ಹಾಂಗ್‌ಕಾಂಗ್‌ ಸಾಂಸ್ಕೃತಿಕ ಉತ್ಸವದಲ್ಲಿ ತುಮಕೂರಿನ ʼಸ್ವರವಿ ಕಲಾ ಕೇಂದ್ರʼದಿಂದ ಭರತನಾಟ್ಯ ಪ್ರದರ್ಶನ

Date:

Advertisements

ಹಾಂಗ್‌ಕಾಂಗ್‌ ವಿಶ್ವವಿದ್ಯಾಲಯ ಹಾಗೂ ಹಾಂಗ್‌ಕಾಂಗ್‌ ಸ್ಥಳೀಯ ಕನ್ನಡ ಸಂಘದ ಸಂಯುಕ್ತಾಶ್ರಯದಲ್ಲಿ ಹಾಂಗ್‌ಕಾಂಗ್‌ನಲ್ಲಿ ಆಯೋಜಿಸಲಾಗಿದ್ದ ‘ಮಲ್ಟಿ-ಕಲ್ಚರಲ್ ಅಂಡ್ ಗ್ಲೋಬಲ್ ಡೈವರ್ಸಿಟಿ ಪ್ರಾಜೆಕ್ಟ್’ ಅಂತಾರಾಷ್ಟ್ರೀಯ ಸಾಂಸ್ಕೃತಿಕ ವೇದಿಕೆಯಲ್ಲಿ ತುಮಕೂರಿನ ಪ್ರತಿಷ್ಠಿತ ಕಲಾಸಂಸ್ಥೆ ಸ್ವರವಿ ಆರ್ಟ್ಸ್ ಫೌಂಡೇಶನ್ ರಾಜ್ಯವನ್ನು ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡಿ, ಗಮನ ಸೆಳೆದಿದೆ.

WhatsApp Image 2025 05 07 at 6.17.31 PM

ಹಾಂಗ್‌ಕಾಂಗ್‌ ವಿಶ್ವವಿದ್ಯಾಲಯದ ಪ್ರಸಿದ್ಧ ರೇಸನ್ ಹುವಾಂಗ್ ರಂಗಮಂದಿರದಲ್ಲಿ ಆಯೋಜನೆಯಾಗಿದ್ದ ಈ ಕಾರ್ಯಕ್ರಮದಲ್ಲಿ, ಸ್ವರವಿ ತಂಡವು ಕರ್ನಾಟಕದ ಶಾಸ್ತ್ರೀಯ ಕಲಾ ಪ್ರಕಾರವಾದ ಭರತನಾಟ್ಯಕ್ಕೆ ವಿಶೇಷ ಒತ್ತು ನೀಡಿ, ಕಲೆಯ ಔನ್ನತ್ಯತೆ ಹಾಗೂ ವೈಶಿಷ್ಟ್ಯತೆಯನ್ನು ಪ್ರಪಂಚದ ಎದುರು ಪ್ರದರ್ಶಿಸಿತು. ಕರ್ನಾಟಕದ ಹೆಮ್ಮೆಯ ಜಾನಪದ ಕಲೆಯಾದ ಯಕ್ಷಗಾನದ ರೋಮಾಂಚಕ ಪ್ರಸ್ತುತಿಯೊಂದಿಗೆ ಅವರು ಪ್ರೇಕ್ಷಕರನ್ನು ಮತ್ತಷ್ಟು ಆಕರ್ಷಿಸಿದರು. ತಂಡವು ನೀಡಿದ ಎರಡೂವರೆ ಗಂಟೆಗಳ ಅತ್ಯುತ್ತಮ ಪ್ರದರ್ಶನದಲ್ಲಿ, ಸಂವಾದಕ ಭರತನಾಟ್ಯ ಹಾಗೂ ಜನಪದ ಕಾರ್ಯಾಗಾರಗಳು ಸಹ ಸೇರಿದ್ದವು. ಈ ಪ್ರದರ್ಶನಕ್ಕೆ ಕಲಾವಿದರಿಗೆ ಉತ್ತಮ ಬೆಂಬಲದ ಪ್ರತಿಕ್ರಿಯೆ ದೊರೆಯಿತು.

