ಬ್ರ್ಯಾಂಡ್ ಬೆಂಗಳೂರು | ಸ್ವಚ್ಛ ನಗರಕ್ಕೆ ನಾಗರಿಕರಿಂದ 10,479 ಸಲಹೆ

Date:

Advertisements

ಬ್ರ್ಯಾಂಡ್ ಬೆಂಗಳೂರಿನ ಸಲುವಾಗಿ 7 ವಿಭಾಗಗಳಲ್ಲಿ ಬಂದಿರುವಂತಹ ಸಾರ್ವಜನಿಕರ ಸಲಹೆಗಳನ್ನು ಈಗಾಗಲೇ ವಿಂಗಡಿಸಿದ್ದು, ಸ್ವಚ್ಛ ಬೆಂಗಳೂರು ವಿಭಾಗದ ಬಗ್ಗೆ 10,479 ಸಲಹೆಗಳು ಬಂದಿವೆ.

ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಆವರಣದ ಸೆನೆಟ್ ಹಾಲ್‌ನಲ್ಲಿ ಗುರುವಾರ ವಿಚಾರ ಸಂಕಿರಣ ನಡೆಯಿತು.

ವಿಚಾರ ಸಂಕಿರಣದಲ್ಲಿ ಬಂದಂತಹ ಸಲಹೆಗಳು ಹಾಗೂ ನಾಗರಿಕರಿಂದ ಈಗಾಗಲೇ ಬಂದಿರುವಂತಹ ಎಲ್ಲ ಸಲಹೆಗಳನ್ನು ಕ್ರೋಡೀಕರಿಸಿ ಅಧ್ಯಯನ ನಡೆಸಿ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಬೆಂಗಳೂರು ವಿಶ್ವವಿದ್ಯಾಲಯ ಪರಿಸರ ವಿಜ್ಞಾನ ವಿಭಾಗದಿಂದ ಬಂದಿರುವಂತಹ ಎಲ್ಲ ಸಲಹೆಗಳನ್ನು ಬೇರ್ಪಡಿಸಿ ವರದಿಯನ್ನು ಸಿದ್ದಪಡಿಸಲಿದೆ.

Advertisements

ಬೆಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟರ್ ಶೇಖ್ ಲತೀಫ್ ಮಾತನಾಡಿ, “ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ಸ್ವಚ್ಛ ಬೆಂಗಳೂರು ವಿಭಾಗಕ್ಕೆ ಬೆಂಗಳೂರು ವಿಶ್ವವಿದ್ಯಾಲಯವನ್ನು ಶೈಕ್ಷಣಿಕ ಪಾಲುದಾರರನ್ನಾಗಿ ಮಾಡಿದ್ದು, ಪರಿಸರ ವಿಜ್ಞಾನ ವಿಭಾಗದಿಂದ ಸ್ವಚ್ಛ ಬೆಂಗಳೂರು ವಿಭಾಗಕ್ಕೆ ಬಂದಂತಹ ಸಲಹೆಗಳನ್ನು ಈಗಾಗಲೇ ವಿಂಗಡಣೆ ಮಾಡಲಾಗಿದೆ. ವಿಚಾರ ಸಂಕಿರಣದಲ್ಲಿ ಬಂದಂತಹ ಸಲಹೆಗಳನ್ನು ಒಟ್ಟುಗೂಡಿಸಿ ವರದಿಯನ್ನು ತಯಾರಿಸಿ ಸಲ್ಲಿಸಲಾಗುವುದು” ಎಂದು ಹೇಳಿದರು.

“ನಗರದಲ್ಲಿ ಘನತ್ಯಾಜ್ಯ ನಿರ್ವಹಣೆ ಪ್ರಕ್ರಿಯೆ ಪಾಲಿಕೆಯ ಕರ್ತವ್ಯ ಮಾತ್ರವಲ್ಲ, ನಗರದಲ್ಲಿರುವ ಎಲ್ಲ ವರ್ಗ/ನಾಗರಿಕರ ಕರ್ತವ್ಯವಾಗಿದೆ. ಎಲ್ಲರೂ ತಮ್ಮ-ತಮ್ಮ ಜವಾಬ್ದಾರಿಗಳನ್ನು ಅರಿತು ಮೂಲದಲ್ಲಿಯೇ ಸ್ವಚ್ಛತೆ ಕಾಪಾಡಿದರೆ ಸ್ವಚ್ಛ ಬೆಂಗಳೂರನ್ನಾಗಿಸಲು ಸಾಧ್ಯ” ಎಂದರು.

