ಐಪಿಎಲ್ 2025 | ಇಶಾನ್‌ ಆರ್ಭಟದಿಂದ ಎಸ್‌ಆರ್‌ಎಚ್‌ಗೆ ಜಯ; ಚೆನ್ನೈ ಗೆಲ್ಲಿಸಿದ ರಚಿನ್‌

Date:

ಐಪಿಎಲ್‌ 2025ನ ಎರಡು ಮತ್ತು ಮೂರನೇ ಪಂದ್ಯದಲ್ಲಿ ಪ್ಯಾಟ್‌ ಕಮಿನ್ಸ್‌ ನೇತೃತ್ವದ ಸನ್‌ ರೈಸರ್ಸ್‌ ಹೈದರಾಬಾದ್‌ ಹಾಗೂ ರಜತ್‌ ಪಾಟಿದಾರ್‌ ಸಾರಥ್ಯದ ಚೆನ್ನೈ ಸೂಪರ್‌ ಕಿಂಗ್ಸ್‌ ಗೆಲುವು ಸಾಧಿಸಿದವು. ಉಪ್ಪಳದ ರಾಜೀವಗಾಂಧಿ ಕ್ರೀ ಡಾಂಗಣದಲ್ಲಿ ನಡೆದ 2ನೇ ಪಂದ್ಯದಲ್ಲಿ ಎಸ್‌ಆರ್‌ಎಚ್‌ ರನ್‌ಗಳ ಹೊಳೆಯನ್ನೇ ಹರಿಸಿದರೆ, ಮತ್ತೊಂದು ಪಂದ್ಯದಲ್ಲಿ ಮುಂಬೈ ನೀಡಿದ 155 ರನ್‌ಗಳ ಸವಾಲನ್ನು ಚೆನ್ನೈ ಸುಲಭವಾಗಿ ಗುರಿ ಮುಟ್ಟಿತು.

- Advertisement -

ಇಶಾನ್ ಕಿಶನ್ ಸ್ಫೋಟಕ ಶತಕದಿಂದ ಶತಕದ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿತು. 45 ಎಸೆತಗಳಲ್ಲಿ ಶತಕ ಹೊಡೆದ ಇಶಾನ್ ಮತ್ತು 31 ಎಸೆತಗಳಲ್ಲಿ 67 ರನ್ ಸಿಡಿಸಿದ ಟ್ರಾವಿಸ್ ಹೆಡ್ ಅವರ ಬ್ಯಾಟಿಂಗ್‌ನಿಂದ ಸನ್‌ರೈಸರ್ಸ್ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 286 ರನ್ ಗಳಿಸಿತು. ಐಪಿಎಲ್‌ನಲ್ಲಿ ಇದು ಎರಡನೇ ಗರಿಷ್ಠ ಮೊತ್ತವಾಗಿದೆ. ಅತಿ ಹೆಚ್ಚಿನ ಮೊತ್ತದ (287) ದಾಖಲೆಯೂ ಸನ್‌ರೈಸರ್ಸ್‌ ಹೆಸರಿನಲ್ಲಿಯೇ ಇದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಬಡ ಯೆಮನ್ ಇಕ್ಕಳದಲ್ಲಿ ಶ್ರೀಮಂತ ಸೌದಿ: ವಿನಾಕಾರಣ ದಾಳಿ...

ಸುಮ್ಮನೆ ಇರಲಾರದ ಸೌದಿ ಅರೇಬಿಯಾ, ಬಡ ರಾಷ್ಟ್ರಗಳ ಮೇಲೆ ದಬ್ಬಾಳಿಕೆ ಮಾಡಲು ಹೋಗಿ, ಮರ್ಮಕ್ಕೆ ತಾಕುವಂತಹ ಹೊಡೆತ ತಿಂದು ಕೂತಿದೆ. ಈಗ ಸೌದಿ ಅರೇಬಿಯಾದ ನೆರವಿಗೆ ಅಮೆರಿಕಾ, ಇಸ್ರೇಲ್‌, ಪಾಕಿಸ್ತಾನ ಮತ್ತು ಟಿರ್ಕಿ...

ಮುಸ್ಲಿಯಾರ್ ಹೇಳಿಕೆ ಎಬ್ಬಿಸಿದ ಪ್ರಶ್ನೆ— ಧಾರ್ಮಿಕ ಮೌಲ್ಯಗಳ ನಡುವೆ...

