.21ರ ಭಾನುವಾರದಂದು ಬೆಂಗಳೂರಿನಿಂದ ನಾಪತ್ತೆಯಾಗಿದ್ದ ದೀನ್ಸ್ ಅಕಾಡೆಮಿಯ 6ನೇ ತರಗತಿ ವಿದ್ಯಾರ್ಥಿ ಪರಿಣವ್(12 ವರ್ಷ) ಇಂದು ಬೆಳಗ್ಗೆ ಹೈದರಾಬಾದ್‌ನ ನಾಂಪಲ್ಲಿ ಮೆಟ್ರೋ ನಿಲ್ದಾಣದಲ್ಲಿ ಪತ್ತೆಯಾಗಿದ್ದಾನೆ. ಪೋಷಕರಿಗೆ ಮಾಹಿತಿ ನೀಡಲಾಗಿದ್ದು, ಅವರು ಆತನನ್ನು ಮನೆಗೆ ಕರೆದುಕೊಂಡು ಬರಲು ಹೈದರಾಬಾದ್‌ಗೆ ತೆರಳಲಿದ್ದಾರೆ” ಎಂದು ತಿಳಿಸಿದ್ದಾರೆ.

ಭಾನುವಾರ ಮಧ್ಯಾಹ್ನ 12.15ರ ಸುಮಾರಿಗೆ ನಾಪತ್ತೆ ಆಗಿದ್ದ. ವೈಟ್‌ಫೀಲ್ಡ್‌ನ ಅಲೆನ್‌ ಟ್ಯೂಷನ್ ಸೆಂಟರ್‌ಗೆ ಮಗನನ್ನು ಕಳುಹಿಸಿ, ತಂದೆ ಮನೆಗೆ ಬಂದಿದ್ದರು. ಮಧ್ಯಾಹ್ನ ಕರೆತರಲು ಹೋಗುವುದು ತಡವಾಗಿದ್ದರಿಂದ ನಾಪತ್ತೆ ಆಗಿದ್ದ ಎನ್ನಲಾಗಿದೆ.

Advertisements

ಬೆಂಗಳೂರಿನ ಡೀನ್ಸ್ ಅಕಾಡೆಮಿಯ 6ನೇ ತರಗತಿ ವಿದ್ಯಾರ್ಥಿಯಾಗಿರುವ ಪರಿಣವ್, ಕೊನೆಯದಾಗಿ ಜ.21ರಂದು ಸಂಜೆ 04:15ರ ಸುಮಾರಿಗೆ ಮೆಜೆಸ್ಟಿಕ್‌ನಲ್ಲಿರುವ 19ಸಿ ಬಸ್‌ನಿಲ್ದಾಣದ ಫ್ಲ್ಯಾಟ್‌ಫಾರಂನಲ್ಲಿದ್ದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ತನ್ನ ಶಾಲೆಯ ಬ್ಯಾಗ್ ಹಾಗೂ ಹಾಕಿಕೊಂಡಿದ್ದ ಹಳದಿ ಬಣ್ಣದ ಟೀಶರ್ಟಿನೊಂದಿಗೆ ನಾಪತ್ತೆಯಾಗಿದ್ದನು.

ತಂದೆ ನೀಡಿದ ದೂರು ಆಧರಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದ ವೈಟ್‌ಫೀಲ್ಡ್ ಠಾಣೆ ಪೊಲೀಸರು, ನಾಲ್ಕು ತಂಡ ರಚಿಸಿ ಬಾಲಕನ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಚಲನವಲನಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದರೂ, ಎಲ್ಲೂ ಸಿಕ್ಕಿರಲಿಲ್ಲ.

ಆ ಬಳಿಕ ವೈಟ್‌ಫೀಲ್ಡ್‌ನ ಕೆಲವು ಸಾಮಾಜಿಕ ಕಾರ್ಯಕರ್ತರು ಸೋಷಿಯಲ್ ಮೀಡಿಯಾಗಳಲ್ಲಿ ಬಾಲಕನ ವಿವರಗಳನ್ನು ಹಾಕಿ, ಕಂಡವರು ತಕ್ಷಣ ಮಾಹಿತಿ ನೀಡುವಂತೆ ವಿನಂತಿಸಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ವಿನಂತಿಸಿದ ನಂತರ ಆತನಿಗಾಗಿ ತೀವ್ರ ಹುಡುಕಾಟ ನಡೆಸಲಾಯಿತಾದರೂ, ಎಲ್ಲೂ ಪತ್ತೆಯಾಗಿರಲಿಲ್ಲ. ಈ ನಡುವೆ ಮಾಧ್ಯಮಗಳಲ್ಲೂ ಸುದ್ದಿ ಪ್ರಕಟಿಸಲಾಗಿತ್ತು.

