ಬೀದರ್ | ಭಾರೀ ಮಳೆಯಿಂದ ರಸ್ತೆ, ಬೆಳೆ ಜಲಾವೃತ; ಜನಜೀವನ ಅಸ್ತವ್ಯಸ್ತ

Date:

Advertisements

ಜೂನ್ ಮೊದಲ ವಾರದಲ್ಲಿ ವಾಡಿಕೆಯಂತೆ ಬರಬೇಕಾದ ಮುಂಗಾರು ಮಳೆ ಜುಲೈ ಎರಡನೇ ವಾರದಲ್ಲಿ ಉಂಟಾಗಿದೆ. ಜೂನ್ ತಿಂಗಳು ಕಳೆದರೂ ಗರಿಷ್ಠ ಮಟ್ಟದಲ್ಲಿ ಬಿತ್ತನೆ ಕಾರ್ಯ ಮುಗಿಸದ ರೈತರು ಆಕಾಶದತ್ತ ಮುಖ ಮಾಡುವಂತಾಗಿತ್ತು. ಜೂನ್ ಕೊನೆಯ ವಾರದಲ್ಲಿ ಅಷ್ಟಿಷ್ಟು ಉದುರಿದ ತುಂತುರು ಮಳೆಯಿಂದ ಬಿತ್ತನೆ ಪೂರ್ಣಗೊಳಿಸಿದ ರೈತರು ಮತ್ತೆ ಮಳೆಗಾಗಿ ಇಣುಕಿ ನೋಡುವಂತಾಗಿತ್ತು. ಇದೀಗ ಜುಲೈ ಎರಡನೇ ವಾರದಲ್ಲಿ ಬೆಂಬಿಡದೆ ಸುರಿಯುತ್ತಿರುವ ತುಂತುರು ‌ಹಾಗೂ ಸಾಧಾರಣ ಮಳೆಯಿಂದ ರೈತರು ಇನ್ನೊಂದು ರೀತಿಯ ಸಂಕಷ್ಟಕ್ಕೆ ಸಿಲುಕಿದ್ದು, ಚಿಂತೆಗೀಡಾಗಿದ್ದಾರೆ.

ಮಳೆ ಆಶ್ರಿತ ಬೆಳೆಗಳಿಗೆ ಮಳೆ ಅತಿಯಾದರೆ ಅತಿವೃಷ್ಟಿ, ಮಳೆಯಾಗದಿದ್ದರೆ ಅನಾವೃಷ್ಟಿ. ಹೀಗಾಗಿ ತಾಪಮಾನಕ್ಕೆ ಹೊಂದಿಕೊಳ್ಳುವ ಬೆಳೆ ಸೋಯಾಬಿನ್ ಬೆಳೆಯೇ ಜಿಲ್ಲೆಯಾದ್ಯಂತ ಅಧಿಕವಾಗಿ ಬಿತ್ತನೆ ಮಾಡುತ್ತಿದ್ದಾರೆ. ಸೋಯಾ ಜೊತೆಗೆ ಬಿತ್ತನೆ ಮಾಡಿದ ತೊಗರಿ, ಉದ್ದು, ಹೆಸರು, ಹತ್ತಿ ಸೇರಿದಂತೆ ಇತರೆ ಮುಂಗಾರು ಬೆಳೆಗಳು ಅತಿಯಾದ ಮಳೆಯಿಂದಾಗಿ ಜಲಾವೃತವಾಗಿವೆ. ಮಳೆ ಕೈಕೊಟ್ಟ ಕಾರಣಕ್ಕೆ ದಿಕ್ಕೆಟ್ಟು ಹೋಗಿದ್ದ ರೈತರು ಇದೀಗ ಅತಿಯಾದ ಮಳೆಯಿಂದ ಇನ್ನಷ್ಟು ಹೈರಾಣಾಗಿ ಕಂಗಾಲಾಗಿದ್ದಾರೆ.

