ಬೆಂಗಳೂರು | ಮೊದಲ 100 ದಿನಗಳಲ್ಲಿ 11 ಲಕ್ಷ ಪ್ರಯಾಣಿಕರಿಗೆ ಸೇವೆ ಒದಗಿಸಿದ ‘ಕೆಐಎ’ ಟರ್ಮಿನಲ್ 2

Date:

  • ಹೊಸ ಟರ್ಮಿನಲ್‌ನಿಂದ ಹಾರಾಟ ಪ್ರಾರಂಭಿಸಿದ ಮೊದಲ ವಿಮಾನಯಾನ ಸಂಸ್ಥೆ ‘ಸ್ಟಾರ್ ಏರ್’
  • ಎರಡು ಟರ್ಮಿನಲ್‌ಗಳ ನಡುವೆ ಇಲ್ಲಿಯವರೆಗೆ 28,040 ಶಟಲ್ ಟ್ರಿಪ್‌ಗಳನ್ನು ಕೈಗೊಳ್ಳಲಾಗಿದೆ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಟರ್ಮಿನಲ್-2 ಕಾರ್ಯಾಚರಣೆ ಆರಂಭವಾಗಿ 100 ದಿನಗಳು ಕಳೆದಿದ್ದು, ಇದುವರೆಗೂ 11 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಸೇವೆ ಒದಗಿಸಿದೆ.

- Advertisement -

ನವೆಂಬರ್ 11ರಂದು ಪ್ರಧಾನಿ ನರೇಂದ್ರ ಮೋದಿ ಅವರು ಟರ್ಮಿನಲ್ 2 ಅನ್ನು ಉದ್ಘಾಟಿಸಿದ್ದರು. ಜನವರಿ 15 ರಂದು ವಿಮಾನ ಹಾರಾಟ ಆರಂಭವಾಗಿತ್ತು. ಅಂದಿನಿಂದ ಇಲ್ಲಿಯವರೆಗೂ 11,33,645 ಪ್ರಯಾಣಿಕರು ಈ ಟರ್ಮಿನಲ್‌ ಅನ್ನು ಬಳಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (ಬಿಐಎಎಲ್‌) ಪ್ರಕಾರ, 76% ರಷ್ಟು ಸಮಯಕ್ಕೆ ಸರಿಯಾಗಿ 7,501 ವಿಮಾನ ಚಲನೆಗಳನ್ನು ಟರ್ಮಿನಲ್-2 ಕಂಡಿದೆ.

ಪ್ರಸ್ತುತ, ಟರ್ಮಿನಲ್-2 ದೇಶೀಯ ಸೇವೆಗಳನ್ನು ಮಾತ್ರ ನಿರ್ವಹಿಸುತ್ತಿದೆ. ಮುಂಬರುವ ತಿಂಗಳುಗಳಲ್ಲಿ ಅಂತಾರಾಷ್ಟ್ರೀಯ ಸೇವೆಗಳು ಪ್ರಾರಂಭವಾಗುವ ನಿರೀಕ್ಷೆಯಿದೆ. ಮೂರು ದೇಶೀಯ ವಿಮಾನ ಸಂಸ್ಥೆಗಳಾದ ಸ್ಟಾರ್ ಏರ್, ಏರ್ ಏಷ್ಯಾ ಇಂಡಿಯಾ ಮತ್ತು ವಿಸ್ತಾರಾ ಹೊಸ ಟರ್ಮಿನಲ್‌ನಿಂದ ಕಾರ್ಯನಿರ್ವಹಿಸುತ್ತಿವೆ.

ಸ್ಟಾರ್ ಏರ್ ಜನವರಿ 15 ರಂದು ಹೊಸ ಟರ್ಮಿನಲ್‌ನಿಂದ ಹಾರಾಟವನ್ನು ಪ್ರಾರಂಭಿಸಿದ ಮೊದಲ ವಿಮಾನಯಾನ ಸಂಸ್ಥೆಯಾಗಿದೆ. ಅದಾದ ಒಂದು ತಿಂಗಳ ನಂತರ, ಏರ್‌ ಏಷ್ಯಾ ಇಂಡಿಯಾ ತನ್ನ ವಿಮಾನ ಸೇವೆಗಳನ್ನು ಪ್ರಾರಂಭಿಸಿತು.