“ನಗರದ ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ರಸ್ತೆ ಬದಿ, ಖಾಲಿ ಜಾಗದಲ್ಲಿ ಬಿಸಾಡುವ ಸಂಖ್ಯೆ ಹೆಚ್ಚಿದೆ. ಅದನ್ನು ಪಾಲಿಕೆ ವತಿಯಿಂದ ಸ್ವಚ್ಛ ಮಾಡುತ್ತಾರೆ. ರಸ್ತೆಬದಿ ತ್ಯಾಜ್ಯ ಬಿಸಾಡುವುದನ್ನು ಬಿಡಬೇಕು. ಇದರ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು” ಎಂದು ತಿಳಿಸಿದರು.

ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಸಂಸ್ಥೆಯ ಮುಖ್ಯ ಪ್ರಧಾನ ಅಭಿಯಂತರರಾದ ಬಸವರಾಜ್ ಕಬಾಡೆರವರು ಮಾತನಾಡಿ, “ಬೆಂಗಳೂರು ನಗರವನ್ನು ಬ್ರ್ಯಾಂಡ್ ಬೆಂಗಳೂರನ್ನಾಗಿ ರೂಪಿಸುವ ಸಲುವಾಗಿ 7 ವಿಭಾಗಗಳನ್ನಾಗಿ ವಿಗಂಡಿಸಿದ್ದು, ಅದರಲ್ಲಿ ಸ್ವಚ್ಛ ಬೆಂಗಳೂರು ವಿಭಾಗದ ಅಭಿವೃದ್ಧಿಗಾಗಿ ಬೆಂಗಳೂರು ವಿಶ್ವವಿದ್ಯಾಲಯದೊಂದಿಗೆ ಶೈಕ್ಷಣಿಕ ಪಾಲುದಾರಿಕೆ ಮಾಡಿಕೊಂಡು ಸ್ವಚ್ಛ ಬೆಂಗಳೂರು ವಿಭಾಗಕ್ಕೆ ನಾಗರಿಕರಿಂದ ಬಂದಂತಹ ಸಲಹೆಗಳನ್ನು ಕ್ರೋಡೀಕರಿಸಿ ವರದಿಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು” ಎಂದು ಹೇಳಿದರು.

“ನಗರದಲ್ಲಿ ಘನತ್ಯಾಜ್ಯ ವಿಭಾಗದಲ್ಲಿ ಸಮಗ್ರ ಬದಲಾವಣೆಗಾಗಿ ಸಾಕಷ್ಟು ಕಾರ್ಯರೂಪಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ವಚ್ಛ ಬೆಂಗಳೂರು ಕುರಿತಾಗಿ ವೆಬ್ ಸೈಟ್‌ನಲ್ಲಿ ನಾಗರಿಕರಿಂದ ಸಲಹೆಗಳನ್ನು ಪಡೆಯಲಾಗಿದೆ. ಅದರಂತೆ ಸ್ವಚ್ಛ ಬೆಂಗಳೂರಿಗೆ ಸಂಬಂಧಿಸಿದಂತೆ 10 ಸಾವಿರಕ್ಕೂ ಹೆಚ್ಚು ಸಲಹೆಗಳು ಬಂದಿವೆ. ಅದನ್ನೆಲ್ಲಾ ಬೆಂಗಳೂರು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನದ ವಿಭಾಗದಿಂದ ಕ್ರೋಡೀಕರಿಸಿ ಅಧ್ಯಯನ ನಡೆಸಿ ಬಂದಿರುವಂತಹ ಸಲಹೆಗಳನ್ನು ವಿಭಾಗಗಳಾಗಿ ಬೇರ್ಪಡಿಸಿ ಅಂತಿಮ ವರದಿ ಸಿದ್ದಪಡಿಸಿದ ಬಳಿಕ ಎಲ್ಲ ಅಂಶಗಳನ್ನು ವೈಜ್ಞಾನಿಕವಾಗಿ ಅಳವಡಿಸಿಕೊಳ್ಳಲು ಯೋಜನೆ ರೂಪಿಸಲಾಗುವುದು” ಎಂದು ತಿಳಿಸಿದರು.

