ಬೀದರ್ ಜಿಲ್ಲೆಯ ಔರಾದ್ ಪಟ್ಟಣದ ಮಾತಾ ಮಾಣಿಕೇಶ್ವರಿ ಬಡಾವಣೆಯ ಹಿಂದೂ ಮಹಾ ಗಣೇಶ ಮಂಡಳಿಯ ವತಿಯಿಂದ ಗಣೇಶ್ ಉತ್ಸವ ಪ್ರಯುಕ್ತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದ ಉದ್ಘಾಟನೆ ತಾಲೂಕು ವೈದ್ಯಾಧಿಕಾರಿ ಡಾ. ಗಾಯತ್ರಿ ಅವರು ಉದ್ಘಾಟಿಸಿದರು. ಸಿಪಿಐ ರಘುವೀರ್ ಸಿಂಗ್ ಠಾಕೂರ್, ಪಿ ಎಸ ಐ ವಸಿಮ್ ಪಟೇಲ್, ಪಟ್ಟಣ ಪಂಚಾಯತ್ ಸದಸ್ಯ ದಯಾನಂದ ಘುಳೆ, ಕಾಂಗ್ರೆಸ್ ಯುವ ಮುಖಂಡ ಸುಧಾಕರ್ ಕೊಳ್ಳುರ, ಗಣೇಶ್ ಮಂಡಳಿ ಅಧ್ಯಕ್ಷ ಸಂತೋಷ್ ದ್ಯಾಡೆ, ಯುವ ಕಾಂಗ್ರೇಸ್ ಮುಖಂಡ ಶಿವಶಂಕರ್ ನಿಸ್ಪತೆ. ಮುಂತಾದವರು ಉಪಸ್ಥಿತರಿದ್ದರು.

ಈ ಗಣೇಶೋತ್ಸವದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಸೇರಿ ರಕ್ತದಾನ ಮಾಡಿ ಭಾವೈಕ್ಯತೆ, ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ. ಅದೇ ರೀತಿಯಾಗಿ ಸತತವಾಗಿ ಏಳು ದಿನಗಳ ಕಾಲ ಪೂಜಾ ಕಾರ್ಯಕ್ರಮ ಸೇರಿದಂತೆ ಮಹಾ ಪ್ರಸಾದ ಕಾರ್ಯಕ್ರಮದಲ್ಲಿ ಹಿಂದೂ ಮುಸ್ಲಿಂ ಸಹೋದರರು ಭಾಗಿಯಾದರು.
ಬಡಾವಣೆಯ ಮೋಸಿನ್ ಪಟೇಲ ಅವರು ಭಕ್ತರಿಗೆ ಮಹಾ ಪ್ರಸಾದ ವ್ಯವಸ್ಥೆ ಮಾಡಿದರು. ಶಾಂತಿ ಸೌಹಾರ್ದತೆಯ ಗಣೇಶ ಉತ್ಸವ ಜರುಗುತ್ತಿರುವುದು ವಿಶೇಷವಾಗಿದೆ.
ರಕ್ತದಾನ ಮಾಡಿದ ಮುಸ್ಲಿಂ-ಹಿಂದೂ ಬಾಂಧವರು
ಫೈಜುಲ್ಲಾ ಖಾನ್, ಮೋಸಿನ್ ಪಟೇಲ್, ಆಕಾಶ ನಾಗೂರೆ, ಸಂತೋಷ ಸ್ವಾಮಿ, ಶಿವಬಸವ ಪಾಟೀಲ, ನಾಗರಾಜ ಭಾಲ್ಕೆ, ವಿಶಾಲ ಗಜರೆ, ಶ್ರೀಕಾಂತ ನಿರ್ಮಳೆ, ಬಸವಲಿಂಗ ಯನಗುಂದೆ, ಸೇರಿದಂತೆ ಸುಮಾರು 50 ಜನ ಯುವಕರು ರಕ್ತದಾನ ತಮ್ಮ ಭಕ್ತಿ ಸಮರ್ಪಣೆ ಗಣೇಶನಿಗೆ ಅರ್ಪಿಸಿದರು.
ಪ್ರತಿ ವರ್ಷ ನಡೆಯುವ ಗಣೇಶೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಹಾಗೂ ವಿನೂತನ ಕಾರ್ಯಕ್ರಮಕ್ಕೆ ನಮ್ಮ ಓಣಿಯ ನಿವಾಸಿಗಳು ಸಾಕ್ಷಿಯಾಗಿದ್ದಾರೆ. ಧರ್ಮ-ಜಾತಿ ಎನ್ನದೇ ಎಲ್ಲರೂ ಒಗ್ಗೂಡಿ ಇದೆ ರೀತಿಯಲ್ಲಿ ಸಮಾಜಮುಖಿ ಕಾರ್ಯಕ್ರಮ ಆಯೋಜಿಸಿದರೆ ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆ ಇರುತ್ತದೆ ಎಂದು ಹಿಂದೂ ಮಹಾ ಗಣೇಶ್ ಮಂಡಳಿ ಅಧ್ಯಕ್ಷರಾದ ಸಂತೋಷ ದ್ಯಾಡೆ ಅವರು ತಿಳಿಸಿದರು.

