ಯುವತಿ ಮೇಲೆ ಅನುಮಾನಗೊಂಡ ಪ್ರಿಯಕರ ರಾಡ್‌ನಿಂದ ಹೊಡೆದು ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಮೈಕೋ ಲೇಔಟ್‌ನಲ್ಲಿ ನಡೆದಿದೆ.
ಸ್ನೇಹ (26) ಹಲ್ಲೆಗೊಳಗಾದ ಯುವತಿ. ರವಿಕುಮಾರ (28) ಬಂಧಿತ ಆರೋಪಿ. ಈ ಇಬ್ಬರು ಇಂದಿರಾನಗರದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸ್ನೇಹ ಇದೇ ಕಂಪನಿಯಲ್ಲಿ ಇಂಟರ್ನ್‌ಶಿಪ್ ಕೆಲಸ ಮಾಡುತ್ತಿದ್ದಳು. ಈ ವೇಳೆ, ಇಬ್ಬರಿಗೂ ಪರಸ್ಪರ ಪರಿಚಯವಾಗಿ ಈ ಪರಿಚಯ ಪ್ರೀತಿಗೆ ತಿರುಗಿದೆ ಎಂದು ತಿಳಿದುಬಂದಿದೆ.
ಸ್ವಲ್ಪ ದಿನಗಳ ಹಿಂದೆ ಸ್ನೇಹ ತಾನೂ ಕೆಲಸ ಮಾಡುತ್ತಿದ್ದ ಕಂಪನಿ ಬಿಟ್ಟು ಬೇರೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ, ರವಿಕುಮಾರ್ ಕರೆ ಮಾಡಿದಾಗ ಸ್ನೇಹ ಸ್ವೀಕರಿಸಿಲ್ಲ ಎಂದು ಆಕೆಯ ಮೇಲೆ ಅನುಮಾನಗೊಂಡಿದ್ದಾನೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಟೆಕ್ಕಿ ಕುಟುಂಬದ ಸಾವಿಗೆ ಗಂಡ-ಹೆಂಡತಿ ಮನಸ್ತಾಪ ಕಾರಣ!
ಸ್ನೇಹಳನ್ನು ಮೈಕೋ ಲೇಔಟ್‌ನ ಪಿಜಿಯ ಬಳಿ ಬುಧವಾರ ಮುಂಜಾನೆ 3.30ಕ್ಕೆ ಕರೆಸಿಕೊಂಡು ಅವಳ ತಲೆಗೆ ರಾಡ್‌ನಿಂದ ಹೊಡೆದಿದ್ದಾನೆ.
ಸದ್ಯ ಗಾಯಾಳು ಸ್ನೇಹ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಕುರಿತಂತೆ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.