- ಅಪಘಾತ ಎಸಗಿ ಪರಾರಿಯಾದ ದ್ವಿಚಕ್ರ ವಾಹನ ಸವಾರ
- ಶಿರ್ಕೆ ನಿವಾಸಿ ಮುನಿಯಪ್ಪ (70) ಸಾವನ್ನಪ್ಪಿದ ದುರ್ದೈವಿ
ದ್ವಿಚಕ್ರ ವಾಹನವೊಂದು ವಯೋವೃದ್ಧ ಪಾದಚಾರಿಯೊಬ್ಬರಿಗೆ ಡಿಕ್ಕಿ ಹೊಡೆದಿದ್ದು, ವೃದ್ಧ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಶಿರ್ಕೆ ನಿವಾಸಿ ಮುನಿಯಪ್ಪ (70) ಸಾವನ್ನಪ್ಪಿದ ದುರ್ದೈವಿ. ಅವರು ಕೆಂಗೇರಿ ಸ್ಯಾಟಲೈಟ್ ಟೌನ್‌ನ ಹೊಯ್ಸಳ ವೃತ್ತದ 80 ಅಡಿ ರಸ್ತೆ ಬದಿಯಲ್ಲಿ ಬೆಳಗ್ಗೆ 5.45ರ ಸಮದಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಆ ವೇಳೆ, ಹಿಂದಿನಿಂದ ಬಂದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ವೃದ್ಧನ ತಲೆ ಹಾಗೂ ದೇಹಕ್ಕೆ ಗಾಯಗಳಾಗಿದ್ದವು. ಕೂಡಲೇ ಸ್ಥಳೀಯರು ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ರವಾನಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೇ 11ರ ಮಧ್ಯರಾತ್ರಿಯವರೆಗೆ ಮೆಟ್ರೋ ರೈಲು ಸೇವೆ ವಿಸ್ತರಣೆ: ಬಿಎಂಆರ್‌ಸಿಎಲ್
ಅಪಘಾತ ಎಸಗಿ ದ್ವಿಚಕ್ರ ಸವಾರ ಪರಾರಿಯಾಗಿದ್ದಾರೆ. ಕೆಂಗೇರಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಸವಾರ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.