“ಇಂದು ಬೆಳಗ್ಗೆ ಕೆಲಸದ ನಿಮಿತ್ತ ಹೈದರಾಬಾದ್‌ಗೆ ತೆರಳಿದ್ದ ಬೆಂಗಳೂರಿನ ನಿವಾಸಿ ವಂದನಾ ಎಂಬುವವರು ಹೈದರಾಬಾದ್‌ನ ನಾಂಪಲ್ಲಿ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋ ಕಾಯುತ್ತಿದ್ದಾಗ ಬಾಲಕ ಪರಿಣವ್ ಕಣ್ಣಿಗೆ ಬಿದ್ದಿದ್ದಾನೆ. ಸೋಷಿಯಲ್ ಮೀಡಿಯಾದ ಪೋಸ್ಟರ್‍‌ ಅನ್ನು ವಂದನಾ ಅವರು ನೋಡಿದ್ದರು. ಅನುಮಾನಗೊಂಡು ವಿಚಾರಿಸಿದಾಗ ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಹುಡುಗ ಈತನೇ ಎಂದು ಗೊತ್ತಾಗಿದೆ. ಆ ಬಳಿಕ ಕೂಡಲೇ ನಮಗೆ ಹಾಗೂ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆತನನ್ನು ಕರೆದುಕೊಂಡು ಬರಲು ಹೈದರಾಬಾದ್‌ಗೆ ತಲುಪಿದ್ದೇವೆ” ಎಂದು ಬಾಲಕ ಪರಿಣವ್ ತಂದೆ ಇಂಜಿನಿಯರ್ ಸುಕೇಶ್ ಈ ದಿನ.ಕಾಮ್‌ಗೆ ತಿಳಿಸಿದ್ದಾರೆ.

“ನನ್ನ ಮಗ ಕೊನೆಗೂ ಹೈದರಾಬಾದ್‌ನಲ್ಲಿ ಸಿಕ್ಕಿದ್ದಾನೆ. ಆತನನ್ನು ಹುಡುಕಲು ಸೋಷಿಯಲ್ ಮೀಡಿಯಾ ಮೂಲಕ ನೆರವಾದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ” ಎಂದು ತಾಯಿ ನಿವೇದಿತಾ ತಿಳಿಸಿದ್ದಾರೆ.

ಟ್ಯೂಷನ್‌ ಸೆಂಟರ್‌ನಿಂದ ಮಾರತ್ತಹಳ್ಳಿವರೆಗೆ ಬಾಲಕ ನಡೆದುಬಂದಿದ್ದು, ನಂತರ ಬಿಎಂಟಿಸಿ ಬಸ್ ಹತ್ತಿ ಮೆಜೆಸ್ಟಿಕ್‌ಗೆ ಬಂದಿದ್ದ. ಬೆಂಗಳೂರಿನಿಂದ ಮೊದಲು ಮೈಸೂರು ಕಡೆಗೆ ಹೋಗಿದ್ದ ಬಾಲಕ ಪರಿಣವ್, ಮೈಸೂರು ರೈಲು ನಿಲ್ದಾಣದಿಂದ ಚೆನ್ನೈ ರೈಲು ನಿಲ್ದಾಣಕ್ಕೆ ಹೋಗಿದ್ದಾನೆ, ಬಳಿಕ ಅಲ್ಲಿಂದ ರೈಲಿನ ಮೂಲಕ ಹೈದರಾಬಾದ್‌ಗೆ ತೆರಳಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಹೇಗೆ? ಎಂಬುದರ ಕುರಿತು ಒಂದು ದಿನದ ಕಾರ್ಯಗಾರ

ವಿದ್ಯಾರ್ಥಿಗಳು ಇಂದಿನ ಆಧುನಿಕ ಜಗತ್ತಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಲೇಬೇಕಾಗಿದೆ. ಎಷ್ಟೇ ಕಷ್ಟ...

ಮಂಗಳೂರು | ಇಲಾಖಾಧಿಕಾರಿಗಳ ಹರಸಾಹಸ, ದಡ ಸೇರಿದ ಜೋಡಿ ಕಾಡಾನೆಗಳು

ಕೆಲವು ದಿನಗಳಿಂದ ನೆಕ್ಕಿಲಾಡಿ ಬಿಳಿಯೂರು ಭಾಗದಲ್ಲಿ ಕಾಣಿಸಿಕೊಂಡಿದ್ದ ಜೋಡಿ ಕಾಡಾನೆಗಳು ಭಾನುವಾರ...

ಕಲಬುರಗಿ | ಮಚ್ಚಿನಿಂದ ಕೊಚ್ಚಿ ಯುವಕನ ಬರ್ಬರ ಕೊಲೆ

ಕಲಬುರಗಿ ನಗರದ ಕೆಎಸ್‌ಆರ್‌ಟಿಸಿ ಕಾಲೋನಿಯಲ್ಲಿ ಭಾನುವಾರ ತಡರಾತ್ರಿ ಯುವಕನೊಬ್ಬರನ್ನು ಬರ್ಬರವಾಗಿ ಕೊಲೆ...

ಸುಳ್ಯ | ಅಕ್ರಮ ಕೆಂಪು ಕಲ್ಲು ಸಾಗಾಟ; ಖಾಕಿ ದಾಳಿ, ನಾಲ್ಕು ಲಾರಿ ವಶಕ್ಕೆ

ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ ಮಾಡುತ್ತಿದ್ದ ಆರೋಪದಡಿ ನಾಲ್ಕು ಲಾರಿಗಳನ್ನು ಸುಳ್ಯ...

Download Eedina App Android / iOS

X