ಮಹಿಳೆಯ ಗೌರವವನ್ನು ರಕ್ಷಿಸುವ ಹೆಸರಿನಲ್ಲಿ ಆಕೆಯ ಶಿಕ್ಷಣ, ಪ್ರತಿಭೆ, ವೃತ್ತಿ ಅಥವಾ ಸಾಮಾಜಿಕ ಸೇವೆಯ ಬಾಗಿಲುಗಳನ್ನು ಮುಚ್ಚುವುದು ಒಂದು ವಿಷಯ; ಧಾರ್ಮಿಕ ಹಯಾ ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡೇ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಪಾಲ್ಗೊಳ್ಳಲು ಅವಕಾಶ...

ಧಾರವಾಡ | ಹುಲಕೊಪ್ಪ‌ ಶಾಲೆ ಶೌಚಾಲಯ ಕಾಮಗಾರಿ ಅಪೂರ್ಣ;...

ಧಾರವಾಡ ಜಿಲ್ಲೆಯ ಕಲಘಟಗಿ ಪ್ರಾಥಮಿಕ ಶಾಲೆಯಲ್ಲಿ‌ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಹೈಟೆಕ್ ಶೌಚಾಲಯ ಆರಂಭವಾಗಿ ಸುಮಾರು ವರ್ಷಗಳೇ ಕಳೆದರೂ ಇನ್ನೂ ಕಾಮಗಾರಿ ಮುಗಿದಿಲ್ಲ. ಶಾಲೆಯ...

ಗುರಿ ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ತಂಡದ ಸಂಜು ಸ್ಯಾಮ್ಸನ್ (66; 37ಎ, 4X7, 6X4) ಮತ್ತು ಧ್ರುವ ಜುರೇಲ್ (70; 35ಎ, 4X5, 6X6) ಅವರ ಅಬ್ಬರದ ಹೊರತಾಗಿಯೂ ಜಯಗಳಿಸಲು ಸಾಧ್ಯವಾಗಲಿಲ್ಲ. 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 242 ರನ್ ಗಳಿಸಿದ ರಾಯಲ್ಸ್ 44 ರನ್‌ಗಳಿಂದ ಸೋಲನ್ನೊಪ್ಪಿಕೊಂಡಿತು.

ಈ ಸುದ್ದಿ ಓದಿದ್ದೀರಾ? ಐಪಿಎಲ್‌ ಅಖಾಡದಲ್ಲಿದ್ದಾರೆ 13 ಕನ್ನಡಿಗ ಆಟಗಾರರು: ‘ಆರ್‌ಸಿಬಿ’ಯಲ್ಲಿ ಯಾರ್‍ಯಾರಿದ್ದಾರೆ?

ಅಭಿಷೇಕ್ ಶರ್ಮಾ (24) ಮತ್ತು ಟ್ರಾವಿಸ್‌ ಹೆಡ್ (67) ನಿತೀಶ್ ಕುಮಾರ್ ರೆಡ್ಡಿ (30) ಹೆನ್ರಿಚ್ ಕ್ಲಾಸೆನ್ (34; 14ಎ) ಅಬ್ಬರಿಸಿ ದಾಖಲೆ ಮೊತ್ತಕ್ಕೆ ಕಾರಣರಾದರು. ಬೃಹತ್‌ ಮೊತ್ತವನ್ನು ಬೆನ್ನಟ್ಟಿದ ರಾತಸ್ಥಾನ್‌ ರಾಯಲ್ಸ್ ತಂಡವು ಸುಲಭವಾಗಿ ಸೋಲಲಿಲ್ಲ.

ಆರಂಭಿಕ ಯಶಸ್ವಿ ಜೈಸ್ವಾಲ್ (1 ರನ್) ಮತ್ತು ರಿಯಾನ್ ಪರಾಗ್ (4 ರನ್) ಅವರಿಬ್ಬರೂ ಸಿಮರ್ಜೀತ್‌ ಸಿಂಗ್ ಹಾಕಿದ ಎರಡನೇ ಓವರ್‌ನಲ್ಲಿ ಔಟಾದರು. ಈ ಹಂತದಲ್ಲಿ ಸಂಜು ಬ್ಯಾಟ್ ಬೀಸಿದರು. ನಿತೀಶ್ ರಾಣಾ (11 ರನ್) ಕೂಡ ನಿರ್ಗಮಿಸಿದರು. ಸಂಜು ಜೊತೆಗೂಡಿದ ಜುರೇಲ್ 4ನೇ ವಿಕೆಟ್ ಜೊತೆಯಾಟದಲ್ಲಿ 111 ರನ್‌ ಸೇರಿಸಿದರು. ಸಂಜು ಮತ್ತು ಜುರೇಲ್ ಔಟಾದ ನಂತರವೂ ಶಿಮ್ರಾನ್ ಹೆಟ್ಮೆಯರ್ ಮತ್ತು ಶುಭಂ ದುಬೆ ಅವರು ತಲಾ 4 ಸಿಕ್ಸರ್ ಹೊಡೆದರು. ಆದರೆ ಅವರ ಪ್ರಯತ್ನಗಳಿಗೆ ಫಲ ಸಿಗಲಿಲ್ಲ

