ರಾಜ್ಯ ರಾಜಧಾನಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾನಾ ವಿಧಾನದ ಮೂಲಕ ಚಿನ್ನ ಕಳ್ಳಸಾಗಣೆ ಮಾಡಲು ಆರೋಪಿಗಳು ಯತ್ನಿಸುತ್ತಿದ್ದಾರೆ. ಇವರ ಎಲ್ಲ ಕಳ್ಳಾಟಗಳನ್ನು ಕಸ್ಟಮ್ಸ್ ಅಧಿಕಾರಿಗಳು ಬಯಲಿಗೆ ಎಳೆಯುತ್ತಿದ್ದಾರೆ. ಸಿಂಗಾಪೂರದಿಂದ ಬೆಂಗಳೂರಿಗೆ ಸಿಂಥೆಟಿಕ್ ಬೆಲ್ಟ್‌ನಲ್ಲಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಚಿನ್ನ ಸಾಗಾಣಿಕೆಗೆ ಪ್ರಯಾಣಿಕರು ಯತ್ನಿಸಿದ್ದರು. ಪ್ರಯಾಣಿಕರ ಮೇಲೆ ಅನುಮಾನಗೊಂಡ ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಸಿಂಥೆಟಿಕ್ ಬೆಲ್ಟ್‌ನಲ್ಲಿ ಬಚ್ಚಿಟ್ಟಿದ್ದ ₹1.59 ಕೋಟಿ ಮೌಲ್ಯದ ಚಿನ್ನದ ಸರಗಳು ಪತ್ತೆಯಾಗಿವೆ.
ಮತ್ತೊಂದು ವಿನೂತನ ವಿಧಾನದ ಮೂಲಕ ಆರೋಪಿಗಳು ಚಿನ್ನದ ಕಳ್ಳಸಾಗಣೆಯಲ್ಲಿ ತೊಡಗಿದ್ದರು. ಸಿಂಥೆಟಿಕ್ ಬೆಲ್ಟ್‌ಗಳ ಒಳಗಡೆ ಚಿನ್ನವನ್ನು ಇಟ್ಟು ಪ್ಯಾಕ್ ಮಾಡಿದ್ದರು. ಚಿನ್ನದ ಸರಗಳೊಂದಿಗೆ ಸಿಂಗಾಪುರದಿಂದ ಇಬ್ಬರು ಪುರುಷರು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಪೊಲೀಸರು ಇಬ್ಬರನ್ನು ಬಂಧಿಸಿ ಚಿನ್ನ ವಶಪಡಿಸಿಕೊಂಡಿದ್ದಾರೆ.