ಪ್ರಯಾಣಿಕರ ಬಹುದಿನಗಳ ಬೇಡಿಕೆಯಾಗಿರುವ (ರೈಲುಗಳ ಸಂಖ್ಯೆ-16535/16536) ಮೈಸೂರು–ಸೋಲಾಪುರ-ಮೈಸೂರು ಗೋಲ್ ಗುಂಬಜ್ ಎಕ್ಸ್‌ಪ್ರೆಸ್ ರೈಲುಗಳನ್ನು ಪಂಢರಪುರ ನಿಲ್ದಾಣದವರೆಗೆ ವಿಸ್ತರಿಸುವ ಪ್ರಸ್ತಾವನೆಯನ್ನು ರೈಲ್ವೆ ಸಚಿವಾಲಯ ಅನುಮೋದನೆ ನೀಡಿದೆ ಎಂದು ನೈರುತ್ಯ ರೈಲ್ವೆ ಇಲಾಖೆ ತಿಳಿಸಿದೆ.
ಸೆಪ್ಟೆಂಬರ್ 4 ರಿಂದ ಜಾರಿಗೆ ಬರುವಂತೆ (ರೈಲು ಸಂಖ್ಯೆ-16535) ಮೈಸೂರು-ಪಂಢರಪುರ ಗೋಲ್ ಗುಂಬಜ್ ಎಕ್ಸ್‌ಪ್ರೆಸ್ ಮೈಸೂರು ನಿಲ್ದಾಣದಿಂದ ಮಧ್ಯಾಹ್ನ 3:45 ಗಂಟೆಗೆ ಹೊರಟು, ಮರುದಿನ ಮಧ್ಯಾಹ್ನ 12:25 ಗಂಟೆಗೆ ಪಂಢರಪುರ ನಿಲ್ದಾಣವನ್ನು ತಲುಪಲಿದೆ ಎಂದು ಹೇಳಿದೆ.
ಈ ರೈಲಿನ ನಿಲುಗಡೆ/ವೇಳಾಪಟ್ಟಿಯೂ ಬಸವನ ಬಾಗೇವಾಡಿ ರೋಡ್ ನಿಲ್ದಾಣದವರೆಗೆ ಯಾವುದೇ ಬದಲಾವಣೆ ಇರುವುದಿಲ್ಲ. ಈ ರೈಲು ವಿಜಯಪುರ – 07:55/08:00AM, ಇಂಡಿ ರೋಡ್ – 08:41/08:42AM, ಸೋಲಾಪುರ – 10:15/10:20AM ಮತ್ತು ಕುರ್ದುವಾಡಿ -11:25/11:27AM ನಿಲ್ದಾಣಗಳಿಗೆ ಆಗಮಿಸಿ/ನಿರ್ಗಮಿಸಲಿದೆ ಎಂದು ತಿಳಿಸಿದೆ.
ಹಿಂದಿರುಗುವ ದಿಕ್ಕಿನಲ್ಲಿ ಸೆಪ್ಟೆಂಬರ್ 5 ರಿಂದ ಜಾರಿಗೆ ಬರುವಂತೆ (ರೈಲು ಸಂಖ್ಯೆ-16536) ಪಂಢರಪುರ-ಮೈಸೂರು ಗೋಲ್ ಗುಂಬಜ್ ಎಕ್ಸ್‌ಪ್ರೆಸ್ ಪಂಢರಪುರದಿಂದ ಮಧ್ಯಾಹ್ನ 1 ಗಂಟೆಗೆ ಹೊರಟು, ಮರುದಿನ ಬೆಳಗ್ಗೆ 10:45 ಗಂಟೆಗೆ ಮೈಸೂರು ನಿಲ್ದಾಣವನ್ನು ತಲುಪಲಿದೆ.
