ತುಮಕೂರು | ಖಾಸಗೀಕರಣ ಸಾಮಾಜಿಕ ಭದ್ರತೆ ಕಿತ್ತುಕೊಂಡಿದೆ : ಬಿ. ಸುರೇಶ್

Date:

ದೇಶದ ಆರ್ಥಿಕ ಕ್ಷೇತ್ರದಲ್ಲಿ ಖಾಸಗೀಕರಣಕ್ಕೆ ಹೆಚ್ಚು ಉತ್ತೇಜನ ನೀಡಲು ಪ್ರಾರಂಭವಾದಗಿನಿಂದ ಸಾರ್ವಜನಿಕ ಉದ್ದಿಮೆಗಳು, ಸಾರ್ವಜನಿಕ ಆಸ್ತಿಗಳ ಮೇಲೆ ಪಕ್ಷಬೇಧವಿಲ್ಲದೆ ಆಡಳಿತ ನಡೆಸಿದವರು ಹೊಸ ರೀತಿಯ ಮೊಳೆಗಳನ್ನು ಹೊಡೆಯಲು ಪ್ರಾರಂಭವಾಗಿದೆ. 1983ರಲ್ಲಿ ಗ್ಯಾಟ್ ಒಪ್ಪಂದ, ಡೆಂಕಲ್ ಒಪ್ಪಂದಕ್ಕೆ ಸಹಿ ಹಾಕಿದಾಗ ಆರಂಭವಾದ ಖಾಸಗೀಕರಣ, ಜಾಗತೀಕರಣ, ಉದಾರೀಕರಣದಂತಹ ಅಂತಃಕರಣಗಳಿಲ್ಲದೆ ಕಾರಣಗಳು ಪ್ರಾರಂಭವಾಗಿ ಉದ್ಯೋಗ, ಸಾಮಾಜಿಕ ಭದ್ರತೆಗಳನ್ನು ಕಿತ್ತುಕೊಳ್ಳುವ ಕೆಲಸಗಳು ನಡೆಯುತ್ತಿವೆ. ಈ ನೀತಿಗಳ ವಿರುದ್ಧ ಕಾರ್ಮಿಕ ಸಂಘಟನೆಗಳು ನಿರಂತರವಾಗಿ ಸಾಮಾಜಿಕ ಭದ್ರತೆಗಾಗಿ ಹೋರಾಟಗಳನ್ನು ನಡೆಸುತ್ತಿವೆ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ, ರಂಗಕರ್ಮಿ, ನಟ ಬಿ. ಸುರೇಶ್ ಅಭಿಪ್ರಯಪಟ್ಟರು.

