ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಇ-ಚಲನ್ ಮೂಲಕ ದಂಡ ವಿಧಿಸಿ ಸಂಗ್ರಹಿಸಲಾಗುತ್ತಿದೆ. ಇಡೀ ದೇಶದಲ್ಲಿಯೇ ಕರ್ನಾಟಕ ಇ-ಚಲನ್ ಮೂಲಕ ದಂಡ ಸಂಗ್ರಹಣೆಯಲ್ಲಿ ಮುಂದಿದೆ ಎಂದು ಸಂಚಾರ ಮತ್ತು ರಸ್ತೆ ಸುರಕ್ಷತೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅಲೋಕ್ ಕುಮಾರ್ ಹೇಳಿದ್ದಾರೆ.
ಈ ಬಗ್ಗೆ ಗುರುವಾರ ಎಕ್ಸ್(ಟ್ವೀಟ್) ಮಾಡಿರುವ ಅವರು, “ಇ-ಚಲನ್ ಬಳಸಿ ಸಂಚಾರ ಉಲ್ಲಂಘನೆ ಸಂಬಂಧಿತ ದಂಡ ವಸೂಲಾತಿ ಮಾಡಲಾಗುತ್ತಿದೆ. ಇಡೀ ದೇಶದಲ್ಲಿ ಈ ಕ್ರಮದಲ್ಲಿ ಕರ್ನಾಟಕ ಬಹಳ ಮುಂದಿದೆ. ಕರ್ನಾಟಕದಿಂದ 50% ಕ್ಕಿಂತ ಹೆಚ್ಚು ಇ-ಚಲನ್ ಉತ್ಪಾದನೆ ಮಾಡಲಾಗುತ್ತಿದೆ. ಶೀಘ್ರದಲ್ಲೇ ಇಡೀ ರಾಜ್ಯವು ಇ-ಚಲನ್ ವ್ಯಾಪ್ತಿಗೆ ಬರಲಿದೆ. ಹಸ್ತಚಾಲಿತ ರಸೀದಿ ವ್ಯವಸ್ಥೆಯನ್ನು ಕೈ ಬಿಡಲಾಗುವುದು” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ತರಾತುರಿ ಸಿಐಡಿ ಬದಲು ನ್ಯಾಯಾಂಗ ತನಿಖೆ ಆಗಬೇಕು: ಮುಖ್ಯಮಂತ್ರಿ ಚಂದ್ರು
ಆಗಸ್ಟ್ 1 ರಿಂದ 9 ರವರೆಗೆ ದೇಶಾದ್ಯಂತ ವಿತರಿಸಲಾದ ಇ-ಚಲನ್ಗಳ ವಿವರಗಳನ್ನು ಎಡಿಜಿಪಿ ಅಲೋಕ್ ಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.