“ನಗರದಲ್ಲಿ ಸುಮಾರು 1.4 ಕೋಟಿ ಲಕ್ಷ ಜನಸಂಖ್ಯೆಯಿದ್ದು, ಪ್ರತಿನಿತ್ಯ 5,500 ಮೆಟ್ರಿಕ್ ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ವೈಜ್ಞಾನಿಕವಾಗಿ ತ್ಯಾಜ್ಯವನ್ನು ವಿಲೇವಾರಿ ಮಾಡದಿದ್ದಲ್ಲಿ ಮುಂದಿನ 15 ವರ್ಷಗಳಲ್ಲಿ 12,000 ಮೆಟ್ರಿಕ್ ಟನ್ ಉತ್ಪತ್ತಿಯಾಗಲಿದೆ. ಆದ್ದರಿಂದ ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಒಣ ತ್ಯಾಜ್ಯ ಸಂಗ್ರಹಣಾ ಘಟಕ, 7 ತ್ಯಾಜ್ಯ ಸಂಸ್ಕರಣಾ ಘಕಟಕ, ವೇಸ್ಟ್ ಟು ಎನರ್ಜಿ ಘಟಕ, ಬಯೋ ಸಿ.ಎನ್.ಜಿ ಸೇರಿದಂತೆ ಮೂಲದಲ್ಲಿಯೇ ಸಂಸ್ಕರಣೆ ಮಾಡುವುದರಿಂದ ತ್ಯಾಜ್ಯ ಸಮಸ್ಯೆಯನ್ನು ಬಗೆಹರಿಸಬಹುದಾಗಿದೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ‘ಮದ್ರಾಸ್‌ ಐ’ ಸೋಂಕಿನ ಬಗ್ಗೆ ಕಣ್ಣಿನ ತಜ್ಞರು ಹೇಳುವುದೇನು?

ಬ್ರ್ಯಾಂಡ್ ಬೆಂಗಳೂರು ಅಡಿ ಸ್ವಚ್ಛ ಬೆಂಗಳೂರು ವಿಭಾಗದಲ್ಲಿ ನಾಗರಿಕರಿಂದ ಬಂದಿರುವಂತಹ ಸಲಹೆ

 • ಮೂಲದಲ್ಲಿಯೇ ತ್ಯಾಜ್ಯವನ್ನು ವಿಂಗಡಿಸುವುದು.

 • ತ್ಯಾಜ್ಯದಿಂದ ವೇಸ್ಟ್ ಟು ಎನರ್ಜಿಯಾಗಿ ಪರಿವರ್ತಿಸುವುದು.

 • ಘನತ್ಯಾಜ್ಯ ನಿರ್ವಹಣೆಯನ್ನು ಕೇಂದ್ರೀಕೃತ ಮತ್ತು ವಿಕೇಂದ್ರೀಕೃತ ಪದ್ದತಿ ಅಳವಡಿಸಿಕೊಳ್ಳುವುದು.

 • ತ್ಯಾಜ್ಯ ವಿಲೇವಾರಿಯ ಬಗ್ಗೆ ಯುವ ಪೀಳಿಗೆ ಮತ್ತು ಮಕ್ಕಳಲ್ಲಿ ಜಾಗೃತಿ ಮತ್ತು ಶಿಕ್ಷಣ ನೀಡುವುದು.

