ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಮತ್ತು ಸಂದರ್ಶಕರ ಅನುಕೂಲಕ್ಕಾಗಿ ಹೊಸ ಎಲಿವೇಟೆಡ್ ವಾಕ್‌ವೇಯನ್ನು ಪ್ರಾರಂಭಿಸಿದೆ. ಹೊಸ ವಾಕ್‌ವೇ ಟರ್ಮಿನಲ್ 1 ರಿಂದ P4 ಪಾರ್ಕಿಂಗ್ ಅನ್ನು ಸಂಪರ್ಕಿಸುತ್ತದೆ ಎಂದು ಕೆಐಎ ತಿಳಿಸಿದೆ.
“ಟರ್ಮಿನಲ್ 1 ಕಡೆಗೆ ಅಥವಾ P4 ಪಾರ್ಕಿಂಗ್ ಕಡೆಗೆ ನಡೆಯುವ ಪಾದಚಾರಿಗಳಿಗೆ ತಡೆರಹಿತ ಅನುಭವವನ್ನು ನೀಡಲು 420 ಮೀಟರ್ ನಡಿಗೆ ಮಾರ್ಗವನ್ನು ವಿನ್ಯಾಸಗೊಳಿಸಲಾಗಿದೆ. ಆಧುನಿಕ ವಿನ್ಯಾಸದೊಂದಿಗೆ ಈ ವಾಕ್ ವೇ ನಿರ್ಮಾಣ ಮಾಡಲಾಗಿದೆ. ಪ್ರಯಾಣಿಕರು ಚಲಿಸುವ ಕಾಲುದಾರಿಗಳು, ಎಲಿವೇಟರ್‌ಗಳು ಮತ್ತು ಎಸ್ಕಲೇಟರ್‌ಗಳಂತಹ ಪ್ರಯಾಣಿಕರ ಸ್ನೇಹಿ ಸೌಕರ್ಯಗಳು ಪ್ರಯಾಣಿಕರು ಸುಲಭ ಮತ್ತು ಆರಾಮದಾಯಕವಾದ ನಡಿಗೆಯನ್ನು ಅನುಭವಿಸಬಹುದು” ಎಂದು ಹೇಳಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಫುಟ್‌ಪಾತ್ ನಿರ್ಮಾಣಕ್ಕೆ ಬೇಕು ₹93 ಕೋಟಿ
“ಹಿರಿಯ ನಾಗರಿಕ ಮತ್ತು ಕಡಿಮೆ ಚಲನಶೀಲತೆ ಹೊಂದಿರುವ ವ್ಯಕ್ತಿಗಳ ಸ್ನೇಹಿಯಾಗಿದೆ. ಕಾಲ್ನಡಿಗೆಯಲ್ಲಿ ಸುರಕ್ಷಿತ ಪಾದಚಾರಿ ಕಾರಿಡಾರ್ ಮತ್ತು ರಾತ್ರಿಯಿಡಿ ಸಾಕಷ್ಟು ಬೆಳಕು ಸುರಕ್ಷಿತ ಮತ್ತು ಆರಾಮದಾಯಕ ವಾತಾವರಣವಿದೆ. ಬಿಎಲ್‌ಆರ್ ನಿರಂತರ ಆವಿಷ್ಕಾರಗಳ ಮೂಲಕ ಪ್ರಯಾಣಿಕರಿಗೆ ಮರೆಯಲಾಗದ ಅನುಭವಗಳನ್ನು ನೀಡುತ್ತದೆ” ಎಂದು ತಿಳಿಸಿದೆ.