- Advertisement -

ತುಮಕೂರು ನಗರದ ಟೌನ್‌ಹಾಲ್ ವೃತ್ತದಲ್ಲಿ  ವಿಶ್ವಕಾರ್ಮಿಕರ ದಿನಾಚರಣೆಯ (ಮೇ ದಿನಾಚರಣೆ) ಅಂಗವಾಗಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಸಿಐಟಿಯು ಹಮ್ಮಿಕೊಂಡಿದ್ದ ಬಹಿರಂಗ ಸಭೆಯನ್ನು ಉದ್ಘಾಟಿಸಿ  ಮಾತನಾಡಿದ ಅವರು, ದಿನಕ್ಕೆ 16 ರಿಂದ 18 ಗಂಟೆಗಳ ಕಾಲ ದುಡಿಸಿಕೊಳ್ಳುತ್ತಿದ್ದ ಬಂಡವಾಳಗಾರರ ವ್ಯವಸ್ಥೆಯ ವಿರುದ್ದ ದಿನಕ್ಕೆ 8 ಗಂಟೆಯ ಕೆಲಸಕ್ಕೆ ಆಗ್ರಹಿಸಿ ನಡೆಸಿದ ಹೋರಾಟಕ್ಕೆ ಸುಮಾರು 250 ವರ್ಷಗಳ ಇತಿಹಾಸವಿದೆ. ತಮಗೆ ಧಕ್ಕಬೇಕಾದ ಪ್ರಸ್ತುತ ಸವಲತ್ತುಗಳ ಬಗ್ಗೆ ಕಾರ್ಮಿಕರು ಮಾತನಾಡದ ರೀತಿಯಲ್ಲಿ ಹಲವು ರೀತಿಯ ಬೀಗಗಳನ್ನು ಹಾಕಲಾಗುತ್ತಿದೆ. ಕಾನೂನಿನ ಬೀಗ, ಭಯದ ಬೀಗ, ಸಬಂಳದ ಬೀಗ, ವಜಾಗೊಲಿಸುವ ಬೀಗ ಇಂತಹ ಸಂದರ್ಭದಲ್ಲಿ ಕಾರ್ಮಿಕರ ಹಕ್ಕುಗಳ ಬಗ್ಗೆ ಧ್ವನಿ ಎತ್ತುವ ರೀತಿಯಲ್ಲಿ ಕಾರ್ಮಿಕ ದಿನಾಚರಣೆಯ ಮೂಲಕ ಜಾಗೃತಗೊಳಿಸುವ ಕೆಲಸಗಳನ್ನು ಕಾರ್ಮಿಕ ಸಂಘಟನೆಗಳು ಇಂದು ಮಾಡುತ್ತಿವೆ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು ರಾಜಕೀಯದ ಭಾಗವೂ ಹೌದು. ಆರಂಭದ ಕಪ್ಪು-ಬಿಳುಪಿನ ನೆರಳುಗಳಿಂದ ಇಂದಿನ ಅಲ್ಟ್ರಾ-ಸ್ಯಾಚುರೇಟೆಡ್ ಪರದೆಯವರೆಗೆ, ಸಿನೆಮಾದ ಸೌಂದರ್ಯ, ತಂತ್ರಜ್ಞಾನ ಮತ್ತು ಅಧಿಕಾರ ರಾಜಕಾರಣವನ್ನು...

‘ಪಿತೃಪ್ರಭುತ್ವವನ್ನು ಧ್ವಂಸ ಮಾಡಿ’: ಮನುವಾದ ಮತ್ತು ಫ್ಯಾಸಿಸಂ ವಿರುದ್ಧ...

ಸ್ವತಂತ್ರ ಭಾರತ 80 ವರ್ಷಗಳನ್ನು ಪೂರೈಸುತ್ತಿರುವಾಗ, ನಾವು ಕೇಳಬೇಕಾಗಿದೆ, ಆ ಮನಸ್ಥಿತಿ ಹೋಗಿದೆಯೇ? ಇಲ್ಲ. ಪುಸ್ತಕವನ್ನು ಸುಡಲಾಗಿರಬಹುದು, ಆದರೆ ಮನುಸ್ಮೃತಿಯ ಮನಸ್ಥಿತಿ, ಮನುವಾದ, ಹೆಚ್ಚು ಅತ್ಯಾಧುನಿಕ ಮತ್ತು ಅದೃಶ್ಯ ರೂಪಗಳಲ್ಲಿ ಅಸ್ತಿತ್ವದಲ್ಲಿದೆ.  ಪುಣೆಯಲ್ಲಿ ನಡೆದ...
1001378598

