ಬೀದರ್ | ಪರುಷ ಕಟ್ಟೆ ಮೇಲೆ ನಂದಿ ಮೂರ್ತಿ ಕೂರಿಸಲು ಬಿಡೆವು: ಬಸವರಾಜ ಧನ್ನೂರ

Date:

Advertisements
  • ಬೀದರ್ ನಂದಿಗೂ ಪರುಷ ಕಟ್ಟೆಗೂ ಸಂಬಂಧವೇ ಇಲ್ಲ
  • ಪರುಷ ಕಟ್ಟೆ ಮೇಲೆ ನಂದಿ ಮರು ಸ್ಥಾಪಿನೆ ಭರವಸೆ ಸರಿಯಲ್ಲ

ಬೀದರ್‌ ಜಿಲ್ಲೆಯ ಬಸವಕಲ್ಯಾಣದ ಪರುಷ ಕಟ್ಟೆ ಮೇಲೆ ಮತ್ತೆ ನಂದಿ ಮೂರ್ತಿ ಕೂರಿಸಲು ಬಿಡುವುದಿಲ್ಲ ಎಂದು ‘ರಾಷ್ಟ್ರೀಯ ಬಸವ ದಳ’ದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ಹೇಳಿದ್ದಾರೆ.

“ನಂದಿಗೂ ಪರುಷ ಕಟ್ಟೆಗೂ ಸಂಬಂಧವೇ ಇಲ್ಲ. ಹೀಗಾಗಿ, ಪರುಷ ಕಟ್ಟೆ ಮೇಲೆ ಬಸವಣ್ಣನವರ ಮೂರ್ತಿಯನ್ನೇ ಪ್ರತಿಷ್ಠಾಪನೆ ಮಾಡಬೇಕು” ಎಂದು ಆಗ್ರಹಿಸಿದ್ದಾರೆ.

“ಕೆಲವರ ಒತ್ತಾಯಕ್ಕೆ ಮಣಿದು ಅಧಿಕಾರಿಗಳು ಜೀರ್ಣೋದ್ಧಾರ ಪ್ರಯುಕ್ತ ತೆರವುಗೊಳಿಸಲಾದ ನಂದಿ ಮೂರ್ತಿಯನ್ನು ಪರುಷ ಕಟ್ಟೆ ಮೇಲೆ ಮರು ಸ್ಥಾಪಿಸುವ ಭರವಸೆ ಕೊಟ್ಟಿರುವುದು ಸರಿಯಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisements

“ಬಿಜ್ಜಳ ರಾಜನ ಆಸ್ಥಾನದಲ್ಲಿ ಪ್ರಧಾನಿಯಾಗಿದ್ದ ಬಸವಣ್ಣನವರು ಆಸ್ಥಾನಕ್ಕೆ ಹೋಗುವ ಮುನ್ನ ಪರುಷ ಕಟ್ಟೆ ಮೇಲೆ ಕೂರುತ್ತಿದ್ದರು. ಜನರ ಸಮಸ್ಯೆ ಆಲಿಸಿ, ಅದಕ್ಕೆ ಪರಿಹಾರ ಕಲ್ಪಿಸುತ್ತಿದ್ದರು. ಹೀಗಾಗಿ ಆ ಸ್ಥಳವನ್ನು ಜನರು ಪರುಷ ಕಟ್ಟೆಯೆಂದು ಕರೆದಿದ್ದಾರೆ” ಎಂದು ಹೇಳಿದ್ದಾರೆ.

ಬೀದರ್‌

“‌ಬೀದರ್‌ ಪರುಷ ಕಟ್ಟೆ ಮೇಲೆ ಮತ್ತೆ ನಂದಿ ಮೂರ್ತಿ ಪ್ರತಿಷ್ಠಾಪಿಸಿದರೆ ಬಸವಣ್ಣನವರಿಗೆ ಅವಮಾನ ಮಾಡಿದಂತಾಗುತ್ತದೆ. ಜತೆಗೆ, ಸ್ಪಷ್ಟವಾಗಿರುವ ಇತಿಹಾಸದ ಬಗ್ಗೆ ಗೊಂದಲ ಮೂಡಿಸಿದಂತೆಯೂ ಆಗುತ್ತದೆ. ಬಸವಣ್ಣನವರು ನಾಲ್ಕು ಕಾಲಿನ ಎತ್ತಲ್ಲ. ಕೆಳಗೆ ಬಿದ್ದವರು, ತುಳಿತಕ್ಕೆ ಒಳಗಾದವರು, ಅಸಹಾಯಕರು, ಧ್ವನಿ ಇಲ್ಲದವರು, ಶೋಷಿತರನ್ನು ಮೇಲಕ್ಕೆ ಎತ್ತಿ ಸಮಾಜದ ಮುಖ್ಯ ವಾಹಿನಿಗೆ ತಂದ ಮಹಾ ಪ್ರವಾದಿ. ಸಮ ಸಮಾಜದ ನಿರ್ಮಾಪಕ, ದಲಿತೋದ್ಧಾರಕ, ಚಾರಿತ್ರಿಕ- ಐತಿಹಾಸಿಕ ಯುಗಪುರುಷ. ಅವರಿಗೂ- ನಂದಿಗೂ ಥಳಕು ಹಾಕುವುದು ಸಲ್ಲದು” ಎಂದು ತಿಳಿದ್ದಾರೆ.

“12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಮಾನವೀಯತೆಗಾಗಿ ಮಹಾಕ್ರಾಂತಿ ನಡೆದಿತ್ತು. ಬಸವಣ್ಣನವರು ಜಗತ್ತಿಗೆ ಬೆಳಕು ನೀಡುವ ವಚನ ಸಾಹಿತ್ಯ ನೀಡಿದರು. ಪ್ರಜಾಪ್ರಭುತ್ವದ ಮೌಲ್ಯ ಕೊಟ್ಟರು. ಮೊಟ್ಟದ ಮೊದಲ ಬಾರಿಗೆ ಮಾನವ ಹಕ್ಕುಗಳ ಬಗ್ಗೆ ಧ್ವನಿ ಎತ್ತಿದರು. ವಿಶ್ವದ ಮೊದಲ ಸಂಸತ್ ಎಂದೇ ಕರೆಯಲಾಗುವ ಅನುಭವ ಮಂಟಪ ನಿರ್ಮಿಸಿದರು” ಎಂದು ಶ್ಲಾಘಿಸಿದ್ದಾರೆ.

“ಪರುಷ ಕಟ್ಟೆಯ ಜೀರ್ಣೋದ್ಧಾರ ನಡೆಯುತ್ತಿರುವುದು ಸಂತಸದ ಸಂಗತಿ. ಚಾರಿತ್ರಿಕ ಮಹತ್ವ ಹೊಂದಿರುವ ಕಾರಣ ಅದಕ್ಕೆ ಸುಂದರ ಸ್ವರೂಪ ಕೊಡಬೇಕಾಗಿದೆ. ಆದರೆ, ಇಲ್ಲಿ ಹಿಂದೆ ಆದ ತಪ್ಪು ಮತ್ತೆ ಮರುಕಳಿಸಬಾರದು. ಮುಂದಿನ ಪೀಳಿಗೆಗೆ ಸರಿಯಾದ ಇತಿಹಾಸ ತಿಳಿಸಲು ಜೀರ್ಣೋದ್ಧಾರದ ಬಳಿಕ ಪರುಷ ಕಟ್ಟೆಯ ಮೇಲೆ ಬಸವಣ್ಣನವರು ಕುಳಿತ ಭಂಗಿಯ ಕಂಚಿನ, ಇಲ್ಲವೇ ಅಮೃತ ಶಿಲೆಯ ಮೂರ್ತಿಯನ್ನೇ ಪ್ರತಿಷ್ಠಾಪಿಸಬೇಕು” ಎಂದು ಒತ್ತಾಯಿಸಿದ್ದಾರೆ.

ಬಸವೇಶ್ವರ ಮೂರ್ತಿಗೆ 5 ಲಕ್ಷ ರೂ. ದೇಣಿಗೆ ನೀಡಲು ಸಿದ್ಧ

ಬಸವಕಲ್ಯಾಣದ ಪರುಷ ಕಟ್ಟೆ ಮೇಲೆ ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆಗೆ ರೂ. 5 ಲಕ್ಷ ದೇಣಿಗೆ ಕೊಡಲು ಸಿದ್ಧ ಎಂದು ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಹಾಸನ | ಮೂಲ ಸೌಕರ್ಯಗಳಿಗೆ ಆಗ್ರಹ; ಚುನಾವಣೆ ಬಹಿಷ್ಕಾರಕ್ಕೆ ಗ್ರಾಮಸ್ಥರ ನಿರ್ಧಾರ

ಇಂಗ್ಲೆಂಡ್, ಅಮೆರಿಕಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಮಹಾ ಮಾನವತಾವಾದಿ ಬಸವಣ್ಣನವರ ಮೂರ್ತಿಗಳು ಸ್ಥಾಪನೆಯಾಗುತ್ತಿವೆ. ದೇಶದ ಸಂಸತ್ತು, ವಿಧಾನಸೌಧದ ಮುಂಭಾಗದಲ್ಲೂ ಸ್ಥಾಪನೆಯಾಗಿವೆ. ಹೀಗಾಗಿ ಅವರ ಕಾರ್ಯ ಕ್ಷೇತ್ರದಲ್ಲಿ ನಿತ್ಯ ಜನರ ಅಹವಾಲು ಆಲಿಸುತ್ತಿದ್ದ ಪರುಷ ಕಟ್ಟೆ ಮೇಲೆ ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆಯಾಗಬೇಕು ಎನ್ನುವುದು ಬಸವ ಭಕ್ತರ ಮಹದಾಸೆಯಾಗಿದೆ” ಎಂದು ಅವರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X