ಇಂದಿನ ಆಧುನಿಕತೆಯಲ್ಲಿ ಮಹಿಳೆಯರು ಅನೇಕ ಕ್ಷೇತ್ರದಲ್ಲಿ ತಮ್ಮ ಸಾಧನೆಯನ್ನು ತೋರುತ್ತಿರುವುದು ಹೆಮ್ಮೆಯ ಸಂಗತಿ ಎಂದು ಸುಕನ್ಯಾ ರೇಷ್ಮೆ ಹೇಳಿದರು.
ಭಾಲ್ಕಿ ಪಟ್ಟಣದ ಬಾಲಯೇಸು ಪುಣ್ಯ ಕ್ಷೇತ್ರದಲ್ಲಿ ಆರ್ಬಿಟ್ ಸಂಸ್ಥೆ ಮತ್ತು ತಾಲೂಕು ಜನಜಾಗೃತಿ ಒಕ್ಕೂಟದ ವತಿಯಿಂದ ಈಚೆಗೆ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಪುರುಷರಿಗಿಂತ ಮಹಿಳೆಯರು ಯಾವ ಕ್ಷೇತ್ರದಲ್ಲೂ ಹಿಂದೆ ಇಲ್ಲ, ಆದರೆ ಮಹಿಳೆಯರು ಸಾಗಬೇಕಾಗಿರುವ ಹಾದಿ ಇನ್ನು ಸಾಕಷ್ಟು ಇದೆ, ಹೆಣ್ಣು ತಾಯಿಯಾಗಿ, ಪತ್ನಿಯಾಗಿ, ಮಗಳಾಗಿ, ಸಹೋದರಿಯಾಗಿ ಕುಟುಂಬದ ಕಣ್ಣಾಗಿ ತನ್ನ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾಳೆ’ ಎಂದರು.
‘ಮಹಿಳೆಯರ ಹೊರತಾಗಿ ಈ ಪ್ರಪಂಚವೇ ಕಲ್ಪಿಸಿಕೊಳ್ಳುವುದು ಕಷ್ಟ ಸುಮಾರು 30 ವರ್ಷಗಳಿಂದ ಆರ್ಬಿಟ್ ಸಂಸ್ಥೆ ಮಹಿಳೆಯರ ಸಬಲೀಕರಣಕ್ಕಾಗಿ ದುಡಿಯುತ್ತಿರುವುದು ಶ್ಲಾಘನೀಯ ಸಂಗತಿ’ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಬಸವಕಲ್ಯಾಣ ನಗರಸಭೆ ಸಿಬ್ಬಂದಿ ಕೊಲೆ ಪ್ರಕರಣ : ಆರೋಪಿ ಬಂಧನ
ಆರ್ಬಿಟ್ ಸಂಸ್ಥೆಯ ವಿಮಲಾಬಾಯಿ ಮಾತನಾಡಿ, ‘ಮಹಿಳೆಯರಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಆರ್ಬಿಟ್ ಸಂಸ್ಥೆಯ ಕೊಡುಗೆ ದೊಡ್ಡದಿದೆ’ ಎಂದು ತಿಳಿಸಿದರು.