ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಆನವೇರಿ ಗ್ರಾಮದ ರೈತ ಸಂಘದ ಗ್ರಾಮ ಘಟಕದ ನಾಮಫಲಕವನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷರಾದ ಹೆಚ್. ಆರ್ ಬಸವರಾಜಪ್ಪನವರು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ರೈತರ ಸಮಸ್ಯೆಗಳ ಬಗ್ಗೆ ಹೋರಾಟ ಮಾಡಲು ರೈತ ಸಂಘಟನೆಯನ್ನು ಬಲಪಡಿಸಬೇಕು ಎಂದು ತಿಳಿಸಿದರು.
“ಇಂದು ಆನವೇರಿ ಗ್ರಾಮದಲ್ಲಿ ರೈತ ಸಂಘದ ನಾಮಫಲಕ ಹಾಕಿರುವುದು ಒಳ್ಳೆಯ ಕೆಲಸ. ಪ್ರತಿ ವರ್ಗವು ಕೂಡ ಸಂಘಟನೆ ಮಾಡಿಕೊಂಡಿದೆ. ರೈತರ ಸಮಸ್ಯೆಗಳ ಬಗ್ಗೆ ಹೊರಟ ಮಾಡಲು ರೈತ ಸಂಘಟನೆಯನ್ನ ಬಲಪಡಿಸಬೇಕು. ಹಿಂದೆ ಲೇವಿ ಚೀಟಿ ಸುಡುವುದು, ಜಪ್ತಿ ಮಾಡಿದ ರೈತರ ವಸ್ತುಗಳ ಮರು ಜಪ್ತಿ, ಭ್ರಷ್ಟ ಅಧಿಕಾರಿಗಳ ಮನೆ ಜಪ್ತಿ, ಇತ್ತೀಚೆಗೆ ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನ ಕೇಂದ್ರ ಸರ್ಕಾರ ವಾಪಸ್ಸು ಪಡೆದಿದ್ದು ಕೂಡ ದೆಹಲಿಯ ಬೃಹತ್ ಚಳುವಳಿಯಿಂದ” ಎಂದು ತಿಳಿಸಿದರು.

ರೈತ ಸಂಘದ ನಾಮಫಲಕಗಳನ್ನು ಪ್ರತಿ ಗ್ರಾಮದಲ್ಲಿ ಹಾಕಬೇಕು, ಸಂಘಟನೆ ಬಲಪಡಿಸಬೇಕು. ಈ ಭಾಗದಲ್ಲಿ ಬಗರ್ ಹುಕ್ಕುಂ ರೈತರನ್ನು ಒಕ್ಕಲೆಬ್ಬಿಸುತ್ತಿದ್ದಾರೆ ನಮ್ಮ ಭೂಮಿಯನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಒಂದು ವೇಳೆ ಅಧಿಕಾರಿಗಳು ಕ್ರಮಕ್ಕೆ ಮುಂದಾದರೆ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.
ನವೆಂಬರ್ 26ರಂದು ಭಾರತ ದೇಶದ 500ಕ್ಕೂ ಹೆಚ್ಚು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ರೈತ ಮುಖಂಡರಾದ ಹೆಚ್. ಆರ್ ಬಸವರಾಜಪ್ಪ ತಿಳಿಸಿದರು.
ಇದನ್ನು ಓದಿದ್ದೀರಾ? ಗ್ರೌಂಡ್ ರಿಪೋರ್ಟ್ | ಕಡಕೋಳ ಗಲಭೆ: ಗ್ರಾಮವನ್ನೇ ತೊರೆದ 70ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳು!
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಟಿ.ಎಂ ಚಂದ್ರಪ್ಪ, ಜಿಲ್ಲಾಧ್ಯಕ್ಷರಾದ ಕೆ. ರಾಘವೇಂದ್ರ, ಜಿಲ್ಲಾ ಉಪಾಧ್ಯಕ್ಷರಾದ ಎಂ.ಮಹದೇವಪ್ಪ, ಎಂ.ಆರ್ ರಾಜರಾವ್, ಎಂ.ಎಸ್ ತಿಮ್ಮಪ್ಪ, ಭದ್ರಾವತಿ ತಾಲೂಕು ಗೌರವಾಧ್ಯಕ್ಷರಾದ ಎಂ.ಹೆಚ್ ತಿಮ್ಮಪ್ಪ, ತಾಲೂಕು ಅಧ್ಯಕ್ಷರಾದ ಜಿ.ಎನ್ ಪಂಚಾಕ್ಷರಿ, ತಾಲೂಕು ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ, ತಾಲೂಕು ಉಪಾಧ್ಯಕ್ಷರಾದ ಇ.ತಿಮ್ಮಪ್ಪ, ಮುಖಂಡರಾದ ಹೆಚ್ ಗಂಗಾಧರಪ್ಪ, ಜಗದೀಶ್ ಗೌಡ್ರು, ದಾನೇಶಪ್ಪ, ಮಹದೇವಪ್ಪ, ಕುಪೇಂದ್ರಪ್ಪ, ನಟರಾಜ್ ಗೌಡ್ರು ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.


