ಮಂಗಳೂರು | ಬಿಜೆಪಿ ನೇತೃತ್ವದ ಭಾರತದಲ್ಲಿ ಯುವಜನರ ಆಶೋತ್ತರ ಕಡೆಗಣನೆ: ಸುನೀಲ್ ಕುಮಾರ್ ಬಜಾಲ್

Date:

Advertisements

ಭಾರತ ದೇಶದಲ್ಲಿಂದು ನಿರುದ್ಯೋಗದ ಪ್ರಮಾಣ ವಿಪರೀತವಾಗಿ ಏರಿಕೆಯಾಗಿದೆ. ಬಡತನ, ಹಸಿವು, ಅಸ್ಪ್ರಶ್ಯತೆ, ಮತೀಯವಾದದ ಸಾಗಿರುವಂತಹ ಭಾರತವನ್ನು ಭಗತ್ ಸಿಂಗ್ ಬಯಸಿರಲಿಲ್ಲ. ಕೇಂದ್ರದಲ್ಲಿ ಆಳುವ ಬಿಜೆಪಿ ನೇತೃತ್ವದ ಭಾರತದಲ್ಲಿ ಯುವಜನರ ಆಶೋತ್ತರಗಳನ್ನು ಕಡೆಗಣಿಸಲಾಗಿದೆ ಎಂದು ಡಿವೈಎಫ್ಐ ಮಾಜಿ ರಾಜ್ಯಾಧ್ಯಕ್ಷರಾದ ಸುನೀಲ್ ಕುಮಾರ್ ಬಜಾಲ್ ಕಿಡಿಕಾರಿದರು.

ಅವರು ಭಾನುವಾರ ಡಿವೈಎಫ್ಐ ಮಂಗಳೂರು ದ.ಕ ಜಿಲ್ಲಾ ಸಮಿತಿ ಭಗತ್ ಸಿಂಗರ ಹುತಾತ್ಮ ದಿನದ ಅಂಗವಾಗಿ ನಿರುದ್ಯೋಗದ ವಿರುದ್ಧ ಸೌಹಾರ್ದ ಭಾರತಕ್ಕಾಗಿ ನಗರದ ಜಿಲ್ಲಾ ಪಂಚಾಯತ್ ಕಚೇರಿಯಿಂದ ಉರ್ವಸ್ಟೋರ್ ಜಂಕ್ಷನ್ ವರೆಗೆ ನಡೆದ ಭಗತ್ ಸಿಂಗ್ ಹುತಾತ್ಮ ಜ್ಯೋತಿ ಮೆರವಣೆಗೆ ಹಾಗೂ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.

1003893358

ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಮಾತನಾಡುತ್ತಾ ಇವತ್ತಿನ ಶಿಕ್ಷಣ ಸಂಸ್ಥೆಗಳು ನಿರುದ್ಯೋಗಿ ಯುವಜನರನ್ನು ಸೃಷ್ಟಿಸುವ ಕಾರ್ಖಾನೆಯಾಗಿದೆ. ಶಿಕ್ಷಣ ಪಡೆದು ಹೊರ ಬರುತ್ತಿರುವ ಯುವಜನರಿಗೆ ಉದ್ಯೋಗವಿಲ್ಲ ಇರುವ ಉದ್ಯೋಗಳಿಗೆ ಭದ್ರತೆಯಿಲ್ಲ ಸಣ್ಣ ಪುಟ್ಟ ಅಂಗಡಿ ಮುಂಗಟ್ಟುಗಳಲ್ಲಿ ಕಡಿಮೆ ಆದಾಯಕ್ಕೆ ದುಡಿಯುತ್ತಿರುವ ಕಾರ್ಮಿಕರಿಗೆ ಕನಿಷ್ಠ ವೇತನವೂ ಇಲ್ಲ ಈ ಬಗ್ಗೆ ಒಬ್ಬನೇ ಒಬ್ಬ ಶಾಸಕ ವಿಧಾನಸೌಧದ ಒಳಗೆ ಧ್ವನಿ ಎತ್ತುತ್ತಿಲ್ಲ .ಅದೇ ಶಾಸಕರೆಲ್ಲ ತಮ್ಮ ಸಂಬಳ ಹೆಚ್ಚಳಗೊಳಿಸಿ ಅವರ ಬದುಕನ್ನಷ್ಟೇ ಭದ್ರಗೊಳಿಸುತ್ತಿರುವುದು ನಾಚಿಕೆಗೇಡಿನ ಸಂಗತಿ‌ ಎಂದು ತಿಳಿಸಿದರು.

Advertisements

ಸಭೆಯ ಅಧ್ಯಕ್ಷತೆ ವಹಿಸಿ ಡಿವೈಎಫ್ಐ ದ.ಕ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಮಾತನಾಡುತ್ತಾ, ಇಂದಿನ ಯುವತಲೆಮಾರಿಗೆ ಭಗತ್ ಸಿಂಗರ ಹೋರಾಟದ ಆಶಯಗಳನ್ನು ತಿಳಿಸುವ ಮತ್ತು ಅವರ ಕನಸಿನ ಭಾರತವನ್ನು ಕಟ್ಟುವ ಇತಿಹಾಸಗಳ ಕುರಿತು ತಿಳಿಸಬೇಕಾಗಿದೆ. ಯುವಜನರು ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧದ ಹೋರಾಟಗಳಿಗೆ ಅಣಿನೇರಿಸಬೇಕಾಗಿದೆ.

ವೇದಿಕೆಯಲ್ಲಿ ಡಿವೈಎಫ್ಐ ಜಿಲ್ಲಾ ಮುಖಂಡರಾದ ನವೀನ್ ಕೊಂಚಾಡಿ, ನಿತಿನ್ ಕುತ್ತಾರ್, ಪುನೀತ್ ಉರ್ವಸ್ಟೋರ್, ಮಾಧುರಿ ಬೋಳಾರ್ ಉಪಸ್ಥಿತರಿದ್ದರು.

ಈ ವೇಳೆ ಡಿವೈಎಫ್ಐ ಜಿಲ್ಲಾ ಮುಖಂಡರಾದ ಜಗದೀಶ್ ಬಜಾಲ್, ರಿಜ್ವಾನ್ ಹರೇಕಳ,‌ ರಾಜೇಶ್ ಉರ್ವಸ್ಟೋರ್, ಮನೋಜ್ ಉರ್ವಸ್ಟೋರ್, ಪ್ರದೀಪ್, ಧಿರಾಜ್ ಬಜಾಲ್, ಪ್ರಕಾಶ್ ಶೆಟ್ಟಿ ಬಜಾಲ್, ಭಾರತೀ ಬೋಳಾರ, ದಯಾನಂದ ಶೆಟ್ಟಿ, ಇಕ್ಬಾಲ್ ಉರ್ವಸ್ಟೋರ್ ಮುಂತಾದವರು ಉಪಸ್ಥಿತರಿದ್ದರು.

1003893354
ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X