ಈ ಸುದ್ದಿ ಓದಿದ್ದೀರಾ? ಲೇವಾದೇವಿದಾರರ ಕಾಟಕ್ಕೆ ಬೇಸತ್ತು ಬಿಬಿಎಂಪಿ ಗುತ್ತಿಗೆದಾರ ಆತ್ಮಹತ್ಯೆ

ಬೆಂಗಳೂರು ಏರ್‌ ಏಷಿಯಾ ಇಂಡಿಯಾಕ್ಕೆ ಹೋಮ್ ಬೇಸ್ ಮತ್ತು ಅತಿ ದೊಡ್ಡ ಕೇಂದ್ರವಾಗಿದ್ದು, ನಾನಾ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ 43 ದೈನಂದಿನ ನಿರ್ಗಮನಗಳನ್ನು ನಿರ್ವಹಿಸುತ್ತಿದೆ. ಏರ್‌ಲೈನ್ ತನ್ನ ಸಂಪೂರ್ಣ ದೇಶೀಯ ಕಾರ್ಯಾಚರಣೆಗಳನ್ನು ಟರ್ಮಿನಲ್-2 ಗೆ ಸ್ಥಳಾಂತರಿಸಿದೆ.

ಮೊದಲ 100 ದಿನಗಳಲ್ಲಿ ಸುಮಾರು 7,71,650 ಬ್ಯಾಗ್‌ಗಳನ್ನು ಹೊಸ ಟರ್ಮಿನಲ್‌ನಲ್ಲಿ ನಿರ್ವಹಿಸಲಾಗಿದೆ.

ಹಳೆಯ ಟರ್ಮಿನಲ್ ಮತ್ತು ಹೊಸ ಟರ್ಮಿನಲ್ ನಡುವೆ ನಿಯಮಿತ ಸಮಯದಲ್ಲಿ ಉಚಿತ ವಿಮಾನ ನಿಲ್ದಾಣ ಶಟಲ್ ಬಸ್ ಸೇವೆಗಳನ್ನು ಒದಗಿಸಲಾಗುತ್ತದೆ. ಎರಡು ಟರ್ಮಿನಲ್‌ಗಳ ನಡುವೆ ಇಲ್ಲಿಯವರೆಗೆ 28,040 ಶಟಲ್ ಟ್ರಿಪ್‌ಗಳನ್ನು ಕೈಗೊಳ್ಳಲಾಗಿದೆ.

ಟರ್ಮಿನಲ್ ಅನೇಕ ಆಹಾರ ಮತ್ತು ಪಾನೀಯ ಮಳಿಗೆಗಳನ್ನು ಹೊಂದಿದೆ. ಇಲ್ಲಿ ಪೊಡಿ ಮಸಾಲಾ ದೋಸೆಯು ಹೆಚ್ಚು ಮಾರಾಟವಾಗುವ ಖಾದ್ಯವಾಗಿದೆ. ಮೊದಲ 100 ದಿನಗಳಲ್ಲಿ 4,100 ಪೊಡಿ ಮಸಾಲೆ ದೋಸೆಯನ್ನು ಪ್ರಯಾಣಿಕರು ಆರ್ಡರ್ ಮಾಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೌಜನ್ಯ ಪ್ರಕರಣ ಮರುತನಿಖೆ | SIT ಪುನರ್‌ ರಚಿಸುವಂತೆ ಕೊಂದವರು ಯಾರು? ಆಂದೋಲನ ಒತ್ತಾಯ

ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗಾಗಿ ರಚಿಸಲಾಗಿರುವ ವಿಶೇಷ...

ಏಕಪಕ್ಷೀಯ ನಿರ್ಧಾರ; ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಬಿ ಕೆ ಹರಿಪ್ರಸಾದ್ ಆಗ್ರಹ: ನಾಳೆ ಪ್ರತಿಭಟನೆ

ಕೇಂದ್ರ ಚುನಾವಣಾ ಆಯೋಗದ ಆಯುಕ್ತರಾದ ಗ್ಯಾನೇಶ್ ಕುಮಾರ್ ಕಳೆದ 10 ತಿಂಗಳಲ್ಲಿ...

ಲಗ್ಗೆರೆ | ಜೆಡಿಎಸ್ ನಾಯಕ ಅಂದಾನಪ್ಪ ನಿವಾಸದಲ್ಲಿ ವಾಚ್‌ಮ್ಯಾನ್ ಆತ್ಮಹತ್ಯೆ

ಜೆಡಿಎಸ್ ಮುಖಂಡ ಅಂದಾನಪ್ಪ ಅವರ ಬೆಂಗಳೂರಿನ ಲಗ್ಗೆರೆ ನಿವಾಸದಲ್ಲಿ ವಾಚ್‌ಮ್ಯಾನ್ ಆಗಿ...

ಬೈಕ್ ಟ್ಯಾಕ್ಸಿಗೆ ಹೈಕೋರ್ಟ್ ಹಸಿರು ನಿಶಾನೆ; ಚಾಲಕರ ಸಂಘದಿಂದ ಸುಪ್ರೀಂಗೆ ಮೇಲ್ಮನವಿ

ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗೆ ಹಸಿರು ನಿಶಾನೆ ತೋರಿಸಿದ್ದ ಹೈಕೋರ್ಟ್ ತೀರ್ಪು...