ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಮರುವಿಂಗಡಣೆಯ 225 ವಾರ್ಡ್‌ಗಳ ನಕ್ಷೆಯನ್ನು ಪಾಲಿಕೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ಬಿಬಿಎಂಪಿ ವ್ಯಾಪ್ತಿಯ 225 ವಾರ್ಡ್‌ಗಳ ನಕ್ಷೆಯನ್ನು ಪಾಲಿಕೆ ಸೋಮವಾರ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದೆ. ವಾರ್ಡ್‌ಗಳ ಭೌಗೋಳಿಕ ಪ್ರದೇಶ, ಒಟ್ಟು ಜನಸಂಖ್ಯೆ ಮತ್ತು ಸಂಸದೀಯ ಕ್ಷೇತ್ರದಂತಹ ವಿವರಗಳನ್ನು ನಕ್ಷೆಗಳಲ್ಲಿ ಸೇರಿಸಲಾಗಿದೆ.
ವಾರ್ಡ್‌ಗಳ ಉತ್ತಮ ತಿಳಿವಳಿಕೆಗಾಗಿ ನಕ್ಷೆಗಳನ್ನು http://bbmpdelimitation2023.com ನಲ್ಲಿ ವೀಕ್ಷಿಸಬಹುದು. ಆಗಸ್ಟ್ 18 ರಂದು ಈ ವಾರ್ಡ್‌ಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಅಭಿಪ್ರಾಯ ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಸರ್ಕಾರ 15 ದಿನಗಳ ಕಾಲಾವಕಾಶ ನೀಡಿದೆ. ಈ ನಕ್ಷೆಗಳು ನಾಗರಿಕರಿಗೆ ಹೆಚ್ಚಿನ ಸ್ಪಷ್ಟತೆಯನ್ನು ಒದಗಿಸುವ ನಿರೀಕ್ಷೆಯಿದೆ.
ಈ ಸುದ್ದಿ ಓದಿದ್ದೀರಾ? ಹುನಗುಂದ | ಸರ್ಕಾರಿ ಕಾಲೇಜಿನ ಕಟ್ಟಡದಲ್ಲಿಯೇ ಪ್ರಾಂಶುಪಾಲ ಆತ್ಮಹತ್ಯೆ
ಮರುವಿಂಗಡಣೆ ಕಾರ್ಯ ಪೂರ್ಣಗೊಂಡ ನಂತರ, ಸರ್ಕಾರ ವಾರ್ಡ್‌ಗಳಿಗೆ ಮೀಸಲಾತಿಯನ್ನು ಘೋಷಿಸುವ ಸಾಧ್ಯತೆಯಿದೆ. ಬಿಬಿಎಂಪಿಗೆ ಡಿಸೆಂಬರ್ ವೇಳೆಗೆ ಚುನಾವಣೆ ನಡೆಯಲಿದೆ ಎಂದು ತಿಳಿದುಬಂದಿದೆ. ಸೆಪ್ಟೆಂಬರ್ 2020 ರಿಂದ ಬಿಬಿಎಂಪಿ ಚುನಾವಣೆ ನಡೆದಿಲ್ಲ.