ಬೀದರ್ | ಮಾಧ್ಯಮ ಶೋಷಿತರ ದನಿಯಾಗಿ ಬದಲಾಗಲಿ: ತಹಶೀಲ್ದಾರ್ ಶಿವಾನಂದ ಮೇತ್ರೆ

Date:

Advertisements

ಮನುಷ್ಯನ ಅಸಹಾಯಕ ಸಂದರ್ಭದಲ್ಲಿ ಸ್ಪಂದಿಸುವ ಗುಣ ಮತ್ತು ಹೊಣೆಗಾರಿಕೆ ಮಾಧ್ಯಮಕ್ಕಿರಲಿ. ದನಿಯಿಲ್ಲದವರ ಧ್ವನಿಯಾಗಿ ಮಾಧ್ಯಮ ಕಾರ್ಯನಿರ್ವಹಿಸಬೇಕು ಎಂದು ಬೀದರ್ ಜಿಲ್ಲೆಯ ಹುಲಸೂರು ತಹಶೀಲ್ದಾರ್ ಶಿವಾನಂದ ಮೇತ್ರೆ ಹೇಳಿದರು.

ಈದಿನ.ಕಾಮ್ ಹಾಗೂ ಬಸವಕಲ್ಯಾಣದ ಡಾ. ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನವು ಹುಲಸೂರಿನ ಎಂಕೆಕೆಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ‘ಮಾಧ್ಯಮ: ಸವಾಲು ಮತ್ತು ಸಾಧ್ಯತೆಗಳು’ ಉಪನ್ಯಾಸ ಸಮಾರಂಭದಲ್ಲಿ ಅವರು ಮಾತನಾಡಿದರು. “ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಮಾಧ್ಯಮವನ್ನು ಉಳಿಸಿಕೊಳ್ಳುವುದೇ ಇಂದು ದೊಡ್ಡ ಸವಾಲಾಗಿದೆ” ಎಂದರು.

ಬಸವಕಲ್ಯಾಣದ ಉಪನ್ಯಾಸಕ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, “ಮಾಧ್ಯಮಗಳು ಲೋಕ ವಿಮರ್ಶೆಯ ಜತೆಗೆ ಸಾಂಸ್ಕೃತಿಕ ಸಂಶೋಧನೆಗೆ ಆಕರವಾಗಿವೆ. ನಮ್ಮ ದೇಶದ ಹಲವು ಚಳುವಳಿಗಳು ರೂಪುಗೊಂಡಿದ್ದೇ ಮುದ್ರಣ ಮಾಧ್ಯಮಗಳಿಂದ. ಜ್ಞಾನ ಮತ್ತು ಮಾಹಿತಿ ನೀಡುವ ಮಾಧ್ಯಮಗಳು ಮಾನವೀಯತೆಯ ತುಡಿತಗಳು ಮೈಗೂಡಿಸಿಕೊಂಡು ಕರ್ತವ್ಯ ನಿರ್ವಹಿಸಿದರೆ ಲೋಕದ ಬದಲಾವಣೆ ಸಾಧಿಸಬಹುದು” ಎಂದರು.

Advertisements

“ಸ್ವಾತಂತ್ರ ಚಳುವಳಿ, ಕರ್ನಾಟಕ ಏಕೀಕರಣ, ರೈತ ಚಳುವಳಿ ಹೀಗೆ ಹಲವು ಚಳುವಳಿಗಳು ರೂಪಿಸಿದ ಮುದ್ರಣ ಮಾಧ್ಯಮ ಕನ್ನಡ ಸಾಹಿತ್ಯಿಕ ಜಗತ್ತು ಅತ್ಯಂತ ಎಚ್ಚರದಿಂದ ಕಟ್ಟಿವೆ. ವಿದ್ಯುನ್ಮಾನ ಮಾಧ್ಯಮ ಕಾರ್ಪೊರೇಟಿಕರಣಗೊಂಡು ಉದ್ಯಮವಾದ ಮೇಲೆ ಬದ್ಧತೆಗಿಂತ, ಜನಪರ ಕಾಳಜಿಗಿಂತ, ಲಾಭದ ಲೆಕ್ಕಾಚಾರ ಹೆಚ್ಚಾಯಿತು. ಬಂಡವಾಳ ಹೂಡಿಕೆ, ಟಿಆರ್‌ಪಿ ಲಕ್ಷಣಗಳು ಮಾಧ್ಯಮಕ್ಕೆ ಅಂಟಿಕೊಂಡಂತೆ ಮಾಧಯಮಗಳು ಅಂತಃಕರಣ ಕಳೆದುಕೊಂಡಿತು” ಎಂದು ವಿವರಿಸಿದರು.

