ಬೀದರ ವಿಶ್ವವಿದ್ಯಾಲಯವು 19 ಸ್ನಾತಕೋತ್ತರ (ಪಿಜಿ) ಕೋರ್ಸ್‌ಗಳ ಪ್ರಥಮ ಸೆಮಿಸ್ಟರ್ ಫಲಿತಾಂಶವನ್ನು ಅ.4ರಂದು ಘೋಷಿಸಿದೆ.
ಬೀದರ್ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಿ.ಎಸ್.ಬಿರಾದಾರ್ ಅವರು ಶುಕ್ರವಾರ ಸಂಜೆ 4 ಗಂಟೆಗೆ ಫಲಿತಾಂಶ ಘೋಷಿಸಿ ಮಾತನಾಡಿ, ʼಸ್ನಾತಕೋತ್ತರ ಪ್ರಥಮ ಸೆಮಿಸ್ಟರ್‌ನ ಚೊಚ್ಚಲ ಫಲಿತಾಂಶ ಘೋಷಿಸುತ್ತಿರುವುದಕ್ಕೆ ಅತ್ಯಂತ ಸಂತೋಷವಾಗಿದೆ. ಇದಕ್ಕಾಗಿ ಶ್ರಮಿಸಿದ ವಿಶ್ವವಿದ್ಯಾಲಯದ ಸಮಸ್ತ ಅಧ್ಯಾಪಕ, ಅಧ್ಯಾಪಕೇತರ ಸಿಬ್ಬಂದಿಯನ್ನು ಅಭಿನಂದಿಸುತ್ತೇನೆʼ ಎಂದರು.
ʼಅತ್ಯಂತ ಕಡಿಮೆ ಅವಧಿಯಲ್ಲಿ ಫಲಿತಾಂಶ ಪ್ರಕಟಿಸಲು ಎಲ್ಲರೂ ಅವಿರತವಾಗಿ ಶ್ರಮಿಸಿದ್ದಾರೆ. ಈ ಭಾಗದ ನೂತನ ವಿಶ್ವವಿದ್ಯಾಲಯದ ಶ್ರೇಯಸ್ಸಿನಲ್ಲಿ ಹೀಗೆಯೇ ಎಲ್ಲರ ಸಹಕಾರವನ್ನು ವಿಶ್ವವಿದ್ಯಾಲಯ ಬಯಸುತ್ತದೆʼ ಎಂದರು.
ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ಪರಮೇಶ್ವರ ನಾಯ್ಕ್ ಮಾತನಾಡಿ, ʼ19 ಸ್ನಾತಕೋತ್ತರ ಕೋರ್ಸ್‌ಗಳ ಫಲಿತಾಂಶವನ್ನು ಏಕಕಾಲಕ್ಕೆ ಪ್ರಕಟಿಸಿ ವಿಶ್ವವಿದ್ಯಾಲಯ ತನ್ನ ಕ್ರಿಯಾಶೀಲತೆ ತೋರಿದೆ. ಈ ಫಲಿತಾಂಶವು ವಿದ್ಯಾರ್ಥಿಗಳಿಗೆ ಹಾಗೂ ಈ ಭಾಗದ ಸರ್ವರಿಗೂ ಸಂತಸ ತಂದಿದೆʼ ಎಂದು ಸಿಹಿ ಹಂಚಿ ಸಂಭ್ರಮಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಸ್ಮಶಾನದ ಬಳಿ ಆಸ್ಪತ್ರೆ : ಮಗುವಿಗೆ ಕೇಡಾಗುತ್ತೆ ಎಂಬ ಕಾರಣಕ್ಕೆ ಹೆರಿಗೆಗೆ ಬಾರದ ಗರ್ಭಿಣಿಯರು!
ಬೀದರ ವಿಶ್ವವಿದ್ಯಾಲಯದ ಕುಲಸಚಿವ (ಆಡಳಿತ) ಡಾ.ರವೀಂದ್ರನಾಥ.ವಿ.ಗಬಾಡಿ, ಅಧ್ಯಾಪಕರಾದ ಡಾ.ಚನ್ನಕೇಶವ ಮೂರ್ತಿ, ಡಾ.ನಾಗೇಶ ಸಾವಳೆ, ಶ್ರೀಪವನ್ ಕಾಂಬಳೆ, ಡಾ.ರಾಮಚಂದ್ರ ಗಣಾಪೂರ, ಶಿವರಾಜ ಪಾಟೀಲ್ ಹಾಗೂ ಸಿಬ್ಬಂದಿ ಹಾಜರಿದ್ದರು.