ವಿಚಾರ ಸಂಕಿರಣದಲ್ಲಿ ಬಂದಂತಹ ಸಲಹೆಗಳು

• ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಉನ್ನತೀಕರಿಸಿ ವೈಜ್ಞಾನಿಕವಾಗಿ ನಿರ್ವಹಣೆ ಮಾಡುವುದು.

• ಘನತ್ಯಾಜ್ಯ ನಿರ್ವಹಣೆಯಲ್ಲಿ ವಿಕೇಂದ್ರಿಕರಣ ಮಾಡಿ ವಿಲೇವಾರಿ ಮಾಡುವುದು.

• ಡೋರ್ ಟು ಡೋರ್ 100% ತ್ಯಾಜ್ಯ ವಿಂಗಡಣೆ ಮಾಡುವ ಸಲುವಾಗಿ ಲಿಂಕ್ ವರ್ಕರ್ಸ್‌ಗಳನ್ನು ಸರಿಯಾಗಿ ಬಳಸಿಕೊಳ್ಳುವುದು.

• ವೇಸ್ಟ್ ಟು ಎನರ್ಜಿ ಘಟಕವನ್ನು ಸ್ಥಾಪಿಸುವುದು.

• ಬಯೋ ಸಿ.ಎನ್.ಜಿ ಸ್ಥಾಪಿಸುವುದು.

• ಆಟೋ ಟಿಪ್ಪರ್‌ಗಳ ಮೇಲೆ ಸರಿಯಾಗಿ ನಿಗಾವಹಿಸಿ ಮೇಲ್ವಿಚಾರಣೆ ನಡೆಸುವುದು. ಎಲ್ಲ ಆಟೋ ಟಿಪ್ಪರ್‌ಗಳಿಗೂ ಜಿಪಿಎಸ್ ಅಳವಡಿಸುವುದು.

• ಪ್ರತಿ ವಲಯದಲ್ಲೂ ಕಂಟ್ರೋಲ್ ಕಮಾಂಡ್ ಸೆಂಟರ್ ಸ್ಥಾಪಿಸಿ ಮೇಲ್ವಿಚಾರಣೆ ಮಾಡಬೇಕು.

• ನಗರದ ಎಲ್ಲಾ ಮನೆಗಳಲ್ಲೂ ತ್ಯಾಜ್ಯ ಸಂಸ್ಕರಣೆ ಮಾಡುವ ಪದ್ಧತಿ ಜಾರಿಯಾಗೊಳಿಸಬೇಕು.

• ಒಣ ತ್ಯಾಜ್ಯ ಸಂಗ್ರಹಣಾ ಘಟಕಗಳು ಪ್ರತಿ ವಾರ್ಡ್ ನಲ್ಲೂ ತೆರೆಯುವುದು.

• ಘನತ್ಯಾಜ್ಯ ನಿರ್ವಹಣೆ ಬಗ್ಗೆ ಯುವಕರು ಮತ್ತು ಮಕ್ಕಳಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು.

• ನಗರದಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ಸಂಪೂರ್ಣವಾಗಿ ನಿಷೇಧಿಸುವುದು.

• ಮೈಕ್ರೋ ಪ್ಲಾನ್ 2016 ರಲ್ಲಿ ಮಾಡಿದ್ದು ಹಳೆಯದಾಗಿದೆ. ಕಳೆದ 8 ವರ್ಷಗಳಿಂದ ಕುಟುಂಬಗಳ ಸಂಖ್ಯೆ ಹೆಚ್ಚಿರುವುದರಿಂದ ಅದನ್ನು ಪರಿಷ್ಕರಿಸಬೇಕು.

• ತ್ಯಾಜ್ಯವನ್ನು ಸರಿಯಾದ ಮಾದರಿಯಲ್ಲಿ ವಿಂಗಡಣೆ ಮಾಡುವುದು.

• ಸ್ಮಾರ್ಟ್ ವೇಸ್ಟ್ ಮ್ಯಾನೇಜ್‌ಮೆಂಟ್ ವ್ಯವಸ್ಥೆ ಜಾರಿಗೊಳಿಸುವುದು.

