- ಪ್ರೀಯಕರನಿಗೆ ₹50 ಸಾವಿರ ಹಣ ನೀಡಿ, ಬಾಡಿಗೆ ಮನೆ ಮಾಡಿಕೊಟ್ಟಿದ್ದ ಮಹಿಳೆ
- ಆರೋಪಿ ಗಣೇಶ್ನನ್ನು ಬಂಧಿಸಿದ ಬಸವೇಶ್ವರ ನಗರ ಪೊಲೀಸರು
ಬೆಂಗಳೂರಿನ ಜೆಸಿ ನಗರದಲ್ಲಿ ವಿವಾಹೇತರ ಸಂಬಂಧಕ್ಕೆ 35 ವರ್ಷದ ಮಹಿಳೆ ಬಲಿಯಾದ್ದಾಳೆ. ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಸರಗುಣಂ ಮೃತ ಮಹಿಳೆ. ಈಕೆ ಮನೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು. ಈಕೆಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದರು.
ಗಣೇಶ್ ಎಂಬ 22 ವರ್ಷದ ಯುವಕನ ಜತೆಗೆ ಸರಗುಣಂ ವಿವಾಹೇತರ ಸಂಬಂಧ ಹೊಂದಿದ್ದಳು. ಗಣೇಶ್ ಆಟೋ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಗಣೇಶನ ಪ್ರೇಮದ ಬಲೆಯಲ್ಲಿ ಬಿದ್ದ ಮಹಿಳೆ ಆತನಿಗೆ ₹50 ಸಾವಿರ ಹಣ ನೀಡಿ, ಬಾಡಿಗೆ ಮನೆ ಮಾಡಿಕೊಟ್ಟಿದ್ದಳು.
ಈ ಮಧ್ಯೆ, ಗಣೇಶ್ ಬೇರೆ ಮಹಿಳೆಯೊಂದಿಗೆ ಆತ್ಮೀಯ ಸಲುಗೆಯಿಂದ ಇರುವ ಮಾಹಿತಿ ತಿಳಿದು, ಏ.26ರಂದು ಪ್ರೀಯಕರನ ಮನೆಗೆ ಸರಗುಣಂ ಬಂದಿದ್ದಳು. ಈ ವೇಳೆ, ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಮಹಿಳೆ ನಾನು ಹಣ ನೀಡಿ ನಿನಗೆ ಮನೆ ಮಾಡಿ ಕೊಟ್ಟಿದ್ದೇನೆ. ನಿನ್ನನ್ನು ನೋಡಿಕೊಳ್ಳುತ್ತಿದ್ದೇನೆ. ನನ್ನ ಹಣ ವಾಪಾಸ್ ಕೊಡು, ನಿನ್ನ ಜತೆ ಸಲುಗೆಯಿಂದ ಇರುವ ಮಹಿಳೆ ಯಾರೆಂದು ಹೇಳು ಎಂದು ಪ್ರಶ್ನೆ ಮಾಡಿದ್ದಾಳೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮೊದಲ 100 ದಿನಗಳಲ್ಲಿ 11 ಲಕ್ಷ ಪ್ರಯಾಣಿಕರಿಗೆ ಸೇವೆ ಒದಗಿಸಿದ ‘ಕೆಐಎ’ ಟರ್ಮಿನಲ್ 2
ಗಲಾಟೆ ತಾಕಕ್ಕೇರಿ, ಗಣೇಶ್ ತಾನು ಸಾಯುವುದಾಗಿ ಹೇಳಿ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮುಂದಾಗಿದ್ದಾನೆ. ಈ ಸಂದರ್ಭದಲ್ಲಿ ಮಹಿಳೆ ಅಡ್ಡ ಬಂದಿದ್ದಾಳೆ. ಯುವಕ ಕೆಳಗೆ ಇಳಿದ ಸಮಯದಲ್ಲಿ ತಾನು ಸಾಯುತ್ತೇನೆ ಎಂದು ಹೇಳಿ ಮಹಿಳೆ ನೇಣಿನ ಕುಣಿಕೆ ಹಾಕಿಕೊಂಡಿದ್ದಾಳೆ. ಇದೇ ವೇಳೆ ಗಣೇಶ್ ಹಗ್ಗ ಎಳೆದು ಚೇರ್ ಒದ್ದಿದ್ದಾನೆ. ಹಗ್ಗ ಕತ್ತಿಗೆಗೆ ಬಿಗಿದುಕೊಂಡು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಮಹಿಳೆಯನ್ನು ಆರೋಪಿ ಗಣೇಶ್ ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ.
ಗಣೇಶ್ ಪೊಲೀಸರ ದಿಕ್ಕು ತಪ್ಪಿಸಲು ಆತ್ಮಹತ್ಯೆ ಯತ್ನ ಮಾಡಿದ್ದಾಳೆ ಎಂದು ನಾಟಕವಾಡಿದ್ದನು. ಸದ್ಯ ಬಸವೇಶ್ವರ ನಗರ ಪೊಲೀಸರು ಆರೋಪಿ ಗಣೇಶ್ನನ್ನು ಬಂಧಿಸಿದ್ದಾರೆ.