ಚೆನ್ನೈ ಗೆಲ್ಲಿಸಿದ ರಚಿನ್‌ ರವೀಂದ್ರ

ಮುಂಬೈ ವಿರುದ್ಧದ ಪಂದ್ಯದಲ್ಲಿ ರಚಿನ್ ರವೀಂದ್ರ(65) ಅಜೇಯ ಅರ್ಧಶತಕ ಮತ್ತು ಋತುರಾಜ್ ಗಾಯಕವಾಡ(53) ಅವರ ಮಿಂಚಿನ ಬ್ಯಾಟಿಂಗ್ ಬಲದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಶುಭಾರಂಭ ಮಾಡಿತು. ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.

ಮುಂಬೈ ಇಂಡಿಯನ್ಸ್ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 155 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಚೆನ್ನೈ ತಂಡವು 4 ವಿಕೆಟ್‌ಗಳಿಂದ ಜಯಿಸಿತು. ಆದರೆ ಮುಂಬೈ ತಂಡದಲ್ಲಿ ಪದಾರ್ಪಣೆ ಮಾಡಿದ ಎಡಗೈ ಸ್ಪಿನ್ನರ್ ವಿಘ್ನೇಷ್ ಪುತ್ತೂರ್ (32ಕ್ಕೆ3) ಅವರ ದಾಳಿಯಿಂದಾಗಿ ಚೆನ್ನೈ ತಂಡಕ್ಕೆ ಸುಲಭ ಜಯ ಒಲಿಯಲಿಲ್ಲ.

ಚೆನ್ನೈನ ಎಡಗೈ ವೇಗಿ ಖಲೀಲ್ ಅಹಮದ್ (29ಕ್ಕೆ3) ಮತ್ತು ಅಫ್ಗಾನಿಸ್ತಾನದ ಎಡಗೈ ಸ್ಪಿನ್ನರ್ ನೂರ್ ಅಹಮದ್ (18ಕ್ಕೆ4) ಅವರಿಬ್ಬರ ಬೌಲಿಂಗ್ ಮುಂದೆ ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 155/9 ಸಾಧಾರಣ ಮೊತ್ತ ಗಳಿಸಿತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

75ನೇ ವರ್ಷದ ಬಾಂಧವ್ಯ: ಭಾರತ-ಜಪಾನ್ ನಡುವೆ ಚೊಚ್ಚಲ ಟಿ20 ಕ್ರಿಕೆಟ್

ಭಾರತ ಹಾಗೂ ಜಪಾನ್ ನಡುವಿನ 75ನೇ ವರ್ಷದ ರಾಜತಾಂತ್ರಿಕ ಬಾಂಧವ್ಯದ ಸಂಭ್ರಮಾಚರಣೆಯ...

ಏಷ್ಯನ್ ಗೇಮ್ಸ್ | ಟೀಂ ಇಂಡಿಯಾಗೆ ‘ವೆರಿ ವೆರಿ ಸ್ಪೆಷಲ್’; ವಿವಿಎಸ್‌ ಲಕ್ಷ್ಮಣ್ ಹೆಡ್‌ ಕೋಚ್!

ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ, ಶ್ರೇಯಸ್ ಅಯ್ಯರ್ ಹಾಗೂ...

ನೂರಾರು ವಿವಾದ, ಅದಕ್ಕೂ ಮೀರಿದ ಮನುಷ್ಯತ್ವ: ಮೆಸ್ಸಿಯ 21 ವರ್ಷದ ಪಯಣದತ್ತ ಒಂದು ಹಿನ್ನೋಟ

ಲಿಯೋನೆಲ್ ಮೆಸ್ಸಿ ಎಂಬ ದಂತಕಥೆಯನ್ನು ನಾವು ಅತ್ಯಂತ ಸಮತೋಲಿತ ದೃಷ್ಟಿಕೋನದಿಂದ ನೋಡಬೇಕಾಗಿದೆ....

ಟೆನಿಸ್ ತಾರೆ ಜೋಕೋವಿಕ್‌ಗೆ US ಓಪನ್ ಆಘಾತ: ಆರಂಭಿಕ ಸುತ್ತಿನಲ್ಲೇ ಹೊರಕ್ಕೆ

ದಾಖಲೆಯ 25ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದ ಸರ್ಬಿಯಾದ ಟೆನಿಸ್...