ಈ ರೈಲು ಮಾರ್ಗದಲ್ಲಿ ಕುರ್ದುವಾಡಿ, ಸೋಲಾಪುರ, ಇಂಡಿ ರೋಡ್, ವಿಜಯಪುರ, ಬಸವನ ಬಾಗೇವಾಡಿ ರೋಡ್, ಆಲಮಟ್ಟಿ, ಬಾಗಲಕೋಟ, ಗುಳೇದಗುಡ್ಡ ರೋಡ್, ಬಾದಾಮಿ, ಹೊಳೆ ಆಲೂರು, ಗದಗ, ಅಣ್ಣಿಗೇರಿ ನಿಲ್ದಾಣಗಳಿಗೆ ಆಗಮಿಸಿ/ನಿರ್ಗಮಿಸಲಿದೆ. ಹುಬ್ಬಳ್ಳಿ ನಿಲ್ದಾಣದಿಂದ ಮೈಸೂರು ನಿಲ್ದಾಣಗಳವರೆಗಿನ ಈ ರೈಲಿನ ವೇಳಾಪಟ್ಟಿ, ನಿಲುಗಡೆ ಹಾಗೂ ರೈಲುಗಳ ಸಂಯೋಜನೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಮಾಹಿತಿ ನೀಡಿದೆ.
ಈ ಸುದ್ದಿ ಓದಿದ್ದೀರಾ? ಕನ್ನಡಿಗ, ಜಾವೆಲಿನ್ ಪಟು ಮನುಗೆ ಬೆಂಬಲ ನೀಡಿ: ಸಿಎಂಗೆ ಮೋಹನ್ ದಾಸರಿ ಮನವಿ
ಹೊಳೆನರಸೀಪುರ ನಿಲ್ದಾಣ: ರೈಲುಗಳ ಪ್ರಾಯೋಗಿಕ ನಿಲುಗಡೆ
ಪ್ರಾಯೋಗಿಕ ಆಧಾರದ ಮೇಲೆ ಆರು ತಿಂಗಳ ಅವಧಿಗೆ ಒಂದು ನಿಮಿಷ ಕಾಲ ಹೊಳೆನರಸೀಪುರ ನಿಲ್ದಾಣದಲ್ಲಿ ರೈಲುಗಳ ನಿಲುಗಡೆಗೆ ತಾತ್ಕಾಲಿಕ ಅವಕಾಶ ನೀಡಲಾಗಿದೆ ಎಂದು ನೈರುತ್ಯ ರೈಲ್ವೆ ಇಲಾಖೆ ಹೇಳಿದೆ.
ಮೈಸೂರಿನಿಂದ 2023ರ ಸೆ. 8 ರಿಂದ 2024ರ ಮಾ. 8ರವರೆಗೆ ಹಾಗೂ ಹಜರತ್ ನಿಜಾಮುದ್ದೀನ್ ನಿಲ್ದಾಣದಿಂದ 2023ರ ಸೆ. 9 ರಿಂದ 2024ರ ಮಾ.11 ರವರೆಗೆ ಜಾರಿಗೆ ಬರುವಂತೆ (ರೈಲುಗಳ ಸಂಖ್ಯೆ-12781/12782) ಮೈಸೂರು ಮತ್ತು ಹಜರತ್ ನಿಜಾಮುದ್ದೀನ್ ನಿಲ್ದಾಣಗಳ ನಡುವೆ ಸಂಚರಿಸುವ ಸ್ವರ್ಣ ಜಯಂತಿ ಎಕ್ಸ್‌ಪ್ರೆಸ್ ರೈಲುಗಳು ಹೊಳೆನರಸೀಪುರ ನಿಲ್ದಾಣದಲ್ಲಿ ಒಂದು ನಿಮಿಷ ನಿಲುಗಡೆಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದೆ.
• (ರೈಲು ಸಂಖ್ಯೆ-12781) ಹೊಳೆನರಸೀಪುರ ನಿಲ್ದಾಣಕ್ಕೆ ರಾತ್ರಿ 9:30/9:31 ಗಂಟೆಗೆ ಆಗಮಿಸಿ/ ನಿರ್ಗಮಿಸಲಿದೆ.
• (ರೈಲು ಸಂಖ್ಯೆ-12782) ಹೊಳೆನರಸೀಪುರ ನಿಲ್ದಾಣಕ್ಕೆ ರಾತ್ರಿ 11:51/11:52 ಗಂಟೆಗೆ ಆಗಮಿಸಿ/ ನಿರ್ಗಮಿಸಲಿದೆ.