ಬೀದರ್‌ | ಜಗತ್ತಿನ ಮೊದಲ ಮಹಿಳಾ ತತ್ವಜ್ಞಾನಿ ಮಹಾದೇವಿಯಕ್ಕ: ಸಂತೋಷ ನಾಗರಾಳೆ

Date:

ಅಕ್ಕಮಹಾದೇವಿ ಮಹಿಳಾ ಸ್ವಾತಂತ್ರ್ಯ, ಸ್ವಾಭಿಮಾನ, ಸದಾಚಾರ ಹಾಗೂ ಸದ್ಭಕ್ತಿಯಂತಹ ಮಹೋನ್ನತ ಮೌಲ್ಯಗಳಿಗೆ ಪ್ರತಿನಿಧಿಯಾಗಿದ್ದಾರೆ ಎಂದು ಬೆಂಗಳೂರು ಲೋಕಾಯುಕ್ತ ನ್ಯಾಯವಾದಿ ಸಂತೋಷ ನಾಗರಾಳೆ ಹೇಳಿದರು.

- Advertisement -

ಬಸವಕಲ್ಯಾಣದ ಹರಳಯ್ಯನವರ ಗವಿಯಲ್ಲಿ ಅಂತರರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಲಿಂಗವಂತ ಹರಳಯ್ಯ ಪೀಠದ ವತಿಯಿಂದ ನಡೆಯುತ್ತಿರುವ ಶರಣ ವಿಜಯೋತ್ಸವ ನಾಡಹಬ್ಬ ಮತ್ತು ಹುತಾತ್ಮ ದಿನಾಚರಣೆಯ 7ನೇ ದಿನದ ಕಾರ್ಯಕ್ರಮದಲ್ಲಿ ‘ಜಗತ್ತಿನ ಮೊದಲ ಮಹಿಳಾ ತತ್ವಜ್ಞಾನಿ ಮಹಾದೇವಿಯಕ್ಕ’ ವಿಷಯದ ಗೋಷ್ಠಿಯಲ್ಲಿ ಅವರು ಅನುಭಾವ ನೀಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಿಯಾಂಡ್ ಬೆಂಗಳೂರು: ಡಿಜಿಟಲ್ ಆರ್ಥಿಕತೆಯಲ್ಲಿ ರಾಯಚೂರಿಗೆ ಸಿಗುವುದೇ ಪ್ರತ್ಯೇಕ...

ಕರ್ನಾಟಕದ ಅಭಿವೃದ್ಧಿ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ರಾಜ್ಯದ ವಿವಿಧ ನಗರಗಳಿಗೂ ತಲುಪಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ‘Beyond Bengaluru’ ಯೋಜನೆಯನ್ನು ಜಾರಿಗೊಳಿಸಿದೆ. ಐಟಿ, ಐಟಿಇಎಸ್,...

ರಾಯಚೂರು | ಸ್ಥಳೀಯ ಸಂಸ್ಥೆ ಚುನಾವಣೆ: ಆಕಾಂಕ್ಷಿಗಳ ಲೆಕ್ಕಾಚಾರ...

ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ ಪ್ರಕಟವಾಗುತ್ತಿದ್ದಂತೆ ರಾಯಚೂರು ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮೀಸಲಾತಿ ಬದಲಾವಣೆಯಿಂದ ಕೆಲವರ ಸ್ಪರ್ಧೆಯ ಲೆಕ್ಕಾಚಾರ ತಲೆಕೆಳಗಾಗಿದ್ದರೆ, ಮತ್ತೊಂದೆಡೆ...

ಹೊಸ ಓದು | ನಟರಾಜ್ ಹುಳಿಯಾರ್ ಅವರ ‘ಡಾಕ್ಟರ್...

ಇತ್ತೀಚೆಗೆ ಲೋಕಾರ್ಪಣೆಗೊಂಡ ನಟರಾಜ್ ಹುಳಿಯಾರ್ ಅವರ 'ಡಾಕ್ಟರ್ ಸಾಹೇಬ್- ರಾಮಮನೋಹರ ಲೋಹಿಯಾ ಜೀವನಯಾನ' ಕೃತಿಯಿಂದ ಆಯ್ದ 'ಲೋಹಿಯಾ ಮತ್ತು ಕರ್ನಾಟಕ' ಅಧ್ಯಾಯ, ಭಾನುವಾರದ ವಿರಾಮದ ಓದಿಗಾಗಿ... 'ಮಾರ್ಕ್ಸ್, ಗಾಂಧಿ ಅಂಡ್ ಸೋಷಲಿಸಂ' ಪುಸ್ತಕಕ್ಕೆ ಮುನ್ನುಡಿ...

ಅಕ್ಕಮಹಾದೇವಿ ಅಸಾಧ್ಯವನ್ನು ಸಾಧ್ಯವಾಗಿಸಿ ತೋರಿಸಿದ ಜಗತ್ತಿನ ಮೊದಲ ಮಹಿಳಾವಾದಿ ಚಿಂತಕಿ, ಪ್ರಗತಿಪರ ವಿಚಾರವಾದಿಯಾಗಿದ್ದಾರೆ. ಜೀವನದಲ್ಲಿ ಸ್ತುತಿ-ನಿಂದನೆಗಳು ಎದುರಾದಾಗ ಕೋಪಗೊಳ್ಳದೆ ಸಮಾಧಾನದಿಂದ ಇರಬೇಕು. ‘ನಾನು, ನನ್ನದು’ ಎಂಬ ಅಹಂಕಾರವನ್ನು ತೊರೆದಾಗ ಮಾತ್ರ ಉತ್ತಮ ಮನುಷ್ಯರಾಗಲು ಸಾಧ್ಯ. ಭಗವಂತನನ್ನು ಅರಿಯುವ ಮಾರ್ಗವನ್ನು ಅಕ್ಕ ತಮ್ಮ ವಚನಗಳ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.

WhatsApp Image 2026 10 10 at 7.46.08 PM 14
ಜಾಹೀರಾತು

ಪ್ರತಿಯೊಬ್ಬರೊಂದಿಗೆ ಬೆರೆತು, ಸಮರ್ಪಣಾ ಮನೋಭಾವದಿಂದ ಬದುಕಿದಾಗ ನಿಜವಾದ ಪೂಜೆಯ ಅರ್ಥ ತಿಳಿಯುತ್ತದೆ. ಅಕ್ಕಮಹಾದೇವಿಯನ್ನು ಅರ್ಥಮಾಡಿಕೊಳ್ಳಬೇಕಾದರೆ ಮೊದಲು ನಮ್ಮನ್ನು ನಾವು ಅರಿತುಕೊಳ್ಳಬೇಕು. ಅರಿವು ಎಂದರೆ ಆನಂದ, ನಿರಹಂಕಾರ ಮತ್ತು ಜ್ಯೋತಿ. ನಿಜವಾದ ಜ್ಞಾನವೇ ದೇವರಿಗೆ ಸಲ್ಲಿಸುವ ಆರತಿ. ಅಕ್ಕನ ವಚನಗಳನ್ನು ಓದಿ, ಅವುಗಳ ಅರ್ಥವನ್ನು ಜೀವನದಲ್ಲಿ ಅಳವಡಿಸಿಕೊಂಡು ತೃಪ್ತಿಯ ಬದುಕು ಸಾಗಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಬಸವಕಲ್ಯಾಣದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಯಶ್ವಂತ ತವಾರೆ ಮಾತನಾಡಿ, “ಶರಣರ ವಚನಗಳಲ್ಲಿ ಕಾನೂನು, ನ್ಯಾಯ, ಸಮಾನತೆ, ಸತ್ಯ, ಧರ್ಮ ಹಾಗೂ ಮಾನವೀಯ ಮೌಲ್ಯಗಳಿಗೆ ಮಹತ್ವ ನೀಡಲಾಗಿದೆ. ಅನ್ಯಾಯವನ್ನು ತಡೆಯುವುದು, ದುರ್ಬಲರನ್ನು ರಕ್ಷಿಸುವುದು ಮತ್ತು ಸಮಾಜದಲ್ಲಿ ಸಮಾನತೆಯನ್ನು ಸ್ಥಾಪಿಸುವ ನೈತಿಕ ಮಾರ್ಗವನ್ನು ಶರಣರು ತೋರಿಸಿಕೊಟ್ಟಿದ್ದಾರೆ” ಎಂದರು.

ದೇಶದ ಕಾನೂನುಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ನ್ಯಾಯಾಲಯಗಳಲ್ಲಿನ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸುವುದರ ಜೊತೆಗೆ, ಹಣ ಮತ್ತು ಸಮಯದ ಉಳಿತಾಯಕ್ಕಾಗಿ ಸಮಸ್ಯೆಗಳನ್ನು ರಾಜಿ-ಸಂಧಾನದ ಮೂಲಕ ಬಗೆಹರಿಸಿಕೊಳ್ಳಬೇಕು. ವಿಭಕ್ತ ಕುಟುಂಬ ವ್ಯವಸ್ಥೆಯಿಂದ ಹಲವು ಸಮಸ್ಯೆಗಳು ಹೆಚ್ಚುತ್ತಿವೆ. ಅರಿವಿನ ಕೊರತೆಯಿಂದ ವಿಚ್ಛೇದನ ಪ್ರಕರಣಗಳೂ ಹೆಚ್ಚಾಗುತ್ತಿವೆ. ಕುಟುಂಬಗಳಲ್ಲಿ ಹಿರಿಯರ ಮಾರ್ಗದರ್ಶನ ಹಾಗೂ ಶರಣರ ತತ್ವಗಳ ಪಾಲನೆಗೆ ಆದ್ಯತೆ ನೀಡುವ ಮೂಲಕ ಎಲ್ಲರೂ ಕೂಡಿ ಬಾಳುವ ವಾತಾವರಣ ನಿರ್ಮಿಸಬೇಕು ಎಂದು ಹೇಳಿದರು.

WhatsApp Image 2026 10 19 at 10.05.10 AM

ಸಾನಿಧ್ಯ ವಹಿಸಿದ್ದ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಆಶೀರ್ವಚನ ನೀಡಿ, “ಅಕ್ಕಮಹಾದೇವಿಯವರ ವಚನಗಳ ಮುಖ್ಯ ಸಂದೇಶವೆಂದರೆ ದೇಹ, ಸಂಪತ್ತು ಮತ್ತು ಲೌಕಿಕ ಸುಖಗಳು ಶಾಶ್ವತವಲ್ಲ; ಆತ್ಮದ ಅರಿವು ಮುಖ್ಯ ಎಂಬುದಾಗಿದೆ” ಎಂದು ತಿಳಿಸಿದರು.

ಸಂಗಮೇಶ್ವರ ಭಜನಾ ಮಂಡಳಿಯಿಂದ ವಚನ ಭಜನೆ ನಡೆಯಿತು. ಮಮತಾ ಭೂಸೆ ಸ್ವಾಗತಿಸಿದರು. ಪೂಜಾ ನಾಗೇಶ ಗಂಗು ನಿರೂಪಿಸಿದರು. ಆಕಾಶ ಮೊಳಕೇರಿ ವಚನ ಗಾಯನ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೀದರ ಪ್ರಾಯೋಜಕತ್ವದಲ್ಲಿ ನೃತ್ಯಾಂಗನ ನಾಟ್ಯ ಕಲಾ ಕೇಂದ್ರದ ವತಿಯಿಂದ ಪೂರ್ಣಚಂದ್ರ ಮೈನಾಳೆ ಅವರ ನಿರ್ದೇಶನದಲ್ಲಿ ಪ್ರಸ್ತುತಪಡಿಸಿದ ವಚನ ನೃತ್ಯಗಳು ಕಾರ್ಯಕ್ರಮದ ಆಕರ್ಷಣೆಯಾಗಿದ್ದವು.

WhatsApp Image 2026 10 10 at 6.59.31 PM 5
ಜಾಹೀರಾತು

ಬಿಡಿಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಕುರಕೋಟೆ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಭದ್ರಿನಾಥ ಪಾಟೀಲ, ಬಿಡಿವಿಸಿ ಕೋಶಾಧ್ಯಕ್ಷ ಶಿವರಾಜ ಶಾಶೆಟ್ಟಿ, ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಗುರುನಾಥ ಗಡ್ಡೆ, ನಿವೃತ್ತ ಎಇಇ ಮಲ್ಲಿಕಾರ್ಜುನ ಮೊಳಕೇರಿ, ಯಶಸ್ವಿ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕಿ ಕಾವೇರಿ ಪಾಟೀಲ, ಉದ್ಯಮಿ ಬಸವರಾಜ ಮುರುಡ, ಬೀದರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಅರ್ಜುನ ಕನಕ, ಉಪನ್ಯಾಸಕ ನರಸಿಂಗರಡ್ಡಿ ಗದಲೇಗಾಂವ, ಜಗನ್ನಾಥ ಕುಶನೂರೆ, ಮಂಗಲಾ ಬಿರಾದಾರ ಹಾಗೂ ಜಗದೀಶ ಮೂಲಗೆ ಉಪಸ್ಥಿತರಿದ್ದರು.

ಇದನ್ನೂ ಓದಿ : ಬೀದರ್‌ | ಅ.20ರಂದು ರೇಕುಳಗಿಯಲ್ಲಿ 70ನೇ ಧಮ್ಮಚಕ್ರ ಪ್ರವರ್ತನ ದಿನಾಚರಣೆ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | 22ನೇ ಶರಣ ತತ್ವ ಕಮ್ಮಟಕ್ಕೆ ಸಚಿವ ಎಂ.ಬಿ ಪಾಟೀಲರಿಗೆ ಆಹ್ವಾನ

ವಿಜಯಪುರದ ವೀರಶೈವ ಲಿಂಗಾಯತ ಸಾಂಸ್ಕೃತಿಕ ಭವನದಲ್ಲಿ ಅಕ್ಟೋಬರ್ 29ರಿಂದ ನವೆಂಬರ್ 1ರವರೆಗೆ...

ಬೀಳಗಿ | ಛಾಯಾಗ್ರಾಹಕರಿಗಾಗಿ ಆಕಾಡೆಮಿ ಸ್ಥಾಪಿಸಲು ವಿಠ್ಠಲ ಹಿರೇಮಠ ಆಗ್ರಹ

ಛಾಯಾಗ್ರಾಹಕರ ವೃತ್ತಿ ಭದ್ರತೆ, ಕುಟುಂಬದ ಕಲ್ಯಾಣ ಹಾಗೂ ಸರಕಾರದ ಸೌಲಭ್ಯಗಳನ್ನು ಒದಗಿಸಲು...

ಅಂದು ಬೆಂಬಲ, ಇಂದು ಪಶ್ಚಾತಾಪ: 2023ರ ಚುನಾವಣಾ ಆಯುಕ್ತರ ಕಾಯ್ದೆಗೆ ಬೆಂಬಲ ನೀಡಿ ತಪ್ಪು ಮಾಡಿದೆ ಎಂದ ಜಗನ್ ಮೋಹನ್ ರೆಡ್ಡಿ

ಆಂಧ್ರಪ್ರದೇಶದ ರಾಜಕಾರಣದಲ್ಲಿ ಮತ್ತೊಮ್ಮೆ ಭಾರೀ ಸಂಚಲನ ಮೂಡಿಸಿರುವ ಬೆಳವಣಿಗೆ ನಡೆದಿದೆ. ಮಾಜಿ...

ಯಾದಗಿರಿ | ಪ್ರಜಾಪ್ರಭುತ್ವದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

ಯುವಜನರು ಪ್ರಜಾಪ್ರಭುತ್ವದ ಆಶಯಗಳು ಹಾಗೂ ಸಂವಿಧಾನದ ಮೌಲ್ಯಗಳನ್ನು ಅರಿತುಕೊಂಡು ಅವುಗಳನ್ನು ತಮ್ಮ...