ಇದೇ ತುಮಕೂರು ನಗರದಲ್ಲಿ ಸುಮಾರು 15 ರಿಂದ 20 ಸಾವಿರ ಮಂದಿಗೆ ಉದ್ಯೋಗ ನೀಡಿದ್ದ ಹೆಚ್.ಎಂ.ಟಿ. ಕೈಗಡಿಯಾರ ಕಾರ್ಖಾನೆ ಇಂದು ಖಾಸಗೀಕರಣದ ಉತ್ತೇಜನದಿಂದ ನಾಶವಾಗಿದೆ. ಇದರಿಂದ ಸಾಮಾಜಿಕ ಭದ್ರತೆ, ಉದ್ಯೋಗ ಭದ್ರತೆ ಇಲ್ಲದಂತಾಗಿದೆ. ಕನಿಷ್ಠ ವೇತನವಿಲ್ಲದೆ ದುಡಿಯುತ್ತಿದ್ದ ಪೌರಕಾರ್ಮಿಕರಿಗೆ ಕನಿಷ್ಠ ಕೂಲಿ ಜಾರಿಗೆ ಆಗ್ರಹಿಸಿ ಸಂಘಟನೆಗಳ ಸುಮಾರು 20 ವರ್ಷಗಳ ನಿರಂತರ ಹೋರಾಟದ ಭಾಗವಾಗಿ ಪೌರಕಾರ್ಮಿಕರಿಗೆ 18 ಸಾವಿರ ಕನಿಷ್ಠ ಕೂಲಿ ಜಾರಿಗೆ ಕೋರ್ಟ್ ಆದೇಶ ನೀಡಿದರೆ ಅವರನ್ನು ಗುತ್ತಿಗೆ ಆಧಾರದಲ್ಲಿ ದುಡಿಸಿಕೊಳ್ಳುವ ಕೆಲಸಕ್ಕೆ ದೂಡುತ್ತಿದೆ. ಜಿಡಿಪಿಯಲ್ಲಿ ಸಾಮಾಜಿಕ ಕಲ್ಯಾಣಕ್ಕಾಗಿ ಮೀಸಲಿಡುತ್ತಿದ್ದ ಶೇ. 8 ರಷ್ಟು ಹಣದಲ್ಲಿ ಕೇವಲ ಶೇ.2 ಕ್ಕೆ ಬಂದು ನಿಂತಿದೆ. ಇದರಿಂದ ಶಿಕ್ಷಣ, ಆರೋಗ್ಯ, ಸೇರಿದಂತೆ ಹಲವು ವಿಭಾಗಗಳು ಸಾಮಾನ್ಯ ಜನರಿಗೆ ಕೈಗೆ ಸಿಗದಂತಾಗಿದೆ ಎಂದರು 

ಇಂದು ಪ್ರತಿಯೊಂದ ಕೆಲಸಕ್ಕೂ ಪ್ರತಿಯೊಂದ ಯೋಜನೆಗೆ ಸ್ಮಾರ್ಟ್ ಪೋನ್ ಅಗತ್ಯವಾಗಿ ಬೇಕಾಗಿದೆ. ಆದರೆ ಇದೇ ಸ್ಮಾರ್ಟ್ ಪೋನ್ ಇದ್ದರೆ ಬಡವನ ಬಿಪಿಎಲ್ ಕಾರ್ಡ್ ರದ್ದಾಗುತ್ತದೆ. ಒಂದು ಕಾಲದಲ್ಲಿ ಹಲವು ಜನರಿಗೆ ಉದ್ಯೋಗ ನೀಡಿದ್ದ ಬಿಪಿಎಲ್ ಟಿವಿ ಇಂದು ಹೇಳಲು ಹೆಸರಿಲ್ಲದಂತಾಗಿದೆ. ಬೇರೆ ದೇಶದ ವಸ್ತುಗಳಿಗೆ ಭಾರತದ ಲೆಬಲ್ ಹಾಕಲಾಗುತ್ತಿದ್ದೆ. ಸಂವಿಧಾನ ನೀಡಿರುವ ಬದುಕುವ ಹಕ್ಕಿನ ಉಳಿವಿಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದು ಕಾರ್ಮಿಕರಿಗೆ ಕರೆ ನೀಡಿದರು.

  ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್‌ಮುಜೀಬ್  ಮಾತನಾಡಿ  ಜನರನ್ನು ಭಾವನಾತ್ಮಕವಗಿ ವಿಭಜನೆಯ ಮೂಲಕ ದ್ವೇಷ ಬೆಳೆಸಿ ಜನರಮೂಲಭುತವಾದ ಉದ್ಯೋಗ, ಬಡತನ, ಅಪೌಷ್ಠಿಕತೆ, ವಸತಿ, ಮಹಿಳೆಯರ ಮತ್ತು ದಲಿತರ ಮೇಲಿನ ದೌರ್ಜನ್ಯ, ಬೆಲೆ ಏರಿಕೆ ಸೇರಿದಂತೆ ಮುಂತಾದ ಜ್ವಲಂತ ಸಮಸ್ಯೆಗಳನ್ನು ಮರೆಮಾಚಲಾಗುತ್ತಿದೆ. ಶ್ರಮ ಶಕ್ತಿಯನ್ನು ಅಪಮಾನಿಸಲಾಗುತ್ತಿದ್ದು, ದುಡಿಯುವ ಜನರು ಇದರ ವಿರುದ್ದ ಸಂಘಟಿತರಾಗಿ ಮೇ 20 ರಂದು ನಡೆಯುವ ಅಖಿಲ ಭಾರತ ಮುಷ್ಕರವನ್ನು ಯಶಸ್ವಿಗೊಳಿಸಲು ಆಗ್ರಹಿಸಿದರು.

 ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಜಿ.ಕಮಲ, ಎ. ಲೋಕೇಶ್. ಹೆಚ್.ಡಿ.ನಾಗೇಶ್, ಬಿ.ಉಮೇಶ್, ಗುಲ್ಜಾರ್‌ಭಾನು, ನಾಗರಾಜು, ಅನಸೂಯ ಮಹಿಳಾ ಸಂಘಟನೆಯ ಮುಖಂಡರಾದ ಕಲ್ಪನ, ಶಿವಕುಮರಸ್ವಾಮಿ, ಕೊಳಗೇರಿ ಸಂಘಟನೆಯ ಎ. ನರಿಂಹಮೂರ್ತಿ,  ಸುಕುಮಾರ್, ಮಧುಸೂದನ್, ವಸೀಂಅಕ್ರಂ, ಇಂತು, ಗಣಪತಿ, ಮಂಜುನಾಥ್, ಶ್ರೀನಿವಾಸ್, ಮಹೇಶ್, ಗಂಗಮ್ಮ, ಸೇರಿದಂತೆ ಇತರರು ಉಪಸ್ಥಿತರಿದ್ದರು.

 ಖಲೀಲ್ ಸ್ವಾಗತಿಸಿ ಎನ್.ಕೆ.ಸುಬ್ರಮಣ್ಯ ನಿರೂಪಿಸಿ ಎ.ಲೋಕೇಶ್ ವಂದಿಸಿದರು. 

ಪುಷ್ಪ ಮತ್ತು ಸಂಗಡಿಗರು ಕ್ರಾಂತಿಗೀತೆಗಳನ್ನು ಹಾಡಿದರು. 

ರಂಗಧಾಮಯ್ಯ, ಸುಜೀತ್, ಪುಷ್ಪ, ಆಧಿಲಕ್ಷ್ಮಮ್ಮ, ನಾಗಸುಂದರರವರ ನೇತೃತ್ವದಲ್ಲಿ ನಡೆದ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. 

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಹಸುಗೂಸನ್ನು ಕಸದ ರಾಶಿಗೆ ಎಸೆದು ಪರಾರಿ; ತಾಯಿ, ಅಜ್ಜಿ ಪೊಲೀಸರ ವಶಕ್ಕೆ

ಕಲಬುರಗಿ ತಾಲೂಕಿನ ಶ್ರೀನಿವಾಸ ಸರಡಗಿ ಗ್ರಾಮದಲ್ಲಿ ಒಂದು ದಿನದ ಹಸುಗೂಸನ್ನು ಕಸದ...

KPSC ನೇಮಕಾತಿ ಅಕ್ರಮ: ಸಿಬಿಐ ತನಿಖೆಗೆ ಆಗ್ರಹಿಸಿ ಚಡಚಣದಲ್ಲಿ ಉಪವಾಸ ಸತ್ಯಾಗ್ರಹ

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಸಾವಿರಾರು ಅಭ್ಯರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ಕರ್ನಾಟಕ ಲೋಕಸೇವಾ...

ಉಡುಪಿ | ಮಲ್ಪೆಯಲ್ಲಿ ಆಂಧ್ರಪ್ರದೇಶ ಮೂಲದ ವ್ಯಕ್ತಿ ಕೊಲೆ

ಆಂಧ್ರಪ್ರದೇಶ ಮೂಲದ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವ ಘಟನೆ ಮಲ್ಪೆಯಲ್ಲಿ ಮಂಗಳವಾರ ಬೆಳಗ್ಗೆ...