ಔರಾದ್‌ | ಪರಿಸರ ಜಾಗೃತಿ ಸಾಹಿತ್ಯ ರಚನೆಯಾಗಲಿ : ಜಗನ್ನಾಥ ಮೂಲಗೆ

Date:

ಪ್ರಸ್ತುತ ನಾವು ಎದುರಿಸುತ್ತಿರುವ ಬಹುಮುಖ್ಯ ಸವಾಲು ಪರಿಸರ ಸಂರಕ್ಷಣೆ ಮತ್ತು ಜಾಗೃತಿ ಕುರಿತು ಹೆಚ್ಚಿನ ಸಾಹಿತ್ಯ ರಚನೆಯಾಗಬೇಕಾಗಿದೆ ಎಂದು ಸಂಸ್ಕೃತಿ ಚಿಂತಕ ಜಗನ್ನಾಥ ಮೂಲಗೆ ಅಭಿಪ್ರಾಯಪಟ್ಟರು.

- Advertisement -

ಔರಾದ ಪಟ್ಟಣದ ಕನ್ನಡ ಭವನದಲ್ಲಿ ಶನಿವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಸಾಪ ಹಮ್ಮಿಕೊಂಡ ‘ಕನ್ನಡ ಸಾಹಿತ್ಯ-ಪರಿಸರ ಪ್ರಜ್ಞೆ’ ವಿಚಾರ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, “ನಾವು ವಾಸಿಸುವ ಜನವಸತಿ ಪ್ರದೇಶದ ವಾತಾವರಣ, ಪರಿಸರ, ಹವಾಮಾನದ ಕುರಿತು ಅಕ್ಷರಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಸಾಹಿತಿಗಳು, ಬುದ್ದಿಜೀವಿಗಳು, ಸಮಾಜ ಸೇವಕರು ಮಾಡಬೇಕಿದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಯೂರೋಪ್‌ | ಇಂಧನ ಬೆಲೆಯೇರಿಕೆ–ಬದುಕು ದುರ್ಭರ: ಜನಾಕ್ರೋಶಕ್ಕೆ ನಡುಗುತ್ತಿವೆ...

ಇಂಧನ ಬೆಲೆ ಏರಿಕೆ, ಕೈಗೆಟುಕದ ಮನೆಬಾಡಿಗೆ, ಕಡಿಮೆ ವೇತನ, ನಿರುದ್ಯೋಗದ ಆತಂಕ ಹಾಗೂ ಜನಕಲ್ಯಾಣ ಯೋಜನೆಗಳಿಗೆ ಅನುದಾನ ಕಡಿತದ ವಿರುದ್ಧ ಯೂರೋಪಿನ ಹಲವು ದೇಶಗಳಲ್ಲಿ ಜನಾಕ್ರೋಶ ಭುಗಿಲೆದ್ದಿದೆ. ಫ್ರಾನ್ಸ್‌ನಿಂದ ಇಟಲಿ, ಬೆಲ್ಜಿಯಂ, ಸ್ಪೇನ್...

ಬೆಳಗಾವಿ | ಅಲೆಮಾರಿಗಳಿಗೆ ಆಧಾರ್ ಕಾರ್ಡ್ ಸಮಸ್ಯೆ; ʼಈದಿನʼದ...

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಸುಮಾರು 25ರಿಂದ 30 ವರ್ಷಗಳಿಂದ ವಾಸಿಸುತ್ತಿರುವ ಅಲೆಮಾರಿ ಸಮುದಾಯದವರ ಬದುಕಿನ ಕಥೆ ಕೇಳಿದರೆ ಎಂಥವರಿಗೂ ಕನಿಕರ ಬರುತ್ತದೆ. ಆಧಾರ್ ಕಾರ್ಡ್, ಪಡಿತರ ಚೀಟಿ ಸೇರಿದಂತೆ ಮೂಲಭೂತ ಸೌಲಭ್ಯಗಳಿಲ್ಲದೆ...

ಶಿವಮೊಗ್ಗ | ಜಿ.ಪಂ., ತಾ.ಪಂ. ಚುನಾವಣೆ: ಗ್ರಾಮೀಣ ರಾಜಕೀಯದಲ್ಲಿ...

ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಜಿಲ್ಲಾ ಪಂಚಾಯತಿ (ಜಿ.ಪಂ.) ಹಾಗೂ ತಾಲೂಕು ಪಂಚಾಯತಿ (ತಾ.ಪಂ.) ಚುನಾವಣೆಗಳ ಕುರಿತು ರಾಜಕೀಯ ಚರ್ಚೆಗಳು ಮತ್ತು ನಿರೀಕ್ಷೆಗಳು ಹೆಚ್ಚುತ್ತಿವೆ. ದೀರ್ಘಕಾಲದಿಂದ ಚುನಾಯಿತ ಪ್ರತಿನಿಧಿಗಳಿಲ್ಲದೆ ಆಡಳಿತ ನಡೆಯುತ್ತಿರುವ ಹಿನ್ನೆಲೆಯಲ್ಲಿ,...

ಸಂಪನ್ಮೂಲ ಶಿಕ್ಷಕ ಪ್ರದೀಪ ಗುಬನೂರೆ ಮಾತನಾಡಿ, “ನಾವು ಹೆಚ್ಚು ಆಲೋಚಿಸಬೇಕಿರುವುದು ಪರಿಸರ ಸಂರಕ್ಷಣೆ ಬಗ್ಗೆಯೇ. ಹಾಗಾಗಿ ಸಾಹಿತ್ಯ ಕ್ಷೇತ್ರದ ಸಾಧಕರು, ಚಿಂತಕರು ಗಾಳಿ, ಬೆಳಕು, ನೀರಿನ ಮಿತವ್ಯಯ ಇಂತಹ ವಿಷಯಗಳಿಗೆ ಒತ್ತು ನೀಡಿ ಅದಕ್ಕೆ ಪೂರಕವಾದ ಸಾಹಿತ್ಯ ರಚಿಸಲು ಮುಂದಾಗಬೇಕು” ಎಂದರು.

WhatsApp Image 2026 06 07 at 3.56.20 PM

ಕಸಾಪ ಅಧ್ಯಕ್ಷ ಬಿ.ಎಂ.ಅಮರವಾಡಿ ಮಾತನಾಡಿ, “ಕನ್ನಡ ಸಾಹಿತ್ಯದಲ್ಲಿ ಕುವೆಂಪು, ಪೂರ್ಣಚಂದ್ರ ತೇಜಸ್ವಿ, ಬೇಂದ್ರೆ ಸೇರಿದಂತೆ ಅನೇಕರು ಪರಿಸರ ಕಾಳಜಿ, ಸಂರಕ್ಷಣೆ ಹಾಗೂ ಮಾನವ ಜೀವನದ ಮೇಲೆ ಪರಿಸರದ ಪ್ರಭಾವ, ಪರಿಣಾಮ, ವೈಚಾರಿಕತೆ ಮತ್ತು ಸೌಂದರ್ಯದ ಕುರಿತು ಬರೆದಿದ್ದಾರೆ. ಜನಪದ ಗಾಯಕರು, ವಚನಕಾರರು, ದಾಸರು, ಆಧುನಿಕ ಕವಿ ಲೇಖಕರು ಪರಿಸರ ಬಗ್ಗೆ ಕೃಷಿ ಮಾಡಿರುವುದು ನಮಗೆಲ್ಲ ದಾರಿದೀಪ” ಎಂದರು.

ಶಿಕ್ಷಕ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಂಡರಿ ಆಡೆ, ಔರಾದ್ ತಾಲ್ಲೂಕು ಅಧ್ಯಕ್ಷ ಗಜಾನನ ಮಳ್ಳಾ ಹಾಗೂ ಕಮಲನಗರ ತಾಲ್ಲೂಕು ಅಧ್ಯಕ್ಷ ವಿಜಯಕುಮಾರ ನುದನೂರೆ ಮಾತನಾಡಿದರು.

ಇದನ್ನೂ ಓದಿ : ಅಡುಗೆ ಅನಿಲ ದರ ₹29 ಹೆಚ್ಚಳ : ಇದೇನಾ ಅಚ್ಛೇದಿನ್ ಎಂದು ಪ್ರಶ್ನಿಸಿದ ಸಚಿವ ಈಶ್ವರ ಖಂಡ್ರೆ

ಈ ಸಂದರ್ಭದಲ್ಲಿ ಕಸಾಪ ಗೌರವ ಕಾರ್ಯದರ್ಶಿ ಜಗನ್ನಾಥ ದೇಶಮುಖ, ಮಲ್ಲಿಕಾರ್ಜುನ ಟಂಕಸಾಲೆ, ಗುರುನಾಥ ದೇಶಮುಖ, ಗೋವಿಂದ ಪಾಟೀಲ್, ವಿರೇಶ ಅಲಮಾಜೆ, ಜಗನ್ನಾಥ ಬಿರಾದಾರ, ಅಮರಸ್ವಾಮಿ ಸ್ಥಾವರಮಠ, ಆನಂದ ದ್ಯಾಡೆ, ಅಮೃತರಾವ ಬಿರಾದಾರ, ನಾಗನಾಥ ಅಣದೂರೆ, ಧನರಾಜ ಮಾನೆ, ಮಾರುತಿ ಚವ್ಹಾಣ ಸೇರಿದಂತೆ ಇನ್ನಿತರರಿದ್ದರು.

ಶಿಕ್ಷಕ ಸಂಘದ ಪ್ರತಿನಿಧಿಗಳಿಗೆ ಸಮ್ಮಾನ

ಇತ್ತೀಚೆಗೆ ಪ್ರಾಥಮಿಕ ಶಾಲಾ ಶಿಕ್ಷಕ ಸಂಘಕ್ಕೆ ಆಯ್ಕೆಯಾದ ಪಂಡರಿ ಆಡೆ, ಗಜಾನನ ಮಳ್ಳಾ, ವಿಜಯಕುಮಾರ ನುದನೂರೆ, ಮನೋಹರ ಅಂಬಾಟೆ, ಕಾಶಪ್ಪ ಮೇಗೂರೆ, ಪ್ರಭು ಬಾಳೂರೆ, ಶಿವಾನಂದ ಗಾದಗೆ, ಶರಣಪ್ಪ ಜಟಗೊಂಡ್, ವಿಠ್ಠಲ ದೇವಕತೆ, ವನಮಾಲಾ ಮಾರುತಿ ಚವ್ಹಾಣ, ಸಂಗೀತಾ ಮಾರುತಿ ರೆಡ್ಡಿ, ಸಮೀನಾ ನಯೀಮ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ವಿದೇಶಿ ಪ್ರವಾಸದ ದಾಖಲೆ ಬಹಿರಂಗಕ್ಕೆ ದೆಹಲಿ ಹೈಕೋರ್ಟ್ ನಕಾರ

ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ...

ಯೂರೋಪ್‌ | ಇಂಧನ ಬೆಲೆಯೇರಿಕೆ–ಬದುಕು ದುರ್ಭರ: ಜನಾಕ್ರೋಶಕ್ಕೆ ನಡುಗುತ್ತಿವೆ ಸರ್ಕಾರಗಳು!

ಇಂಧನ ಬೆಲೆ ಏರಿಕೆ, ಕೈಗೆಟುಕದ ಮನೆಬಾಡಿಗೆ, ಕಡಿಮೆ ವೇತನ, ನಿರುದ್ಯೋಗದ ಆತಂಕ...

ಈ ದಿನ ಸಂಪಾದಕೀಯ | ʼಕೊಂದು ಉಳಿಸಿಕೊಳ್ಳಬೇಕಾದ ಧರ್ಮ ಯಾವುದಾದರೂ ಇದ್ಯಾ ಈ ಪ್ರಪಂಚದಲ್ಲಿ?ʼ

ಸೌದಿ ಅರೇಬಿಯಾದ ಮರಣದಂಡನೆ ಪ್ರಕರಣದಿಂದ ಚಿಂತನೆಗೆ ಹಚ್ಚುವ ಸಂಗತಿ ಎಂದರೆ, ಧಾರ್ಮಿಕ...

ಶಿವಮೊಗ್ಗ ಜಂಬೂ ಸವಾರಿ ವೇಳೆ ಭಾರೀ ಅನಾಹುತ: ಅಂಬಾರಿ ಹೊತ್ತು ಅಡ್ಡಾದಿಡ್ಡಿ ಓಡಿದ ಆನೆ

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಅದ್ಧೂರಿ ಚಾಲನೆ ಸಿಕ್ಕು ಅಲ್ಲಿನ...