ಪತ್ನಿಯ ನಂಬರ್ ಕೇಳಿದ ಸ್ನೇಹಿತನಿಗೆ ರೌಡಿಶೀಟರ್‌ನೊಬ್ಬ ಧಳಿಸಿದ್ದು, ಬಳಿಕ ಹಲ್ಲೆಗೊಳಗಾದ ವ್ಯಕ್ತಿ 10 ಮಂದಿ ಗುಂಪಿನೊಂದಿಗೆ ರೌಡಿಶೀಟರ್ ಮನೆಗೆ ತೆರಳಿ ದಾಳಿ ನಡೆಸಿದ ಘಟನೆ ಬೆಂಗಳೂರಿನ ಹೊಯ್ಸಳ ನಗರದಲ್ಲಿ ನಡೆದಿದೆ.
ಬೆಂಗಳೂರಿನ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ರಮೇಶ್ ಮತ್ತು ರೌಡಿಶೀಟರ್ ಕೆಂಪೇಗೌಡ ಅಲಿಯಾಸ್ ಕೆಂಪ ಇಬ್ಬರು ಸ್ನೇಹಿತರು.
ರಮೇಶ್ ಮತ್ತು ರೌಡಿಶೀಟರ್ ಕೆಂಪ ಇಬ್ಬರು ಬಾರ್‌ಗೆ ತೆರಳಿ ಮಧ್ಯ ಸೇವನೆ ಮಾಡಿದ್ದರು. ಕುಡಿದ ಮತ್ತಿನಲ್ಲಿದ್ದ ರಮೇಶ್, ರೌಡಿಶೀಟರ್ ಕೆಂಪನಿಗೆ ಆತನ ಹೆಂಡತಿಯ ನಂಬರ್ ಕೊಡುವಂತೆ ಕೇಳಿದ್ದಾನೆ. ರೌಡಿಶೀಟರ್ ಕೆಂಪ ಇದಕ್ಕೆ ಕೋಪಗೊಂಡು ರಮೇಶ್‌ಗೆ ಥಳಿಸಿದ್ದಾನೆ.
ಈ ಘಟನೆ ಬಳಿಕ ರೌಡಿಶೀಟರ್ ಕೆಂಪ ಮನೆಗೆ ಬಂದಿದ್ದಾನೆ. ಕೆಂಪನ ಮೇಲೆ ದ್ವೇಷಕ್ಕೆ ಬಿದ್ದ ರಮೇಶ್ ತನ್ನ ಸಹಚರರಾದ ಮಂಜುನಾಥ್, ಜವರೇಗೌಡ, ಕೃಷ್ಣಮೂರ್ತಿ ಸೇರಿದಂತೆ 10ಕ್ಕೂ ಹೆಚ್ಚು ಮಂದಿಯೊಂದಿಗೆ ಹೊಯ್ಸಳ ನಗರದಲ್ಲಿರುವ ಕೆಂಪನ ಮನೆಗೆ ತೆರಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೆಎಸ್‌ಆರ್‌ಟಿಸಿ | ಟಿಕೆಟ್ ಪಡೆಯದೆ ಪ್ರಯಾಣ ಬೆಳೆಸಿದ್ದ 3208 ಪ್ರಯಾಣಿಕರಿಗೆ ದಂಡ
ರಮೇಶ್ ನನ್ನನ್ನು ಯಾಕೆ ಹೊಡೆದೆ ಎಂದು ಕೆಂಪನನ್ನು ಪ್ರಶ್ನಿಸಿದ್ದಾನೆ. ಈ ವೇಳೆ, ಕೆಂಪನ ಮನೆಯ ಮುಂದೆ ಗಲಾಟೆ ಆರಂಭವಾಗಿದೆ. ಗಲಾಟೆ ಸಮಯದಲ್ಲಿ ರಮೇಶ್ ಮತ್ತಿತರ ಮೇಲೆ ಕೆಂಪ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾನೆ.
ರಮೇಶ್ ಮತ್ತು ಆತನ ಸಹಚರರು ಕೆಂಪನ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರ ಪರಿಣಾಮ ಮನೆಯ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ. ಮನೆಯ ಬಾಗಿಲು ಮುರಿದಿದೆ.
ಘಟನೆ ಸಂಬಂಧ ಚಂದ್ರಾಲೇಔಟ್ ಠಾಣಾ ಪೊಲೀಸರು ರೌಡಿಶೀಟರ್ ಕೆಂಪನನ್ನು ಬಂಧಿಸಿದ್ದಾರೆ.