“ರೈತರ ಆತ್ಮಹತ್ಯೆ ತಡೆದು ಸ್ವಾವಲಂಬಿ ಬದುಕು ರೂಪಿಸುವ, ಸಂಪಾದಕೀಯ ವರ್ಗದಲ್ಲಿ ಮಹಿಳೆಯರಿಗೆ ಪ್ರಾಮುಖ್ಯತೆ ನೀಡುವ, ಹಳ್ಳಿಗಳ ಅಭಿವೃದ್ಧಿ ಸಾಧಿಸುವ, ಶಿಕ್ಷಣ ಆರೋಗ್ಯ ಕ್ಷೇತ್ರದಲ್ಲಿ ಬೆಳವಣ ಗೆ ಪಡೆಯುವ ಎಲ್ಲ ಸಾಧ್ಯತೆಗಳು ಮಾದ್ಯಮದಿಂದ ಆಗಬಹುದು. ಇಂಥಹ ದೃಷ್ಟಿ ಧೋರಣೆ ಮಾಧ್ಯಮ ನಿರಂತರ ಕಾಪಾಡಿಕೊಂಡು ಬರಲಿ” ಎಂದು ಅಭಿಪ್ರಾಯಪಟ್ಟರು.

ಈದಿನ.ಕಾಮ್ ಜಿಲ್ಲಾ ಸಂಯೋಜಕ ಬಾಲಾಜಿ ಕುಂಬಾರ ಮಾತನಾಡಿ, “ಜನಸಾಮಾನ್ಯರ ನೋವು, ಕಷ್ಟಗಳು, ಸಮಸ್ಯೆಗಳು ಸರಕಾರಕ್ಕೆ ತಲುಪಿಸಬೇಕಾದ ಜವಾಬ್ದಾರಿ ಮಾಧ್ಯಮಗಳದ್ದು. ಪತ್ರಿಕೋದ್ಯಮ ವ್ಯಾಪಾರವಲ್ಲ. ಅದು ಕಾಳಜಿಯ, ಕಳಕಳಿಯ ಕೇಂದ್ರವಾಗಿದೆ. ಮಾಧ್ಯಮಗಳು ಬಹುಜನರ ಮುಖವಾಗಬೇಕೆ ಹೊರತು ಕೆಲವು ಉದ್ಯಮಿಗಳ ಸ್ವತ್ತಾಗಬಾರದು. ಒಳ್ಳೆಯ ಪತ್ರಕರ್ತರಿಂದಲೇ ಸಾಮಾಜಿಕ ಬದಲಾವಣೆ ಸಾಧ್ಯ. ದೇಶದ ಎಲ್ಲ ಕ್ಷೇತ್ರಗಳ ಬದಲಾವಣೆಗೆ ಮಾಧ್ಯಮಗಳ ಕೆಲಸ ಮುಖ್ಯ. ಮಾಧ್ಯ್ಯಮ ದೇಶದ ಉರ್ಧ್ವಮುಖಿ ಬೆಳವಣಿಗೆಗೆ ಶ್ರಮಿಸಬೇಕು” ಎಂದರು.

ಕಸಾಪ ತಾಲೂಕು ಉಪಾಧ್ಯಕ್ಷ ಬಸವಕುಮಾರ ಕವಟೆ ಮಾತನಾಡಿ, “ಸಮಾಜಕ್ಕೆ, ಸರಕಾರಕ್ಕೆ ಎಚ್ಚರಿಸುವ ಕೆಲಸ ಮಾಧ್ಯಮಗಳಿಂದ ನಿರಂತರ ನಡೆಯಬೇಕು. ಮಾಧ್ಯಮಗಳಿಂದ ಜ್ಞಾನ ವೃದ್ಧಿಸುವ ಜತೆಗೆ ಸಂವಿಧಾನದ ನಾಲ್ಕನೇ ಅಂಗವಾಗಿ ಎಲ್ಲ ಕಾಲಕ್ಕೂ ಜನರನ್ನು ಸ್ಪಂದಿಸುತ್ತಿರಬೇಕು” ಎಂದರು.

ಕಾಲೇಜು ಪ್ರಾಚಾರ್ಯ ಪ್ರೊ. ಮಲ್ಲಿಕಾರ್ಜುನ ಕಾಂಬಳೆ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಸಿದ್ರಾಮಪ್ಪ ಬಣಗಾರ ನಿರೂಪಿಸಿ ಸ್ವಾಗತಿಸಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ | ಐಎಎಸ್, ಐಪಿಎಸ್ ಓದುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ; ಅ.ಮು ಲಕ್ಷ್ಮೀನಾರಾಯಣ ಭರವಸೆ

ಕೆಎಎಸ್, ಐಎಎಸ್ ಮತ್ತು ಐಪಿಎಸ್ ಓದಲು ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಉಚಿತ...

ಶಿವಮೊಗ್ಗ | 15 ವರ್ಷದ ಬಳಿಕ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಆರ್. ಮಾರುತಿ ವರ್ಗಾವಣೆ!

ಶಿವಮೊಗ್ಗ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಕಳೆದ 15...

ಸಿಂಧನೂರು | ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ – ವಿದ್ಯಾರ್ಥಿನಿಯರ ಪ್ರತಿಭಟನೆ

ಸಿಂಧನೂರಿನ ಕುಷ್ಟಗಿ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆಯಿಂದಾಗಿ...

ಶಿವಮೊಗ್ಗ | ಸೆ. 6ಕ್ಕೆ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ

ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ಉತ್ಸವದಲ್ಲಿ ಈ ಬಾರಿ ಏನೆಲ್ಲಾ...

Download Eedina App Android / iOS

X