ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ರಸ್ತೆ ಬದಿ ಮತ್ತು ಸರ್ಕಾರಿ ಜಾಗಗಳಲ್ಲಿ ಒಣಗಿರುವ ಮರ ಹಾಗೂ ಒಣಗಿರುವ ರೆಂಬೆ ಕೊಂಬೆಗಳು ಅಪಾಯ ಸ್ಥಿತಿಯಲ್ಲಿದ್ದರೆ, ತೆರವು ಮಾಡಲು ಸಾರ್ವಜನಿಕರು ಕರೆ ಮಾಡಿ ಎಂದು ಪಾಲಿಕೆ ತಿಳಿಸಿದೆ.
ಅರಣ್ಯ ವಿಭಾಗದ ವತಿಯಿಂದ ಈಗಾಗಲೇ ರಸ್ತೆ ಬದಿ ಮತ್ತು ಸರ್ಕಾರಿ ಜಾಗಗಳಲ್ಲಿ ಒಣಗಿರುವ ಮರಗಳು ಹಾಗೂ ಒಣಗಿರುವ ರೆಂಬೆ ಕೊಂಬೆಗಳನ್ನು ತೆರವುಗೊಳಿಸಲಾಗುತ್ತಿದ್ದು, ಸಾರ್ವಜನಿಕರು ನಗರ ವ್ಯಾಪ್ತಿಯಲ್ಲಿ ಒಣಗಿರುವ ಮರಗಳು ಹಾಗೂ ಒಣಗಿರುವ ಅಪಾಯ ಸ್ಥಿತಿಯ ರೆಂಬೆಗಳು ಕಂಡುಬಂದಲ್ಲಿ ವಲಯವಾರು ಅಧಿಕಾರಿಗಳ ದೂರವಾಣಿ ಸಂಖ್ಯೆಗೆ ವಾಟ್ಸ್ ಅಪ್ ಫೋಟೋ ಮೂಲಕ ಮಾಹಿತಿ ನೀಡಲು ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.
ವಲಯ ಅರಣ್ಯಾಧಿಕಾರಿಗಳ ದೂರವಾಣಿ ಸಂಖ್ಯೆ
ಬೆಂಗಳೂರು ಪೂರ್ವದ ವಲಯ ಅರಣ್ಯಾಧಿಕಾರಿ ತಿಮ್ಮಪ್ಪ 9380090027
ಬೆಂಗಳೂರು ಪಶ್ಚಿಮ ವಲಯ ಅರಣ್ಯಾಧಿಕಾರಿ 9449659252
ಬೆಂಗಳೂರು ದಕ್ಷಿಣ ವಲಯ ಅರಣ್ಯಾಧಿಕಾರಿ ಚಿದಾನಂದ್ ಎಲ್ ಬಿ 97427 33666
ದಾಸರಹಳ್ಳಿ ವಲಯ ಅರಣ್ಯಾಧಿಕಾರಿ ರಾಜಪ್ಪ ಕೆ ಎನ್ 9448234928
ಬೊಮ್ಮನಹಳ್ಳಿ ವಲಯ ಅರಣ್ಯಾಧಿಕಾರ ಹರೀಶ್ ಎಚ್ ಆರ್ 9480685039
ಯಲಹಂಕ ವಲಯ ಅರಣ್ಯಾಧಿಕಾರಿ ಚಂದ್ರಪ್ಪ ವಿ 9164042566
ರಾಜರಾಜೇಶ್ವರಿನಗರ ವಲಯ ಅರಣ್ಯಾಧಿಕಾರಿ ಮುತ್ತುರಾಜ್ ಕೆ ಪಿ 9483139438
ಮಹದೇವಪುರ ವಲಯ ಅರಣ್ಯಾಧಿಕಾರಿ ಸುದರ್ಶನ್ ಎ 7899555182
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ತಾಯಂದಿರ ಎದೆ ಹಾಲಿನ ಎರಡನೇ ಬ್ಯಾಂಕ್ ಮುಂದಿನ ವಾರ ಗೋಶಾ ಆಸ್ಪತ್ರೆಯಲ್ಲಿ ಆರಂಭ
ರಸ್ತೆಗೆ ಅಡ್ಡಲಾದ ಗೇಟ್ ತೆರವು
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಕೊಡಿಪಾಳ್ಯ ಗ್ರಾಮದ ಚೂಡೇನಪುರದ 2ನೇ ಅಡ್ಡರಸ್ತೆಯಲ್ಲಿ ಸಾರ್ವಜನಿಕರ ಓಡಾಟದ ರಸ್ತೆಗೆ ಅನಧಿಕೃತವಾಗಿ ಅಡ್ಡಲಾಗಿ ನಿರ್ಮಿಸಿದ್ದ ಗೇಟ್ ಅನ್ನು ತೆರವುಗೊಳಿಸಲಾಗಿದೆ ಎಂದು ಬಿಬಿಎಂಪಿ ಹೇಳಿದೆ.
ಆರ್.ಆರ್.ನಗರ ವಲಯ ಆಯುಕ್ತರ ಆದೇಶದಂತೆ ಅನಧಿಕೃತ ಗೇಟ್ ಅನ್ನು ಗುರುವಾರ ಬೆಳಗ್ಗೆ ಜೆಸಿಬಿಯ ಮೂಲಕ ತೆರವುಗೊಳಿಸಲಾಗಿದೆ ಎಂದು ತಿಳಿಸಿದೆ.