‘ಟೋಬಿ ಚಿತ್ರ ಚೆನ್ನಾಗಿಲ್ಲ’ ಎಂದ ಯುವತಿಗೆ ಬೆದರಿಕೆ ಹಾಕಿದ ಯುವಕ : ವಿಡಿಯೋ ವೈರಲ್

Date:

  • ಯುವತಿ ದೂರು ನೀಡಿಲ್ಲ, ನೀಡಿದರೆ ಸೂಕ್ತ ಕ್ರಮ : ಮೈಸೂರು ಕಮಿಷನರ್ ರಮೇಶ್ ಬಾನೋತ್
  • ಮೈಸೂರಿನ ಸಂಗಂ ಥಿಯೇಟರ್ ಬಳಿ ನಡೆದ ಘಟನೆ; ಯುವಕನಿಗೆ ಸಾಥ್ ನೀಡಿದ ಥಿಯೇಟರ್ ವ್ಯವಸ್ಥಾಪಕ

ನಿರ್ದೇಶಕ, ನಟ ರಾಜ್ ಬಿ ಶೆಟ್ಟಿ ರಚಿಸಿದ್ದ ‘ಟೋಬಿ’ ಸಿನಿಮಾ ಶುಕ್ರವಾರ(ಆ.25) ರಾಜ್ಯಾದ್ಯಂತ ಬಿಡುಗಡೆಗೊಂಡಿದೆ. ಇದೇ ವೇಳೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ.

ಈ ನಡುವೆ ಮೈಸೂರಿನ ಸಂಗಂ ಥಿಯೇಟರ್ ಎದುರು ‘ಟೋಬಿ ಚೆನ್ನಾಗಿಲ್ಲ’ ಎಂದು ಡಿಜಿಟಲ್ ಮಾಧ್ಯಮವೊಂದಕ್ಕೆ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದ ಯುವತಿಯೋರ್ವಳಿಗೆ ಸಿನಿಮಾ ವೀಕ್ಷಿಸಲು ಬಂದಿದ್ದ ಯುವಕನೋರ್ವ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಸದ್ಯ ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

‘ಏನ್ ಚೆನ್ನಾಗಿಲ್ಲ ಹೇಳು, ಹೊಯ್ತಾ ಇರಬೇಕು ಆಚೆಗೆ. ನೋಡೋಕ್ಕಾಗೋದಾದರೆ ನೋಡು, ಇಲ್ಲಂತಾದರೆ ಮುಚ್ಕೊಂಡು ಹೊಯ್ತಾ ಇರಬೇಕು’ ಎಂದು ಬೆದರಿಸಿದ್ದಾನೆ. ಇದೇ ವೇಳೆ ಓರ್ವ ರಿಕ್ಷಾ ಚಾಲಕ ಹಾಗೂ ಸಂಗಂ ಥಿಯೇಟರ್‌ನ ವ್ಯವಸ್ಥಾಪಕ ಕುಂಜಪ್ಪ ಎಂಬವರೂ ಕೂಡ ಇದಕ್ಕೆ ಸಾಥ್ ನೀಡಿದ್ದು, ಯುವತಿಯ ವಿರುದ್ಧವೇ ರೇಗಾಡಿ, ಮನೆಗೆ ಹೋಗುವಂತೆ ತಿಳಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಬೆಳವಣಿಗೆ ಬಳಿಕ ಅದೇ ಡಿಜಿಟಲ್ ಮಾಧ್ಯಮದ ಪ್ರತಿನಿಧಿಯೊಂದಿಗೆ ಮಾತನಾಡಿದ್ದ ಸಂಗಂ ಥಿಯೇಟರ್‌ನ ವ್ಯವಸ್ಥಾಪಕ ಕುಂಜಪ್ಪ, ‘ಆ ಯುವತಿ ಮಾನಸಿಕ ಸ್ಥಿಮಿತ ಕಳೆದುಕೊಂಡಿರಬಹುದು. ಸಿನಿಮಾ ಚೆನ್ನಾಗಿಲ್ಲ ಎಂದು ಹೇಳಲು ಯಾರಾದರೂ ಇಲ್ಲಿಗೆ ಕಳುಹಿಸಿರಬಹುದು. ಇದೇ ಕಾರಣ ಇರಬಹುದು’ ಎಂದು ಯುವತಿಯ ವಿರುದ್ಧವೇ ಹೇಳಿಕೆ ನೀಡಿದ್ದಾರೆ.

