ಜಗಳ ಮಾಡುವ ವೇಳೆ, ಪತ್ನಿಯ ಬೆರಳನ್ನೇ ಪತಿರಾಯ ಕಚ್ಚಿ ಕಚ್ಚಿ ತಿಂದ ಘಟನೆ ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪುಷ್ಪ ಎಂಬ ಸಂತ್ರಸ್ತ ಮಹಿಳೆ, ಪತಿ ವಿಜಯಕುಮಾರ್ ಕಾಟಕ್ಕೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸದ್ಯ ಆರೋಪಿ ಪತಿ ವಿರುದ್ಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಪುಷ್ಪ ಮತ್ತು ವಿಜಯ್ಕುಮಾರ್ ಇಬ್ಬರು 23 ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ದಂಪತಿಗೆ ಓರ್ವ ಮಗನಿದ್ದಾನೆ. ಪತಿಯು ದಿನನಿತ್ಯ ಪತ್ನಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದನು. ಇದರಿಂದ ಬೇಸತ್ತ ಪತ್ನಿ ಗಂಡನಿಂದ ದೂರವಾಗಿ ಬೇರೆ ಮನೆ ಮಾಡಿ ತನ್ನ ಮಗನೊಂದಿಗೆ ಜೀವನ ನಡೆಸುತ್ತಿದ್ದಳು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮ್ಯಾಟ್ರೀಮೋನಿಯಲ್ಲಿ ಪರಿಚಯವಾದ ಯುವತಿಯಿಂದ ಟೆಕ್ಕಿಗೆ ₹1.14 ಕೋಟಿ ವಂಚನೆ
ಇಷ್ಟಾದರೂ ಸುಮ್ಮನೆ ಆಗದ ಪತಿ ಅಲ್ಲಿಗೂ ಬಂದು ಪುಷ್ಪಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದನು. ಜುಲೈ 28ರಂದು ದಂಪತಿ ಜಗಳ ಮಾಡುವ ವೇಳೆ ಏಕಾಏಕಿ ಪತಿ ವಿಜಯಕುಮಾರ್ ಪತ್ನಿಯ ಬೆರಳನ್ನೇ ಕಚ್ಚಿ ತಿಂದಿದ್ದಾನೆ. ನಂತರ ನಿನ್ನನ್ನೂ ಕೂಡ ಇದೇ ರೀತಿ ಕೊಂದು ತಿನ್ನುವುದಾಗಿ ಬೆದರಿಕೆ ಹಾಕಿದ್ದಾನೆ. ರೌಡಿಶೀಟರ್ಗಳನ್ನು ಬಿಟ್ಟು ಕೊಲೆ ಬೆದರಿಕೆ ಹಾಕಿದ್ದಾನೆ” ಎಂದು ಪತ್ನಿ ಪುಷ್ಪ ಆರೋಪಿಸಿದ್ದಾಳೆ.