ಬೆಳೆ ಹಾನಿ, ಪರಿಹಾರಕ್ಕೆ ಆಗ್ರಹ:

Advertisements

ಕಮಲನಗರ ತಾಲೂಕಿನ ಬೆಳಕುಣಿ (ಚೌ) ಗ್ರಾಮದ ವೀರಪ್ಪ ಚಾಮಲೆ ಅವರು ಸಾವಿರಾರು ರೂಪಾಯಿ ವೆಚ್ಚ ಮಾಡಿ ಬಿತ್ತನೆ ಮುಗಿಸಿ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದರು. ಆದರೆ ಕಳೆದ ನಾಲ್ಕೈದು ದಿನಗಳಿಂದ ತಾಲೂಕಿನಲ್ಲಿ ಸುರಿದ ಮಳೆಯಿಂದಾಗಿ ಸಂಪೂರ್ಣ ಬೆಳೆ ನೀರುಪಾಲಾಗಿದೆ. ಸಾಲ ಸೋಲ ಮಾಡಿ ಬಿತ್ತನೆ ಮಾಡಿದ ನಮಗೆ ಬೆಳೆ ಕೈಕೊಟ್ಟಿದೆ. ಸರ್ಕಾರ ಈ ಬಗ್ಗೆ ಗಮನಹರಿಸಿ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಬೆಳೆ ಹಾನಿ 1
ಭಾರೀ ಮಳೆಗೆ ಹಾನಿಯಾದ ಬೆಳೆ

“ಕಾಡುಪ್ರಾಣಿಗಳ ಹಾವಳಿಗೆ ಬೇಸತ್ತು ರೈತರು ಬೆಳೆ ರಕ್ಷಣೆಗೆ ಹೊಲಗಳಿಗೆ ಸೋಲಾರ್ ಬೇಲಿ ಹಾಕಿಕೊಂಡಿದ್ದಾರೆ. ಆದರೆ ಸತತವಾಗಿ ಸುರಿದ ಮಳೆಯಿಂದ ಸೋಲಾರ್ ಬಳಕೆಗೆ ಬರಲಿಲ್ಲ. ಇದರಿಂದ ಕಾಡು ಹಂದಿಗಳು ಕಬ್ಬಿನ ಗದ್ದೆಗೆ ನುಗ್ಗಿ ಎರಡು ಎಕರೆಯಲ್ಲಿ ಬೆಳೆದ ಕಬ್ಬು ಅಲ್ಲಲ್ಲಿ ನೆಲಕ್ಕುರುಳಿದೆ. ಹಗಲಿರುಳು ಶ್ರಮಿಸಿ‌‌ ಬೆಳೆದ ಬೆಳೆ ಕೈಗೆ ಬಾರದಂತಾಗಿದೆ” ಎಂದು ಔರಾದ್ ತಾಲೂಕಿನ ರೈತ ಮಹಿಳೆ ಲಕ್ಷ್ಮಿಬಾಯಿ ಅವಲತ್ತುಕೊಂಡಿದ್ದಾರೆ.

ಕೆಸರು ಗದ್ದೆಯಂತಾದ ರಸ್ತೆಗಳು:

“ಜಿಟಿಜಿಟಿ ಮಳೆಗೆ ಜಿಲ್ಲೆಯ ಹಲವು ಗ್ರಾಮಗಳ ರಸ್ತೆಗಳು ಕೆಸರು ಗದ್ದೆಯಂತಾಗಿದ್ದು, ಜನರು ಓಡಾಡಲು ಪರದಾಡುವಂತಾಗಿದೆ. ಬೀದರ್ ನಗರದ ಹಳೆ ಬಸ್ ನಿಲ್ದಾಣ ಮುಂಭಾಗ, ನೌಬಾದ್ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿನ ಗುಂಡಿಗಳು ಅಪಾಯಕ್ಕೆ ಸಿಲುಕಿವೆ. ಈ ಹಿಂದೆ ಬೀದರ್ ಉತ್ಸವ ಸಂದರ್ಭದಲ್ಲಿ ತರಾತುರಿಯಲ್ಲಿ ರಸ್ತೆ ಕಾಮಗಾರಿ ಮುಗಿಸಿದ ರಸ್ತೆಗಳೇ ಮಳೆಗೆ ಕಿತ್ತು ಬರುತ್ತಿವೆ. ಇದೀಗ ಇಬ್ಬರು ಸಚಿವರು ಹೊಂದಿರುವ ಜಿಲ್ಲಾ ಕೇಂದ್ರದಲ್ಲಿ ಗುಂಡಿಗಳ ದರ್ಬಾರ್ ಹೆಚ್ಚಾಗಿದ್ದು ಜನಜೀವನ ಸಂಚಾರಕ್ಕೆ ಅಡ್ಡಿಯಾಗಿದೆ. ಕೂಡಲೇ ಜಿಲ್ಲಾಡಳಿತ ಗುಂಡಿ ಮುಚ್ಚಲು ಮುಂದಾಗಬೇಕು” ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಭಾಲ್ಕಿ
ಕೆಸರು ಗದ್ದೆಯಂತಾದ ರಸ್ತೆಗಳು

ಈ ಸುದ್ದಿ ಓದಿದ್ದೀರಾ? ಬೀದರ್ | ಕೃಷಿ ಡಿಪ್ಲೊಮಾ ಕೋರ್ಸ್ ರದ್ದು; ಪುನರಾರಂಭಕ್ಕೆ ಎಬಿವಿಪಿ ಆಗ್ರಹ

ಮನೆ ಗೋಡೆ ಕುಸಿತ; ಪರಿಹಾರಕ್ಕೆ ಆಗ್ರಹ

ಸತತವಾಗಿ ಸುರಿದ ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ಮನೆ ಗೋಡೆ ಕುಸಿದು ಬಿದ್ದ ಘಟನೆಗಳು ಜರುಗಿವೆ. ಔರಾದ್, ಹುಮನಾಬಾದ್, ಭಾಲ್ಕಿ, ಕಮಲನಗರ ತಾಲೂಕಿನ ಹಲವು ಗ್ರಾಮಗಳಲ್ಲಿ ಮನೆ ಗೋಡೆ ಕುಸಿದಿದ್ದು ಪರಿಹಾರ ನೀಡುವಂತೆ ಸಂತ್ರಸ್ತ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಜಲಾವೃತವಾದ ರಸ್ತೆ, ಸಂಚಾರ ಸ್ಥಗಿತ

ಕರ್ನಾಟಕ ಅಲ್ಲದೆ ಪಕ್ಕದ ತೆಲಂಗಾಣ ಹಾಗೂ ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದಾಗಿ ಗಡಿ ಭಾಗದ ಗ್ರಾಮಗಳ ರಸ್ತೆಗಳು ಜಲಾವೃತಗೊಂಡಿದೆ. ತೆಲಂಗಾಣಾ ರಾಜ್ಯದ ಕೊತ್ತೂರ್ ಡ್ಯಾಮ್ ನೀರಿನ ಮಟ್ಟ ಹೆಚ್ಚಾಗಿದ್ದರಿಂದ ಹೆಚ್ಚುವರಿ ನೀರು ಸಿಂದೋಲ್ ಗ್ರಾಮದ ಹಳ್ಳದ ಮೂಲಕ ಹರಿಯುತ್ತಿದ್ದು, ನೀರಿನ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಸಿಂದೊಲ್ ಬ್ರಿಡ್ಜ್ ಮೇಲಿಂದ ಹಾದು ಹೋಗುವ ಮನ್ನಳ್ಳಿ- ಭಂಗೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು. ಕಮಲನಗರ ತಾಲೂಕಿನ ಖಣಗಾಂವ- ಔರಾದ, ಚಿಟಗುಪ್ಪ ತಾಲೂಕಿನ ಉಡುಮನಳ್ಳಿ – ಕರಕನಳ್ಳಿ ಮಾರ್ಗದ ಸಂಪರ್ಕ ರಸ್ತೆಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X