• ಸಿ & ಡಿ ವೇಸ್ಟ್ ಸಂಗ್ರಹಿಸುವ ಪ್ರಕ್ರಿಯೆ ಸಮರ್ಪಕವಾಗಿ ಜಾರಿಯಾಗಬೇಕು. ಓಲಾ ರೀತಿಯಲ್ಲಿಯೇ ತಂತ್ರಾಂಶವನ್ನು ಸಿದ್ದಪಡಿಸಿಕೊಂಡು ವಾಹನಗಳನ್ನು ನೋಂದಾಯಿಸಿಕೊಂಡು ಮನೆಯಿಂದ ಸಿ & ಡಿ ತ್ಯಾಜ್ಯವನ್ನು ತೆರವುಗೊಳಿಸುವ ವ್ಯವಸ್ಥೆ ಮಾಡಬೇಕು.

• ಸಾರ್ವಜನಿಕ ಶೌಚಾಲಯಗಳು ಹೆಚ್ಚಿಸುವ ಜತೆಗೆ ಸರಿಯಾಗಿ ನಿರ್ವಹಣೆ ಮಾಡಬೇಕು.

• ಘನತ್ಯಾಜ್ಯ ನಿರ್ವಹಣೆಗೆ ಸರಿಯಾದ ಮೂಲಸೌಕರ್ಯದ ವ್ಯವಸ್ಥೆ ಮಾಡಬೇಕು.

• ಪ್ರಮುಖ ರಸ್ತೆಗಳಲ್ಲಿ ತ್ಯಾಜ್ಯ ಬಿನ್‌ಗಳನ್ನು ಅಳವಡಿಸಿ, ಅದರಲ್ಲಿಯೇ ತ್ಯಾಜ್ಯವನ್ನು ಬಿಸಾಡುವ ಪದ್ದತಿಯನ್ನು ರೂಢಿಸಿಕೊಳ್ಳಬೇಕು.

• ಪುನರ್ ಬಳಕೆ ಮಾಡಬಹುದಾದ ವಸ್ತು/ಉತ್ಪನ್ನಗಳನ್ನು ಬಿಸಾಡದೆ ಸರಿಯಾದ ಅನುಕ್ರಮದಲ್ಲಿ ಪುನರ್ ಬಳಕೆ ಮಾಡುವ ವ್ಯವಸ್ಥೆ ಜಾರಿಗೊಳಿಸುವುದು.

• ಪ್ರಸ್ತುತ 1.40 ಕೋಟಿ ಜನಸಂಖ್ಯೆಗೆ ಕೇವಲ 15000 ಪೌರಕಾರ್ಮಿಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಅವಶ್ಯಕತೆಯ ಆಧಾರದ ಮೇಲೆ ಪೌರಕಾರ್ಮಿಕರನ್ನು ನೇಮಿಸುವುದು.

• ಸ್ವಚ್ಛ ಬೆಂಗಳೂರು ಅಡಿಯಲ್ಲಿ ಬ್ರಾಂಡ್ ಬೆಂಗಳೂರಿಗೆ ಬ್ರಾಂಡ್ ಅಂಬಾಸಿಡರ್ ಆಗಿ ಪೌರಕಾರ್ಮಿಕರ ಪ್ರತಿನಿಧಿಯನ್ನು ಸೇರಿಸಿ‌

• ಅಪಾಯಕಾರಿ ಮತ್ತು ಪ್ರಾಣಿ ತ್ಯಾಜ್ಯವನ್ನು ಸರಿಯಾಗಿ ನಿರ್ವಹಿಸಿ.

ಸಭೆಯಲ್ಲಿ ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ ಧರ್ಮಪಾಲ್, ಪರಿಸರ ವಿಜ್ಞಾನ ವಿಭಾಗದ ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿದಂತೆ ಪಾಲಿಕೆ ಘನತ್ಯಾಜ್ಯ ವಿಭಾಗದ ಅಧಿಕಾರಿ/ಸಿಬ್ಬಂದಿ, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ಎನ್.ಜಿ.ಒಗಳು ಉಪಸ್ಥಿತರಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

Download Eedina App Android / iOS

X