- 12 ವರ್ಷಗಳ ಹಿಂದೆ ನಾಗರತ್ನಳನ್ನು ಮದುವೆಯಾಗಿದ್ದ ಅಯ್ಯಪ್ಪ
- ಚಾಕುವಿನಿಂದ ಮನಸೋ ಇಚ್ಛೆ ಪತ್ನಿ ಮೇಲೆ ಹಲ್ಲೆ ನಡೆಸಿದ ಪತಿ
ಅನುಮಾನ ಪಟ್ಟು ಪತ್ನಿಯನ್ನೇ ಪತಿ ಕೊಲೆಗೈದಿದ್ದು, ಬೆಂಗಳೂರಿನ ಬಸವೇಶ್ವರ ನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ನಾಗರತ್ನ (32) ಹತ್ಯೆಯಾದ ಮಹಿಳೆ. ಅಯ್ಯಪ್ಪ ಪತ್ನಿಯನ್ನು ಕೊಂದ ಪತಿ. ಅನೈತಿಕ ಸಂಬಂಧದ ಆರೋಪದ ಹಿನ್ನೆಲೆ, ಮನಸೋ ಇಚ್ಛೆ ಚಾಕುವಿನಿಂದ ಇರಿದು ಪತ್ನಿಯನ್ನು ಕೊಲೆ ಮಾಡಿದ್ದಾನೆ. ಈ ಕುರಿತಂತೆ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಗರತ್ನ ಅಪ್ಪ-ಅಮ್ಮ ಇಲ್ಲದೇ ಅನಾಥಾಶ್ರಮದಲ್ಲಿ ಬೆಳೆದಿದ್ದರು. ಕಳೆದ 12 ವರ್ಷಗಳ ಹಿಂದೆ ಅಯ್ಯಪ್ಪ ನಾಗರತ್ನಳನ್ನು ಮದುವೆಯಾಗಿದ್ದನು. ದಂಪತಿಗೆ 11 ವರ್ಷದ ಮಗ ಹಾಗೂ 7 ವರ್ಷದ ಮಗಳು ಇದ್ದಾಳೆ.
ಇಬ್ಬರು ಮಕ್ಕಳನ್ನು ಅಯ್ಯಪ್ಪನೂ ತನ್ನ ಅಕ್ಕನ ಮನೆಯಲ್ಲಿ ಬಿಟ್ಟಿದ್ದನು. ಕಳೆದ ಕೆಲವು ದಿನಗಳಿಂದ ಅಯ್ಯಪ್ಪ ಹೆಂಡತಿ ಮೇಲೆ ಅನುಮಾನ ಪಡಲು ಆರಂಭಿಸಿದ್ದನು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ‘ಪೀಪಲ್ಸ್ ಮ್ಯಾನ್’ ಖ್ಯಾತಿಯ ಇನ್ಸ್‌ಪೆಕ್ಟರ್ ಮಂಜುನಾಥ್ ನಿಧನ
ಕಳೆದ ಮೂರು ದಿನದಿಂದ ದಂಪತಿಗಳ ಮಧ್ಯೆ ಈ ವಿಚಾರವಾಗಿ ಜಗಳವಾಗುತ್ತಿತ್ತು. ಈ ವೇಳೆ, ಚಾಕುವಿನಿಂದ ಮನಸೋ ಇಚ್ಛೆ ಹಲ್ಲೆ ನಡೆಸಿ, ಮಹಿಳೆಯ ಗುಪ್ತಾಂಗಕ್ಕೂ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಸದ್ಯ ಪತ್ನಿ ನಾಗರತ್ನ ಕೊಲೆಗೈದ ಪತಿ ಅಯ್ಯಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.
ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಬಸವೇಶ್ವರ ನಗರ ಪೊಲೀಸರು ಘಟನಾ ಸ್ಥಳದ ಪರಿಶೀಲನೆ ನಡೆಸಿದ್ದಾರೆ.