WhatsApp Image 2025 05 07 at 6.17.32 PM 2

ಕಾರ್ಯಕ್ರಮವನ್ನು ತುಮಕೂರಿನ ಪ್ರಸಿದ್ಧ ಕಲಾವಿದೆ ವಿದುಷಿ ವರ್ಷ ರವಿಪ್ರಕಾಶ್ ನೇತೃತ್ವದಲ್ಲಿ ನಡೆಸಲಾಯಿತು. ಇವರೊಂದಿಗೆ ಪ್ರತಿಭಾನ್ವಿತ ಹೆಸರಾಂತ ಕಲಾವಿದೆಯರಾದ ಮೇಘನಾ ಬಾಲಾಜಿ ಮತ್ತು ಕಾಜಲ್ ಬಂಗೇರಾ ಅವರು ಕರ್ನಾಟಕದ ಸಾಂಸ್ಕೃತಿಕ ಪರಂಪರೆಯ ಚೈತನ್ಯವನ್ನು ಜಾಗತಿಕ ವೇದಿಕೆಗೆ ತರುವಲ್ಲಿ ಸಹಕರಿಸಿದರು.

Advertisements

ಇದನ್ನೂ ಓದಿ: ತುಮಕೂರು | ಖಾಸಗೀಕರಣ ಸಾಮಾಜಿಕ ಭದ್ರತೆ ಕಿತ್ತುಕೊಂಡಿದೆ : ಬಿ. ಸುರೇಶ್

ಕಾರ್ಯಕ್ರಮದಲ್ಲಿ ಭಾರತದ ಹಾಂಗ್‌ಕಾಂಗ್‌ ಕಾನ್ಸುಲೇಟ್‌ನ ಕೌನ್ಸುಲ್ ಸುರಭಿ ಗೋಯಲ್ ಪಾಲ್ಗೊಂಡು ತಂಡದ ಅಸಾಧಾರಣ ಪ್ರಸ್ತುತಿಯನ್ನು ಶ್ಲಾಘಿಸಿದರು. ಹಾಂಗ್‌ಕಾಂಗ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವಾಸ್ಕಜ್, ಪ್ರೊ. ಕಿಮ್ ಮತ್ತು ಶ್ರೀ ನಕ್ಕಾ, ಕನ್ನಡ ಸಂಘದ ಅಧ್ಯಕ್ಷೆ ವಾಣಿ ರಾಮೇಶ್ ಬಾಬು, ಕಾರ್ಯದರ್ಶಿ ಡಾ. ಪ್ರದೀಪ್ ಉಪಸ್ಥಿತರಿದ್ದು, ತಂಡದ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

WhatsApp Image 2025 05 07 at 6.17.31 PM 1

ತುಮಕೂರು ಮತ್ತು ಬೆಂಗಳೂರಿನಲ್ಲಿ ಶಾಲೆಗಳನ್ನು ಹೊಂದಿರುವ ಸ್ವರವಿ ಆರ್ಟ್ಸ್ ಫೌಂಡೇಶನ್ ತನ್ನ ಕಲಾತ್ಮಕ ಶಿಸ್ತು, ತಾಂತ್ರಿಕ ಪರಿಣಿತಿ ಹಾಗೂ ನೃತ್ಯದ ಆಧ್ಯಾತ್ಮಿಕ ಅಂಶಗಳ ಮೂಲಕ ಕನ್ನಡದ ಸಾಂಸ್ಕೃತಿಕ ಪರಂಪರೆಯ ಪ್ರಭಾವವನ್ನು ಜಗತ್ತಿನಾದ್ಯಂತ ಹರಡುವ ಯೋಜನೆಯನ್ನು ಕೈಗೆತ್ತಿಕೊಂಡು ಮುನ್ನಡೆಯುತ್ತಿದೆ.

WhatsApp Image 2025 05 07 at 6.17.32 PM 1
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

Download Eedina App Android / iOS

X