ಯುವಕ ಬೆದರಿಕೆ ಹಾಕಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ‘ಅಭಿಪ್ರಾಯ ತಿಳಿಸುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಒಂಟಿ ಹುಡುಗಿಗೆ ಬಾಯಿಗ್ ಬಂದಂಗೆ ಯುವಕ ಬೈಯ್ಯುತ್ತಾ ಇದ್ದರೂ, ಜನರ ಸುಮ್ಮನೆ ನಿಂತು ನೋಡ್ತಾ ಇದ್ದಾರೆ’ ಎಂದು ನೆಟ್ಟಿಗರೋರ್ವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಘಟನೆಯ ಬಗ್ಗೆ ಮಾಹಿತಿ ಕಲೆ ಹಾಕಲು, ಈ ದಿನ.ಕಾಮ್ ಮೈಸೂರು ನಗರ ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಅವರನ್ನು ಸಂಪರ್ಕಿಸಿತು.

‘ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರುವ ಬಗ್ಗೆ ಇಲಾಖೆಯ ಗಮನಕ್ಕೆ ಬಂದಿದೆ. ಯುವಕ-ಯುವತಿ ಯಾರು ಎಂಬ ಬಗ್ಗೆ ಮಾಹಿತಿ ಇಲ್ಲ. ವೈಯಕ್ತಿಕ ಜಗಳವಾಗಿರುವುದರಿಂದ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿಲ್ಲ. ಒಂದು ವೇಳೆ ಯುವತಿಯೇ ಮುಂದೆ ಬಂದು ದೂರು ನೀಡಿದಲ್ಲಿ ಯುವಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದು ರಮೇಶ್ ಬಾನೋತ್ ತಿಳಿಸಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿನಿಮಾ ವಿಮರ್ಶೆ | ನೋಡುಗನನ್ನು ನಜೀಬನ ಮರುಭೂಮಿಯ ಆಡಿನ ದೊಡ್ಡಿಗೆ ಕರೆದೊಯ್ಯುವ ‘ಆಡುಜೀವಿತಂ’

ಮಲಯಾಳಂ ಸಾಹಿತ್ಯ ಜಗತ್ತಿನಲ್ಲಿ ದಾಖಲೆ ನಿರ್ಮಿಸಿದ ಕಾದಂಬರಿ 'ಆಡುಜೀವಿತಂ'(ಆಡು ಜೀವನ). ಇದು...

‘ಕಿರಾತಕ’ ಖ್ಯಾತಿಯ ಖಳನಟ ಡೇನಿಯಲ್ ಬಾಲಾಜಿ ನಿಧನ

ಕಿರಾತಕ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದ ತಮಿಳಿನ ಖ್ಯಾತ ಖಳನಟ ಡೇನಿಯಲ್...

ಸಿನಿ ಪ್ರಿಯರ ಮನಸ್ಸು ಗೆದ್ದ ಪೃಥ್ವಿರಾಜ್ ನಟನೆಯ ನೈಜ ಕಥೆಯಾಧರಿಸಿದ ‘ಆಡು ಜೀವಿತಂ’ ಸಿನಿಮಾ

ಬಹುನಿರೀಕ್ಷಿತ ಮಲಯಾಳಂ ಚಿತ್ರ 'ಆಡು ಜೀವಿತಂ' ಅಥವಾ 'ದಿ ಗೋಟ್‌ಲೈಫ್' ಮಾರ್ಚ್...

ನಿರ್ಮಾಪಕರ ಸಂಘದ ವಿರುದ್ಧ ನಟ ಸುದೀಪ್ ಮಾನನಷ್ಟ ಮೊಕದ್ದಮೆ: ಅರ್ಜಿ ವಜಾಗೊಳಿಸಲು ಹೈಕೋರ್ಟ್‌ ನಕಾರ

ಸುಳ್ಳು ಆಸ್ತಿ ಸಂಪಾದಿಸಿದ ಆರೋಪ ಹೊರಿಸಿದ್ದ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ...