ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಬೀದರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ-ಕಾಲೇಜು, ಡಾ.ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ-ಕಾಲೇಜು ಮತ್ತು ಮೌಲಾನಾ ಆಜಾದ ಮಾದರಿ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ 2025-26ನೇ ಶೈಕ್ಷಣಿಕ ಸಾಲಿಗೆ ಒಂದು ವರ್ಷಕ್ಕೆ ತಾತ್ಕಾಲಿಕವಾಗಿ ಅನ್ವಯಿಸುವಂತೆ ಅರ್ಹ ಅತಿಥಿ ಶಿಕ್ಷಕರು-ಉಪನ್ಯಾಸಕರನ್ನು ಅಯ್ಕೆ ಮಾಡಲು ಅರ್ಜಿ ಅಹ್ವಾನಿಸಲಾಗಿದೆ ಎಂದು ಬೀದರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಷಯವಾರು ಅತಿಥಿ ಶಿಕ್ಷಕರ ಖಾಲಿ ಹುದ್ದೆ ವಿವರ: ಕನ್ನಡ (16), ಇಂಗ್ಲೀಷ (17), ಹಿಂದಿ (3), ಉರ್ದು (5), ಗಣಿತ (15) ವಿಜ್ಞಾನ (12), ಸಮಾಜ ವಿಜ್ಞಾನ (16), ದೈಹಿಕ ಶಿಕ್ಷಣ (2) ಸೇರಿ ಒಟ್ಟು 86 ಹುದ್ದೆಗಳು.
ವಿಷಯವಾರು ಅತಿಥಿ ಉಪನ್ಯಾಸಕರ ಖಾಲಿ ಹುದ್ದೆ ವಿವರ: ಕನ್ನಡ (3), ಇಂಗ್ಲೀಷ್ (3), ಉರ್ದು (2), ಗಣಿತ (3), ಭೌತಶಾಸ್ತ್ರ (4), ರಸಾಯನ ಶಾಸ್ತ್ರ (3), ಜೀವಶಾಸ್ತ್ರ (3), ಇತಿಹಾಸಶಾಸ್ತ್ರ (1), ಅರ್ಥಶಾಸ್ತ್ರ (1), ವ್ಯಾವಹಾರಶಾಸ್ತ್ರ (1), ಲೆಕ್ಕಶಾಸ್ತ್ರ (1) ಒಟ್ಟು ಹುದ್ದೆಗಳು 25.
ಆಸಕ್ತರು ಅರ್ಜಿಯನ್ನು https://dom.karnataka.gov.in ಅಥವಾ ಜಿಲ್ಲಾ ಕಛೇರಿ/ತಾಲ್ಲೂಕಾ ಮಾಹಿತಿ ಕೇಂದ್ರಗಳಿಂದ ಪಡೆದು ಎಲ್ಲಾ ಧೃಡೀಕೃತ ದಾಖಲೆಗಳೊಂದಿಗೆ 2025ರ ಮೇ 19ರ ಒಳಗಾಗಿ ಜಿಲ್ಲಾ ಕಚೇರಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಬೀದರ ಸಲ್ಲಿಸಲು ಅವರು ತಿಳಿಸಿದ್ದಾರೆ.